ಕೊಳಲನೂದಿದ ಕೃಷ್ಣ ನಳಿನನಾಭಾಎಳೆಯ ಗೋಗಳ ಕೂಡ ನಲಿದಾಡುವಾ ಪ
ಪುಂಡರೀಕಾಕ್ಷನು ಹಿಂಡು ಗೋಗಳ ಕೂಡೆಕಂಡಕಂಡವರನ್ನು ಕರೆಯುತಲಿಗುಂಡು ಗೋಲಿ ಬುಗುರಿ ಚಂಗುಳನೆ ಕಟ್ಟಿಕೊಂಡು ಪೋದರು ತಂಡ ತಂಡವಾಗಿ 1
ತಾಯಿ ಕಟ್ಟಿರುವಂಥಾ ಥೋರ ಬುತ್ತಿಯ ಗಂಟು ತೂಗುತ ಯಮುನೆಯ ತೀರದಲ್ಲಿತಂದ ಉಪ್ಪಿನಕಾಯಿ ತಿಂದ ಎಂಜಲವನ್ನುತೀರಿದವರಿಗೆಲ್ಲ ತಾ ಕೊಡುತಾ ಇಂದಿರೇಶನು 2
ಕೊಟ್ಟ ತಿಂದ ಉಪ್ಪಿನಕಾಯಿಆನಂದ ಬಟ್ಟರು ಗೋಪನಂದನರುಹಿಂದಿಯ ಪುಣ್ಯವು ಬಂದೊದಗಿತುಹರಿ ತಿಂದ ಎಂಜಲನಿತ್ತಾ ನಂದಬಾಲಾ 3
****