Showing posts with label ಕಂಟಕದ ಭವ ಹರಿಸೊ ಕರುಣಾ ಜಲಧಿ ನೆಂಟ ನೀನಾಗಿ ಹೃನ್ಮಂಟಪದೊಳಗೆ gopalakrishna vittala. Show all posts
Showing posts with label ಕಂಟಕದ ಭವ ಹರಿಸೊ ಕರುಣಾ ಜಲಧಿ ನೆಂಟ ನೀನಾಗಿ ಹೃನ್ಮಂಟಪದೊಳಗೆ gopalakrishna vittala. Show all posts

Sunday, 1 August 2021

ಕಂಟಕದ ಭವ ಹರಿಸೊ ಕರುಣಾ ಜಲಧಿ ನೆಂಟ ನೀನಾಗಿ ಹೃನ್ಮಂಟಪದೊಳಗೆ ankita gopalakrishna vittala

ಕಂಟಕದ ಭವ ಹರಿಸೊ ಕರುಣಾ ಜಲಧಿ

ನೆಂಟ ನೀನಾಗಿ ಹೃನ್ಮಂಟಪದೊಳಗೆ ಪ.


ಎಂಟಕ್ಷರ ನುತನೆ ಎಂಟು ರೂಪಾತ್ಮಕನೆ

ಎಂಟು ಮೂರು ತತ್ವ ನಿರ್ಮಿಸಿಹನೆ

ಎಂಟು ದಳದಲಿ ನಿಂತು ಎಂಟು ವಿಧ ಪ್ರೇರಿಸುತ

ಎಂಟು ದಿಕ್ಪತಿಗಳಿಂ ಸೇವೆ ಕೊಳುತಿಹನೆ 1

ಎಂಟು ವಿಧ ಕರ್ತೃವೆ ಎಂಟು ಭಾಗ್ಯಯುತನೆ

ಎಂಟು ಬಾಹು ಎಂಟು ಆಯುಧಧರನೆ

ಎಂಟು ಪತ್ನಿಯರಿಂದ ಎಂಟನೇ ಅವತಾರಿ

ನೆಂಟರೊಡನೆ ಜಗದ ಕಂಟಕರ ಸದೆದನೆ 2

ಎಂಟೆರಡು ಕಲೆಪೂರ್ಣ ವೆಂಕಟರಮಣನೆ

ಎಂಟು ವಿಧ ಮದಗಳನು ಭೇದಿಸುತಲಿ

ಎಂಟೆರಡು ಒಂದು ಇಂದ್ರಿಯ ನಿನ್ನ ಕಡೆ ಮಾಡಿ

ಭಂಟನೆನಿಸೆನ್ನ ಶ್ರೀ ಗೋಪಾಲಕೃಷ್ಣವಿಠಲ3

****