Showing posts with label ಎಲ್ಲಿರುವನೋ ರಂಗನೆಂಬ ಸಂಶಯ ಬೇಡ ಎಲ್ಲಿ ಭಕ್ತರು purandara vittala ELLIRUVANO RANGA NEMBA SAMSHAYA BEDA ELLI BHAKTARU. Show all posts
Showing posts with label ಎಲ್ಲಿರುವನೋ ರಂಗನೆಂಬ ಸಂಶಯ ಬೇಡ ಎಲ್ಲಿ ಭಕ್ತರು purandara vittala ELLIRUVANO RANGA NEMBA SAMSHAYA BEDA ELLI BHAKTARU. Show all posts

Monday, 1 November 2021

ಎಲ್ಲಿರುವನೋ ರಂಗನೆಂಬ ಸಂಶಯ ಬೇಡ ಎಲ್ಲಿ ಭಕ್ತರು purandara vittala ELLIRUVANO RANGA NEMBA SAMSHAYA BEDA ELLI BHAKTARU



ಪುರಂದರದಾಸರು

ಎಲ್ಲಿರುವನೋ ರಂಗನೆಂಬ ಸಂಶಯ ಬೇಡ
ಎಲ್ಲಿ ಭಕ್ತರು ಕರೆದರಲ್ಲೆ ಒದಗುವನು ||ಪ||

ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು
ಬರೆದೋದಲವನ ಪಿತ ಕೋಪದಿಂದ
ಸ್ಥಿರವಾದಡಿ ಕಂಭದೊಳು ತೋರು ತೋರೆನಲು
ಭರದಿ ಬರಲದಗೆ ವೈಕುಂಠ ನೆರೆ ಮನೆಯೆ ||

ಪಾಪ ಕರ್ಮವ ಮಾಡಿದಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನನು ಕರೆಯ ಕೇಳಿ ರಕ್ಷಿಸೆ ಶ್ವೇತ
ದ್ವೀಪವೀ ಧರೆಗತಿ ಸಮೀಪದಲ್ಲಿಹುದೆ ||

ಕರಿರಾಜನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ಅತಿ ತ್ವರಿತದಿಂದ
ಕರುಣದಲಿ ಬಂಧನವ ಬಿಡಿಸಲಾಗಜರಾಜ
ನಿರುವ ಸರಸಿಗೆ ಅನಂತಾಸನವು ಮುಮ್ಮನೆಯೆ ||

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದೊದರೆ ಕೇಳಿ
ಭರದಿಂದ ಅಕ್ಷಯಾಂಬರವಿತ್ತ ಹಸ್ತಿನಾ-
ಪುರಿಗು ದ್ವಾರಾವತಿಗು ಕೂಗಳತೆಯೆ ||

ಅಣು ಮಹತ್ತುಗಳಲ್ಲಿ ಪರಿಪೂ‍ರ್ಣೆಂದೆನಿಸಿ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನಕೃಪಾನಿಧಿ ನಮ್ಮ ಪುರಂದರ ವಿಟ್ಠಲನು
ನೆನೆದವರ ಮನದೆಲ್ಲ ಇಹನೆಂಬ ಬಿರುದಿರಲು ||
****

ರಾಗ ಕಲ್ಯಾಣಿ. ಅಟ ತಾಳ (raga, taala may differ in audio)

Elliruvano ranganemba samsaya beda
Elli Baktaru karedaralle odaguvanu ||pa||

Tarala prahlada srihari visvamayanendu
Baredodalavana pita kopadinda
Sthiravadadi kambadolu toru torenalu
Baradi baraladage vaikuntha nere maneye ||

Papa karmava madidajamilana yamabataru
Kopadimdeleyutire bitiyinda
Ta putrananu kareya keli rakshise sveta
Dvipavi dharegati samipadallihude ||

Karirajanu negalu nungutire Bayadinda
Moreyidalu keli ati tvaritadinda
Karunadali bandhanava bidisalagajaraja
Niruva sarasige anantasanavu mummaneye ||

Kurupatiyu draupadiya sireyanu seleyutire
Taruni ha krushna emdodare keli
Baradimda akshayambaravitta hastina-
Purigu dvaravatigu kugalateye ||

Anu mahattugalalli paripurnendenisi
Gananeyillada mahamahimanenipa
Ganakrupanidhi namma purandara vitthalanu
Nenedavara manadella ihanemba birudiralu ||
***

pallavi

elliruvanO ranganemba samshaya bEDa elli bhaktaru karedharalle odaguvanu

caraNam 1

taraLa prahlAda shrIhari vishvamayanendu baredOdalavana pita kOpadinda
sthiravAdaDi kambhadoLu tOru tOrenalu bharadi baraladage vaikuNTha nere maneya

caraNam 2

pApa karmava mADida jamiLana yama bhaTaru kOpadindeLeyutire bhItiyinda
tA putranu kareya kELi rakSise shvEta tvIpavI dharegati samIpadallihude

caraNam 3

karirAjanu negaLu nungutire bhayadinda moreyiDalu kELi ati tvaritadinda
karuNdali bandhanava biDisalA gajarAja niruva sarasike anantAsanavu mummaneya

caraNam 4

gurupatiyu draupadiya sIreyanu seLeyutire taruNi hA krSNa endodare kELi
bharadinda akSayAmbaravitta hastinApurigu dvArAvatigu kUgaLateya

caraNam 5

aNu mahattugaLalli paripURNendenisi gaNaneyillada mahA mahimanenipa
ghana krpAnidhi nmma purandara viTTlanu nenedavara manadella ihanemba birudiralu
***

ಎಲ್ಲಿರುವನೋ ರಂಗನೆಂಬ ಸಂಶಯ ಬೇಡ |
ಎಲ್ಲಿ ಭಕುತರು ಕರೆದರಲ್ಲಿ ಬಂದೊದಗುವನು ಪ.

ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು |ಬರೆದೋದಲವನ ಪಿತ ಕೋಪದಿಂದ ||ಸ್ಥಿರವಾದೊಡೀ ಕಂಬದಲಿ ತೋರು - ತೋರೆನಲು |ಭರದಿ ಬರಲಾಗ ವೈಕುಂಠವಲ್ಲಿಹುದೊ ? 1

ಕುರುಪತಿಯು ದ್ರೌಪದಿಯ ಸೀರೆ ಸೆಳೆಯುತಿರೆ |ತರುಣಿ ಹಾ ಕೃಷ್ಣ ಎಂದೊದರೆಕೇಳಿ ||ಭರದಿಂದಲಕ್ಷಯಾಂಬರವೀಯೆ ಹಸ್ತಿನಾ |ಪುರವು ದ್ವಾರಾವತಿಗೆ ಕೂಗಳತೆಯೆ 2

ಕರಿರಾಜನನುನೆಗಳು ನುಂಗುತಿರೆ ಭಯದಿಂದ |ಹರಿಯೆ ಕಾಯೆಂದು ಮೊರೆಯಿಡಲುಕೇಳಿ ||ಕರುಣದಿಂ ಬಂಧನವ ಬಿಡಿಸಲಾ ಗಜರಾಜ - |ನಿರುವ ಸರಸಿಗೆ ಅನಂತಾಸನ ಮುಮ್ಮನೆಯೆ 3

ಪಾಪಕರ್ಮವ ಮಾಡಿದಜಮಿಳನ ಯಮಭಟರು ||ಕೋಪದಿಂದಲಿ ಸೆಳೆಯೆ ಭೀತಿಯಿಂದ ||ತಾ ಪುತ್ರನನು ಕರೆಯೆಕೇಳಿ ರಕ್ಷಿಸಿಶ್ವೇತ -ದೀಪವೀ ಧರೆಗೆ ಸಮೀಪವಾಗಿಹುದೆ ? 4

ಅಣು - ಮಹತ್ತುಗಳಲ್ಲಿ ಪರಿಪೂರ್ಣನೆಂದೆನಿಸಿ |ಎಣೆಯಿಲ್ಲದ ಮಹಾಗುಣಪೂರ್ಣನು ||ಘನಮಹಿಮನಾದ ಶ್ರೀ ಪುರಂದರವಿಠಲನು |ನೆನೆದವರ ಮನದೊಳಗೆ ಇಹನೆಂಬ ಬಿರುದುಂಟು 5
*******