Showing posts with label ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ jagannatha vittala. Show all posts
Showing posts with label ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ jagannatha vittala. Show all posts

Saturday, 14 December 2019

ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ ankita jagannatha vittala

ಜಗನ್ನಾಥದಾಸರು
ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ
ಅರಿವೆ ಅನ್ನಾಭರಣ ದ್ರವ್ಯ
ಸರ್ವವು ಶ್ರೀ ವರನೆ ಎಂಬ ಪ

ನಿತ್ಯಾನಂದ ನಿತ್ಯe್ಞÁನಾನಿಮಿತ್ತ ಬಂಧು ಭಕ್ತರಿಗೆ
ಇತ್ತದ್ದೆ ಸಂಪತ್ತು ಎಂದು ಕೀರ್ತಿಸುತ್ತ ನರ್ತಿಸುವ 1

ದೋಷದೂತರನೊಬ್ಬ ಪೋಷ್ಯ ಪೋಷಕಾಧಾರ ಧೇಯ
ದೋಷಕಾರಿ ತ್ರೈ ಲೋಕ್ಯ ವಿಭೂಷಣ ವಿಭೂತಿದನೆಂಬ 2

ಎನ್ನ ಸ್ವಾಮಿ ಸರ್ವರಿಗೆ ಎನ್ನ ಬಿಂಬ ಎಲ್ಲರಿಗೆ
ಮಾನ್ಯ ಮಾನದನು ಜಗದ್ಭಿನ್ನನೆಂದು ತುತಿಸುತಿಪ್ಪ 3

ಜನನೀ ಜನಕ ಲಕ್ಷ್ಮೀ ನಾರಾಯಣನೆ ಪುತ್ರಮಿತ್ರನೆಂದು
ಕ್ಷಣಶ ಕೊಂಡಾಡುತನ್ಯರ ಗಣನೆ ಮಾಡದಿಪ್ಪ ನಿಜ4

ಹಾನಿ ಲಾಭ ಕೀರ್ತಿ ಅಪಮಾನ ಮಾನ ಪುಣ್ಯಪಾಪ
ಶ್ರೀನಿವಾಸಗರ್ಪಿಸಿ ಮದ್ದಾನೆಯಂತೆ ಚರಿಸುತಿಪ್ಪ 5

ಅನಂತ ಜೀವರಿಗಿನ್ನು ಅನಾದಿ ಅನ್ನದನಾಗಿ
ಅನಿರ್ವಿಣ್ಣ ನಾಮಕನೆಂದು ಸನ್ನುತಿಸಿ ಹಿಗ್ಗುತಿಪ್ಪ 6

ಸರ್ವ ಜೀವ ದೇಹಾಂತಸ್ಥ ಸರ್ವ ಜಗನ್ನಾಥ ವಿಠಲ
ಸರ್ವರೂಪ ಸರ್ವನಾಮ ಸರ್ವವೇದೋದಿತನೆಂಬೊ 7
*******