Showing posts with label ವರದಾ ನದಿ ತೀರದೀ ಶೋಭಿಪ ಯತಿವರನ್ಯಾರೇ ಪೇಳಮ್ಮಾ venkatanatha dheerendra teertha stutih. Show all posts
Showing posts with label ವರದಾ ನದಿ ತೀರದೀ ಶೋಭಿಪ ಯತಿವರನ್ಯಾರೇ ಪೇಳಮ್ಮಾ venkatanatha dheerendra teertha stutih. Show all posts

Saturday 1 May 2021

ವರದಾ ನದಿ ತೀರದೀ ಶೋಭಿಪ ಯತಿವರನ್ಯಾರೇ ಪೇಳಮ್ಮಾ ankita venkatanatha dheerendra teertha stutih

dheerendra teertha rayara mutt yati 1785 stutih


ವರದಾ ನದಿ ತೀರದೀ ಶೋಭಿಪ -

ಯತಿವರನ್ಯಾರೇ ಪೇಳಮ್ಮಾ ।

ಗುರು ಸುಧೀಂದ್ರ ಸುತ ಗುರು-

ರಾಯರ ಸನ್ನಿಧಾನ ಪಾತ್ರಾ ।

ಧೀರೇಂದ್ರ ಯತಿ -

ನೋಡಮ್ಮಯ್ಯಾ ।।


ನಾರಾಯಣೋಪನಿಷ-

ದ್ವ್ಯಾಖ್ಯಾನ ಮನ್ಯುಸೂಕ್ತ ।

ಗುರುಗುಣಸತ್ವವನ -

ವಿಷಯವಾಕ್ಯ ಸಂಗ್ರಹ ।

ಗುರುಸ್ತೋತ್ರ ಅಂಭ್ರಣೀ-

ಸೂಕ್ತಕೆ ವ್ಯಾಖ್ಯಾನ ।

ವಿರಚಿಸಿದ ಧೀರೇಂದ್ರ -

ವಸುಧೇಂದ್ರ ಪುತ್ರ ಕಾಣಮ್ಮಾ ।।


ಧರಣಿಯಲಿ ಗುರುರಾಘವೇಂದ್ರ -

ವಂಶದಿ ಜನಿಸಿ । ಭೂ ।

ಸುರರ ವಂದ್ಯ ವಾದೀಂದ್ರ -

ಪೌತ್ರ ಕಾಣಮ್ಮಾ ।

ಗುರು ಜಯಾರ್ಯರ -

ಸುಧಾಕ್ಕೆ ವ್ಯಾಖ್ಯಾನ ರಚಿಸಿ ।

ಧರಣಿಯಲ್ಲಿ ಖ್ಯಾತರಾದ ಧೀರೇಂದ್ರ -

ಯತೀಂದ್ರನು ನಮ್ಮ -

ಧೀರ  ಶ್ರೀ ವೇಂಕಟನಾಥನ 

ದೂತನು ಕಾಣಮ್ಮ ।।

****