Monday, 12 April 2021

ವೆಂಕಟಪತಿ ಶರಣು ಹಾ ಹಾ ವೆಂಕಟಪತಿ ಶರಣು ankita prasannavenkata


ವೆಂಕಟಪತಿ ಶರಣು ಹಾ ಹಾ ವೆಂಕಟಪತಿ ಶರಣು ll ಪ ll


ಕಮಲಸಂಭವನುತ ಚರಣ ಶುಭಕಮಲಾರಿಕುಲಭರಣ

ಕಮಲಸಖ ಸಂತಾರುಣ ಕಿರಣ ಕರುಣಾಸಂಪೂರ್ಣ ll 1 ll


ಸಿರಿ ಭೂದೇವಿಯರ ರಮಣ ದಿವ್ಯಸರಸಾಕ್ಷ ಖಗವರಗಮನ

ಸುರರಿಪುಗಣಾಸುರದಮನ ಭವಹರ ಸುರವರಸಮ ನಾಮ ನಮೋ ll 2 ll


ಶೇಷಗಿರಿಯತಟನಿಲಯ ಫಣಶೇಷಭೂಷಣ ಮಣಿ ನಿಲಯ

ಪ್ರಸನ್ವೆಂಕಟ ತಿರುಮಲೆಯೊಳಿಹ ಚೆಲುವ ಸ್ವಸುಖ ಭೋಕ್ತ ಭಕ್ತರಾಶ್ರಯ ll 3 ll

***


No comments:

Post a Comment