Showing posts with label ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ ಸುಂದರ ಕಾಯ shirigovinda vittala. Show all posts
Showing posts with label ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ ಸುಂದರ ಕಾಯ shirigovinda vittala. Show all posts

Monday, 6 September 2021

ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ ಸುಂದರ ಕಾಯ ankita shirigovinda vittala

 ankita ಶಿರಿಗೋವಿಂದವಿಠಲ 

ರಾಗ: [ಕಾಪಿ] ತಾಳ: [ಪೀಲು]


ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ 

ಸುಂದರ ಕಾಯ ಆನಂದದ ನಿಧಿಯ


ತಾಯಿಯಂದದಿ ನಮ್ಮ ಕಾಯುವ ಧಣಿಯಾ

ನ್ಯಾಯ ಸದ್ಗುಣಪೂರ್ಣ ಮಾಯಿಗಜ ಹರಿಯಾ 1

ಮಾಯಾ ರಮಣನ ನಾಮ ಗಾಯನ ಪರನ

ದಾಯಾದಿ ಕುಲವೈರಿ ಶ್ರೇಯ ಬಲಯುತನಾ 2

ನರರೂಪ ಧರಿಸಿದ ವಾನರÀ ಭಕ್ತವರನಾ

ವರಶೌರಿ ಪ್ರಿಯ ದೀನರ ಕಾಯುತಿಹನಾ 3

ಜನರನ ಪೊರೆವನೆಂದೆನುತ ಭೂಮಿಯಲಿ

ಜನಿಸಿದ ತನ್ನವನ್ನ ವನುತೆ ಸಹಿತದಲಿ. . (?)

ದುರಿತ ವನಕೆ ತಾ ಮರುತನಾಗಿಪ್ಪ

ಗರುವೆಂಬ ಗಿರಿಗೆ ಇವ ನಿರಂತರದಿ ಸುರಪಾ 5

ಭಕ್ತರ ಬಯಕೆ ಪೂರೈಪ ಸುರತರುವೆ

ಶಕ್ತ ವಿರಕ್ತ ಹರಿಭಕ್ತ ಮದ್ಗುರುವೆ 6

ಭುವನದಿಂ ದಾಟಿಸೆ ನೌಕವಾಗಿಹನಾ

ನವ ಭಕುತಿಯನೀವ ಕವಿಕುಲ ವರನಾ 7

ದಿವಿಜೇಶನಂತೆ ಪೃಥ್ವಿಯೊಳು ಮೆರೆವಾ

ಇವನೇ ಗತಿಯೆನೆ e್ಞÁನ ತವಕದಿ ಕೊಡುವಾ 8

ನಿಂದಿಪ ಜನರಲ್ಲಿ ಪೊಂದಿಪ ಪ್ರೇಮ

ವಂದಿಪ ಜನರಿಗೆ ಸತತ ಶ್ರೀರಾಮ 9

ಶ್ರೀನಿವಾಸನ ಪುತ್ರ ಪರಮ ಪವಿತ್ರಾ

e್ಞÁನಿ ಜನರ ಮಿತ್ರ ವಿಹಿತ ಚರಿತ್ರಾ 10

ನಷ್ಟ ತುಷ್ಟಿಗೆ ಅಂಜಾ ದುಷ್ಟರಿಗೆ ದೊರೆಯ

ಕಷ್ಟ ಕಳೆಯುವ ನಮ್ಮ ಕೃಷ್ಣ ಪಾರಿಜಾತ 11

ಪೊಳಲುರಿ ಸಖನಾ ಘನಪೊಳೆಯುವ ಪಾದಯುಗವಾ

ಘಳಿಗಿ ಬಿಡದಲೆ ನೋಡುತ ನಲಿಯುತಿರುವ 12

ಅಂದು ಈತನೇಯನ್ನ ಗುರುವೆಂಬಗೆ ರುದ್ರಾ

ಧುರದೊಳು ಭೀಮ ಗುರು ವಿಗತದಾರಿದ್ರ್ಯಾ 13

ಅನಿಮಿತ್ತ ಬಂಧು ಬ್ರಾಹ್ಮಣ ವಂಶಜಾ

ಅನಘಾತ್ಮ ಹರಿಭಕ್ತ ಜನಕಾ ಭವ ತ್ರಾತಾ  14

ತಪ್ಪು ನೋಡದಲೆ ಕಾಯುತಿಪ್ಪ ನಮ್ಮಪ್ಪ

ಸರ್ಪ ತಲ್ಪನ ಧ್ಯಾನದಿಪ್ಪ ಅಪ್ಪ 15

ಅರುಣಾಬ್ಜ ಚರಣತಲ ಬೆರಳು ಪಂಕ್ತಿಗಳಾ

ಸರಸಿಜ ಪೋಲ್ವ ಮುದ್ರತರ ಪಾದಯುಗಳಾ 16

ಇಳೆಯಾ ಸುರತತಿ ಪಾಪ ಕಳೆದ ಘನ ಪಾದ

ಒಲಿದು ಭಕ್ತರಿಗಿಷ್ಟ ಸಲಿಸುವ ಪಾದ 17

ಸಕಲ ರೋಗವ ಕಳೆವ ಅಕಳಂಕ ಪಾದ

ನಿಖಿಲೈಶ್ವರ್ಯದ ಸುಖದಾಯಕ ಪಾದ 18

ಹರಿಯಂತೆ ಹರನೊಲ್ ಸಾಸಿರನಯನನಂತೆ

ಶಿರಿಯಂತೆ ತೋರ್ಪ ಭಾಸ್ಕರನ ರೀತಿ 19

ಸುಳಿರೋಮಗಳುಳ್ಳ ಚಲುವ ಜಾನುಗಳಾ

ಎಳೆ ಬಾಳೆ ತೆರ ಊರು ಹೊಳೆವ ಸುಚೈಲ  20

ತಟಿತ ಸನ್ನಿಭವಾದ ಕಟಿಗಿಪ್ಪ ಸೂತ್ರ

ನಟಿಸಿಹವು ತ್ರಿವಳಿ ತಾವು ಪುಟಿದು ಉದರ 21

ಎದೆಯಲಿಪ್ಪುದÀು ನಮ್ಮ ಪದುಮೇಶನ ಮನೆಯು

ಒದಗಿ ಭಕ್ತರಿಗೆ ಕರುಣದಿ ಕಾಯ್ವ ಖಣಿಯ 22

ಹುತವಹನನಂತೆ ಭಾರತೀಕಾಂತನಂತೆ

ಚತುರಾಶ್ಯ ಈ ಕ್ಷಿತಿಯಂತೆ ಇಹನಂತೆ 23

ಹಸುವಿನಂದದಲಿಪ್ಪಾಗಸದ ಓಲಿಹನು

ವಸುಧಿಯೊಳಿಂದೊಮ್ಮೆ ವಸು ಎನಿಸಿದನಾ 24

ಭೂಧರನಂತೆ ವಸುಧರನಂತೆ

ಭೂಧರನಂತೆ ಸೋದರನಂತೆ 25

ಚಂದನ ಚರ್ಚಿತ ಸುಂದರ ರೂಪದಿಂದೊಪ್ಪುವ ಕಂಬುತೆರ 

ಕಂಧರಾಯುತನ ಬಂಧುರ ಭ್ರೂಲತಯುಗ ನಂದದ ಶಿರನಾ 26

ಕರೆದು ಭಕ್ತರಿಗಿಷ್ಟಗರಿಯುವ ಚೆಲ್ವಾ

ವರ ರೇಖೆಯುತ ಶಿರಕರದಾ ವೈಭವನಾ 27

ಮಂಗಳದಾಯಕ ಅಂಗೈಯುಗಳಾ

ಬಂಗಾರದುಂಗುರ ಇಟ್ಟಿಹ ಬೆರಳು 28

ಕೆಂದುಟಿ ಮೊದಲಾಗಿ ಛಂದಿಪ್ಪ ವದನಾ

ಪೊಂದಿದ ದಂತಗಳಿಂದೊಪ್ಪಿದಾ ರಚನಾ 29

ಹಸನಾದ ಮುಕುರದಂತೆಸೆವ ಗಲ್ಲಗಳಾ

ಬಿಸಜದಂತೆ ರಾಜಿಸುವ ನೇತ್ರಗಳಾ 30

ನಾಸಿಕದಡಿಲಿಪ್ಪ ಮೀಸಿ ದ್ವಂದ್ವಗಳಾ (?)

ದೇಶಾದಿ ಪಾಲ್ಮೂರು ವಾಸಿ ಕರ್ಣಗಳಾ 31

ಗಿಳಿಗೆ ವಾಚ್ಯಾಪದೊಳು ಹೊಳೆವಾ ಪುಚ್ಛಗಳು

ತಿಲಕಾ ಮುದ್ರೆ ಪುಂಢ್ರಗಳು ಉಳ್ಳ ಫಾಲಾ 32

ಹರಿಪಾದ ಜಲವನ್ನು ಧರಿಸಿದ ಶಿರವಾ

ಶಿರಿಗೋವಿಂದವಿಠಲನ್ನಡಿಗೆ ಎರಗುವಾ ಶಿರವಾ 33

***