..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಹೇಳುತಿ ಕೇಳುತಿ ಏನಿಲ್ಲವೊ
ಆಳಿದಾ ಊಳಿಗನ ಬಾಳಿವಿನ್ನೇನೊ ಪ
ನೀರೊಳಗೆ ತಿರುಗಿ ನೀ ಭಾರ ಬೆನ್ನಲಿ ಪೊತ್ತು
ದೂರದೊಳು ಮುಳುಗಿ ಭೂಭಾರ ನೆಗಹಿ
ಧೀರ ಕರ್ಣವು ಮಂದವೊ ಹ್ಯಾಗೊ ತಿಳಿಯದು
ಘೋರ ದೈತ್ಯನ ಕೊಲ್ಲೊ ಚೀರಾಟವೊ 1
ಮೇದಿನಿ ಪತಿಯ ತುತಿಸುವ ಭರದಿ
ನೀ ಧನುರ್ವೇದಗಳನೋದಿಸುವ ನಿರ್ಭರವೊ
ಕಾದÀುವ ರಾಕ್ಷಸರ ಕುಲದ ಕೂಗ್ಯಾಟವೊ
ಮೋದದಿ ಗೋಪಿಯರ ಕೋಲಾಟವೊ 2
ಬತ್ತಲೆ ನಿಂತು ನುಡಿಯಲಿ ಬಾರದೊಯೆಂತೊ
ಹತ್ತಿದ ವಾಜಿಯು ನಿಲ್ಲದೇನೊ
ಇತ್ತ ಬಾರೊ ವಾಸುದೇವವಿಟ್ಠಲರೇಯ
ಮತ್ತೆ ಹೇಳೊ ನಿಲ್ಲೊ ಬಾಯೆಂತಲೆನ್ನ 3
***