Showing posts with label ಇನ್ಯಾಕೆ ದೇವಿ ಮುನಿಸು ಮಾತಾಡೇ ನಿನ್ನ ಹಿಡಿದ ಛಲ gurumahipati. Show all posts
Showing posts with label ಇನ್ಯಾಕೆ ದೇವಿ ಮುನಿಸು ಮಾತಾಡೇ ನಿನ್ನ ಹಿಡಿದ ಛಲ gurumahipati. Show all posts

Thursday, 2 September 2021

ಇನ್ಯಾಕೆ ದೇವಿ ಮುನಿಸು ಮಾತಾಡೇ ನಿನ್ನ ಹಿಡಿದ ಛಲ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಇನ್ಯಾಕೆ ದೇವಿ ಮುನಿಸು ಮಾತಾಡೇ| ನಿನ್ನ ಹಿಡಿದ ಛಲ ಗೆಲಿಸಿದ ಬಳಿಕ ಪ 

ಘನ ಮಳೆಗರವ ಜೀಮ್ಯೂತಮ್ಯಾಲೇ|ತಾ| ಮುನಿಪ ಕೋಪದಿ ಪೋಗುತಲಿಹ| ಮನ ದೊಳಗಿದ್ದ ಚಾತಕನಂತೆ ನಿನ್ನ ಮ್ಯಾಲೆ| ವನರುಹ ನೇತ್ರ ನಾ ಮುನಿದುದು ಕಾಣೆ 1 
ಸಂಗತಿಲ್ಲದೆ ನಿನ್ನಾಂಗ ನಟ್ಟುಳಿಯಿಂದ| ಭಂಗ ಗೊಂಡಿಹುದು| ತುಂಗ ಪಯೋಧರೆನ್ನಂಗ ತೋಷಿಸುವ ತಾ| ಲಿಂಗನ ಗೈಯೆ ನೀ ಮಂಗಳವದನೇ 2 
ನಿನ್ನಿಂದಾಗಲಿ ಮತ್ತ ನನ್ನಿಂದಾಗಲಿ ಇನ್ನು ಮುನ್ನಾದ ಮನದ ಗಂಟು ಬಿಟ್ಟು| ಪನ್ನಗವೇಣಿ ಮಾತಾಡೇ ಸದ್ಗುಣದ ಸಂ| ಪನ್ನೇ ಮಹಿಪತಿ ಸುತಗೊಲಿದ ಶ್ರೀದೇವಿ 3
***