Showing posts with label ಪಥ ನಡೆಯದಯ್ಯ ಪರಲೋಕ ಸಾಧನಕೆ ಮನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತ್ತಿರೆ neleyadikeshava. Show all posts
Showing posts with label ಪಥ ನಡೆಯದಯ್ಯ ಪರಲೋಕ ಸಾಧನಕೆ ಮನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತ್ತಿರೆ neleyadikeshava. Show all posts

Wednesday, 1 September 2021

ಪಥ ನಡೆಯದಯ್ಯ ಪರಲೋಕ ಸಾಧನಕೆ ಮನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತ್ತಿರೆ ankita neleyadikeshava

 ..

ಪಥ ನಡೆಯದಯ್ಯ ಪರಲೋಕ ಸಾಧನಕೆ - ಮ-ನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತ್ತಿರೆ ಪ


ತನುರೋಮ ಗಿಡ ವೃಕ್ಷ ತಳಿತ ಭುಜಲತೆ ಮೆರೆವಘನಸಿಂಹ ಗಜ ಮೃಗಗಳಿಂದೊಪ್ಪುವವನಿತೆಯರ ಕಾಯ ಕಾಂತಾರವೆಂಬ ಮಾರ್ಗದಿಸ್ತನದ್ವಯ ಕಣಿವೆಯ ಮಧ್ಯೆ ಸೇರಿಹನು 1


ಗಿಳಿ ನವಿಲು ಕೋಗಿಲೆ ವಸಂತ ಭ್ರಮರಂಗಳಬಲದೊಡನೆ ಮದನ ಮಾರ್ಗವ ಕಟ್ಟಲುಬಲವುಳ್ಳ ಭಕ್ತ ಮುನಿ ಸಂನ್ಯಾಸಿ ಯೋಗಿಗಳುಸುಲಿಸಿಕೊಂಡರು, ಕೆಲರು ಸಿಕ್ಕಿದರು ಸೆರೆಯ 2


ಕಾಳಗದೊಳಿದಿರಿಲ್ಲ ಸುರರು ದಾನವರು - ಕ-ಟ್ಟಾಳು ಮನ್ಮಥನ ಛಲದಂಕ ಬಿರುದುಪೇಳಲೆನ್ನಳವೆ ಬಡದಾದಿಕೇಶವರಾಯ-ನಾಳ ಸಂಗಡ ಹೋದರಾವ ಭಯವಿಲ್ಲ 3

* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

***