Monday, 12 April 2021

ಪೋಗೆ ವಿಟ್ಠಲನ ಬಳಿಗೆ ಬ್ಯಾಗವನ ತಾರೆ ankita hayavadana

 ರಾಗ - : ತಾಳ - 


ಪೋಗೆ ವಿಟ್ಠಲನ ಬಳಿಗೆ ಬ್ಯಾಗವನ ತಾರೆ ll ಪ ll


ತೀರಾ ನುಡಿವುತಿದೆ ಧೀರಾ ಕೋಗಿಲೆ l

ಸ್ವರ ಕರ್ಣ ಕಠೋರಾ l

ಮಾರಾ ಹರಿ ಬ್ಯಾಗ ಬಾರ

 ಕೆಳದಿ ,ಅವ l

ಕ್ರೂರಾ ಎನ್ನ ಕೊಲ್ಲದೀರಾ ll 1 ll


ತಂದಾ ಉರಿವುತಲಿ ಬಂದಾ ಅಂದದರ l

ವಿಂದಾ ಬಾಣನ ನಡೆ ತಂದಾ l

ಮಂದಮಾರುತ ಮುಂದೆ ನಿಂದಾನಿವ ಕುಸುಮ l

ಗಂಧಾದಿಂದೆನ್ನ ಕೊಂದಾ ll 2 ll


ಧ್ಯೇಯಾ ಸುಜನರ ಸಹಾಯ ನಿಗಮ ಕುಲ l

ಗೇಯಾ ನಿರ್ಧೂತ ಹೇಯಾ l

ಪ್ರಿಯಾ ಹಯವದನರಾಯಾ ಸಖಿಯೆನ್ನ l

ಕಾಯಾ ಇನ್ನೇನುಪಾಯ ll 3 ll

***


No comments:

Post a Comment