Showing posts with label ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ sirivatsankita. Show all posts
Showing posts with label ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ sirivatsankita. Show all posts

Thursday, 5 August 2021

ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ

ಸೊಲ್ಲ ಲಾಲಿಸಿ ಬೇಗ ಸಲಹು ದೇವಾ

ಕ್ಷುಲ್ಲಕರೂ ಯನ್ನ ಖುಲ್ಲ ಮಾನವನೆಂದು

ತಲ್ಲಣಗೊಳಿಸೋರು ಭವನಾವಾ ಪ


ಓಡಿಬಂದೆನೊ ನಿನ್ನ ನೋಡಬೇಕೆನುತಲಿ

ಗಾಡಿಕಾರದೇವ ತ್ವರೆಯಿಂದ ದೂಡಬ್ಯಾಡೊ ನನ್ನ

ರೂಢಿಯವಳಗೆ ನೀ ನೀಡು ನಿನ್ನಯ ಪಾದ ಮುಕುಂದಾ 1


ಅಭಯವ ನೀಡಯ್ಯಾ ಇಭರಾಜವರದನೆ

ಉಭಯ ಸುಖಪ್ರದ ನೀನೆಂದು

ಅಭಿನಮಿಸುವೆನಯ್ಯ ಶಬರಿಯಂಜಲನುಂಡು

ಬುಜೆಗಧವಕೊಂಡಿ ವಿಬುಧವಂದಿತನೆ2


ಮೆರೆಯುವಿ ನೀ ಬಲು ಉರಗರಾಜಶಾಯಿ

ವರವಿಪ್ರನಿಕರದಿಂ ಪೂಜೆಗೊಂಡು

ಥರಥರದಲಿ ನೀ ಪೊರಹಿದೆ ಭಕ್ತರ

ಮರೆಯಬ್ಯಾಡ ನನ್ನ ಶಿರಿವತ್ಸಾಂಕಿತನೆ 3

***