Showing posts with label ಎನಗಾಧಿಯೋ ಗುರು ಅಧಿಯೋ mahipati. Show all posts
Showing posts with label ಎನಗಾಧಿಯೋ ಗುರು ಅಧಿಯೋ mahipati. Show all posts

Wednesday, 1 September 2021

ಎನಗಾಧಿಯೋ ಗುರು ಅಧಿಯೋ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಎನಗಾಧಿಯೋ ಗುರು ಅಧಿಯೋ ಪ


ಒಬ್ಬಗೆ ಶ್ರುತಿಪುರಾಣಾದಿ ಒಬ್ಬಗೆ ಶ್ರೋತ್ರಾಧಿ ಒಬ್ಬಗೆ ಸ್ಮಾರ್ತಾಧಿ ಒಬ್ಬಗೆ ಜ್ಯೋತಿಷ್ಯದಾಧಿ ಮಿತವಾಕ್ಯದಾಧಿ ಶ್ರೀಪಾದದಾಧಿ 1 

ಒಬ್ಬಗೆ ವೃತ್ತಾಧಿ ಒಬ್ಬಗೆ ವಿತ್ತಾಧಿ ಒಬ್ಬಗೆ ಸ್ತುತಿಸುವದಾಧಿ ಯಂತ್ರ ಮಂತ್ರದಾಧಿ ಒಬ್ಬಗೆ ಶೈವಾಧಿ ಒಬ್ಬಗೆ ಶಕ್ತ್ಯಾಧಿ ಒಬ್ಬಗಾಗಮಯುಕ್ತಿ ಆಧಿ ಶ್ರೀಪಾದದಾಧಿ 2 

ಒಬ್ಬಗೆ ಹಟದಾಧಿ ಒಬ್ಬಗೆ ದಿಟದಾಧಿ ಒಬ್ಬಗೆ ತಟಕೂಪದಾಧಿ ಒಬ್ಬಗೆ ಪಟದಾಧಿ ಬಗೆ ಪಠಣ್ಯಾದಿ ಒಬ್ಬಗೆ ಮಠಮಾನದ್ಯಾಧಿ ಒಬ್ಬಗೆ ಕುಟಲಾಧಿ ಒಬ್ಬಗೆ ಜಟದಾಧಿ ಒಬ್ಬಗೆ ಫಟಿಸುವ ಆಧಿ ಶ್ರೀಪಾದದಾಧಿ 3 

ಒಬ್ಬಗೆ ರಸದಾಧಿ ಒಬ್ಬಗೆ ಕಸದಾಧಿ ಒಬ್ಬಗೌಷಧಮಣಿ ಆಧಿ ಒಬ್ಬಗೆ ಕೃಷದಾಧಿ ಒಬ್ಬಗೆ ದೇಶಿ ಆಧಿ ಒಬ್ಬಗೆ ಹುಸಿಹುಟ್ಟಣ್ಯಾಧಿ ಒಬ್ಬಗೆ ವೃಷದಾಧಿ ಒಬ್ಬಗೆ ದ್ವೇಷಾಧಿ ಒಬ್ಬಗೆ ಪ್ರಶಂಸದಾಧಿ ನಿಮ್ಮ ಶ್ರೀಪಾದದಾಧಿ 4 

ಮನಕೆ ಮರೆಯಾಗಿ ಜನಕ ಠವಿಸುವ ಅನೇಕಪರಿ ಲೋಕದಾಧಿ ಖೂನಕೆ ಬಾರದೆ ಙÁ್ಞನಕೆ ತಾನೊಂದು ಅನುಭವಕಿಲ್ಲದಾಧಿ ಉಂಟಾಗಿಹ್ಯದಾಧಿ ಮಹಿಪತಿಗೆ ಅಧಿ 5

***