Showing posts with label ಸಕಲ ಕಾಲದಿ ಮಾಡಿದ ಕರ್ಮವು ಭಕುತಿಯಿಂದಲಿ vijaya vittala SAKALA KAALADI MAADIDA KARMAVU BHAKUTIYINDALI. Show all posts
Showing posts with label ಸಕಲ ಕಾಲದಿ ಮಾಡಿದ ಕರ್ಮವು ಭಕುತಿಯಿಂದಲಿ vijaya vittala SAKALA KAALADI MAADIDA KARMAVU BHAKUTIYINDALI. Show all posts

Wednesday, 6 October 2021

ಸಕಲ ಕಾಲದಿ ಮಾಡಿದ ಕರ್ಮವು ಭಕುತಿಯಿಂದಲಿ ankita vijaya vittala SAKALA KAALADI MAADIDA KARMAVU BHAKUTIYINDALI



ಸಕಲ ಕಾಲದಿ ಮಾಡಿದ ಕರ್ಮವು |
ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ ಪ

ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ |
ಸ್ತೋತ್ರಗಳ ಮಾಡಲಿ ಕೊಂಡಾಡಲಿ ||
ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿ |
ಹೋತ್ರವನು ಮಾಡಿ ಹಿತವಾಗಿ ನುಡಿಯಲಿ 1

ದಾನವನು ಮಾಡಲಿ ದಾಕ್ಷಿಣ್ಯವಾಗಲಿ |
ಮೌನವನು ಮಾಡಲಿ ಮಾತಾಡಲಿ ||
ಕಾನನವ ಸೇರಲಿ ಕಂಡಲ್ಲಿ ತಿರುಗಲಿ |
ಏನೇನು ಚರಿತೆಗಳ ಮಾಡುತಿರಲಿ 2

ಪುಣ್ಯವಾದರು ಲೇಸೆ ಪಾಪವಾದರು ಹರಿ |
ಮನ್ನಿಸಿ ತಾನೀಗ ತೆಗೆದುಕೊಂಡು ||
ತನ್ನ ಸಮೀಪದಿ ಇಟ್ಟುಕೊಂಡು ಅವನ |ಘನ್ನ ಮೂರುತಿ ವಿಜಯವಿಠ್ಠಲ ಪೊರೆವ 3
***

pallavi

sakala kalAdi mADida karmavu bhakutiyindali bandarpitavenni udupiyeli

caraNam 1

yAtregaLa mADali tIrthagaLa mIyali stOtragaLa mADali koNDADali
nEtradali nODi karamugidu namaskarisali hOtravanu mADi hitavAgi nuDiyali

caraNam 2

dAnavanu mADali dAkSiNyavAgali maunavanu mADali mAtADali
kAnanava sErali kaNDalli tiugalli EnEnu caritrgaLa mADutirali

caraNam 3

puNyavAdaru lEsE pApavAdaru hari mannisitAnEga trgadukoNDu
tanna samIpadi iTTukoNDu avana ghanna mUruti vijayaviThala poreva
***