Showing posts with label ಮಂಗಳ ಮಂಗಳ ಜಯಮಂಗಳಾ ಸ್ವಾಮಿ ಸರ್ವೋತ್ತಮಗೆ mahipati. Show all posts
Showing posts with label ಮಂಗಳ ಮಂಗಳ ಜಯಮಂಗಳಾ ಸ್ವಾಮಿ ಸರ್ವೋತ್ತಮಗೆ mahipati. Show all posts

Wednesday, 11 December 2019

ಮಂಗಳ ಮಂಗಳ ಜಯಮಂಗಳಾ ಸ್ವಾಮಿ ಸರ್ವೋತ್ತಮಗೆ ankita mahipati

ಭೈರವಿ ರಾಗ ತೀನ್ ತಾಳ

ಮಂಗಳ ಮಂಗಳ ಜಯಮಂಗಳಾ , ಶುಭ-
ಮಂಗಳ ಸ್ವಾಮಿ ಸರ್ವೋತ್ತಮಗೆ
ಸಹಸ್ರ ಮಂಗಳ ದೇವೋತ್ತಮಗೆ ||ಪ||

ಕೇಶವ ನಾರಾಯಣಗೆ ಮಂಗಳ
ವಾಸುದೇವ ಸುತ ಶ್ರೀಕೃಷ್ಣಗೆ ಮಂಗಳ
ಹೃಷಿಕೇಶ ಪುರುಷೋತ್ತಮಗೆ ಮಂಗಳ
ವಸುದೇವಸುತ ಶ್ರೀಕೃಷ್ಣಗೆ ಮಂಗಳ ||೧||

ಅಚ್ಯುತ ಜನಾರ್ದನಗೆ ಮಂಗಳ
ಮತ್ಸ್ಯಕೂರ್ಮವರಾಹಗೆ ಮಂಗಳ
ಸಚ್ಚಿದಾನಂದ ಶ್ರೀಧರಗೆ ಮಂಗಳ
ಮುಚಕುಂದ ವರದ ವಿಷ್ಣುಗೆ ಮಂಗಳ ||೨||

ಮಾಧವ ಮಧುಸೂಧನಗೆ ಮಂಗಳ
ಸಾಧು ಹೃದಯವಾಸಗೆ ಮಂಗಳ
ಅಧೋಕ್ಷಜ ಅನಿರುದ್ಧಗೆ ಮಂಗಳ
ಪದ್ಮನಾಭ ಪ್ರದ್ಯುಮ್ನಗೆ ಮಂಗಳ ||೩||

ಗರುಡವಾಹನ ಗೋವಿಂದಗೆ ಮಂಗಳ
ಉರಗಶಯನ ಉಪೇಂದ್ರಗೆ ಮಂಗಳ
ಹರಿ ದಾಮೋದರ ಸಮ್ಕರುಷಣಗೆ ಮಂಗಳ
ನಾರಸಿಂಹ ತ್ರಿವಿಕ್ರಮಗೆ ಮಂಗಳ ||೪||

ಪರಮಪಾವನ ಭಾರ್ಗವಗೆ ಮಂಗಳ
ಕರುಣಾಕರ ಶ್ರೀವಿಕ್ರಮಗೆ ಮಂಗಳ
ಧರೆಯೊಳು ಬೌದ್ಧ ಕಲ್ಕಿಗೆ ಮಂಗಳ
ತರಳ ಮಹಿಪತಿ ಸ್ವಾಮಿಗೆ ಮಂಗಳ ||೫||
*******