Showing posts with label ಹೋದ್ಯಾ ಶೇಷಗಿರಿದಾಸ ಸುಲಭ ಹಾದಿಯನು ಮೆಟ್ಟಿ ನಮ್ಮನು vijaya vittala. Show all posts
Showing posts with label ಹೋದ್ಯಾ ಶೇಷಗಿರಿದಾಸ ಸುಲಭ ಹಾದಿಯನು ಮೆಟ್ಟಿ ನಮ್ಮನು vijaya vittala. Show all posts

Thursday, 17 October 2019

ಹೋದ್ಯಾ ಶೇಷಗಿರಿದಾಸ ಸುಲಭ ಹಾದಿಯನು ಮೆಟ್ಟಿ ನಮ್ಮನು ankita vijaya vittala

ವಿಜಯದಾಸ
ಹೋದ್ಯಾ ಶೇಷಗಿರಿದಾಸ ಸುಲಭ
ಹಾದಿಯನು ಮೆಟ್ಟಿ ನಮ್ಮನು ಭವಾಬ್ದಿಯೊಳಿಟ್ಟು ಪ

ಸಲಹಿದೆನು ಸಾಕಿದೆನು ಕಾಲಕಾಲಕೆ ನೋಡಿ
ತಿಳಿಸಿದೆನು ತತ್ವಗಳು ನಿರುತ ಬಿಡದೆ
ಬಳಿವಿಡಿದು ತಿರುಗಿ ಉಣಿಸಿದೆನು ಉಡಿಸಿದೆನು ವೆ-
ಗ್ಗಳವಾಗಿ ನೋಡಿ ಸುಖಿಸಿದೆನೊ ಮಾತಾಡಿ 1

ನಿನ್ನ ಮ್ಯಾಲಿನ ಕರುಣ ಕಮಲಾಕ್ಷ ವೇಗದಲಿ
ಎನ್ನಮ್ಯಾಲೆ ಇನ್ನು ಮಾಡಲಿಲ್ಲ
ಮುನ್ನೆ ಸಾಧನ ಪೂರ್ತಿ ನಿನಗಾಯಿತೇನೋ ಸಂ
ಪನ್ನಮತಿ ಉಳ್ಳವನೆ ಸಜ್ಜನ ಶಿರೋಮಣಿ 2

ಧಿಕು ಎನ್ನ ಜನುಮ ನಿನ್ನಂಥ ಪ್ರಿಯನ ಬಿಟ್ಟು |
ಅಕಟಕಟ ಭೂಮಿಯೊಳು ಬದುಕುವದೂ |
ಸಿರಿ ವಿಜಯವಿಠ್ಠಲ ನಿನ್ನ
ಭಕುತಿಗೆ ಮೆಚ್ಚಿ ತಡಮಾಡದಲೆ ಕರದೊಯ್ದು 3
********