ರಾಗ - : ತಾಳ -
ಪೋಗೆ ವಿಟ್ಠಲನ ಬಳಿಗೆ ಬ್ಯಾಗವನ ತಾರೆ ll ಪ ll
ತೀರಾ ನುಡಿವುತಿದೆ ಧೀರಾ ಕೋಗಿಲೆ l
ಸ್ವರ ಕರ್ಣ ಕಠೋರಾ l
ಮಾರಾ ಹರಿ ಬ್ಯಾಗ ಬಾರ
ಕೆಳದಿ ,ಅವ l
ಕ್ರೂರಾ ಎನ್ನ ಕೊಲ್ಲದೀರಾ ll 1 ll
ತಂದಾ ಉರಿವುತಲಿ ಬಂದಾ ಅಂದದರ l
ವಿಂದಾ ಬಾಣನ ನಡೆ ತಂದಾ l
ಮಂದಮಾರುತ ಮುಂದೆ ನಿಂದಾನಿವ ಕುಸುಮ l
ಗಂಧಾದಿಂದೆನ್ನ ಕೊಂದಾ ll 2 ll
ಧ್ಯೇಯಾ ಸುಜನರ ಸಹಾಯ ನಿಗಮ ಕುಲ l
ಗೇಯಾ ನಿರ್ಧೂತ ಹೇಯಾ l
ಪ್ರಿಯಾ ಹಯವದನರಾಯಾ ಸಖಿಯೆನ್ನ l
ಕಾಯಾ ಇನ್ನೇನುಪಾಯ ll 3 ll
***