Showing posts with label ಒಲಿದು ಪಾಲಿಸಬೇಕು ನಿನ್ನ ನಂಬಿದ ನರನ raghunayaka. Show all posts
Showing posts with label ಒಲಿದು ಪಾಲಿಸಬೇಕು ನಿನ್ನ ನಂಬಿದ ನರನ raghunayaka. Show all posts

Monday, 6 September 2021

ಒಲಿದು ಪಾಲಿಸಬೇಕು ನಿನ್ನ ನಂಬಿದ ನರನ ankita raghunayaka

 ankita ರಘುನಾಯಕ/ರಘುರಾಮ (ಅನೇಕ)

ರಾಗ: ಕಾಂಬೋಜಿ ತಾಳ: ಝಂಪೆ


ಒಲಿದು ಪಾಲಿಸಬೇಕು ನಿನ್ನ ನಂಬಿದ ನರನ 


ಒಲಿಯದಿದ್ದರೆ ಯಾರ ಬೇಡಲಯ್ಯ  ಅ. ಪ


ಕಾಲಕಾಲಕೆ ನಿನ್ನ ನಾಮ ಭಜನೆಯ ಮಾಡೆ

ಹಾಳುಮನ ಚಂಚಲದಿ ಕೈಬಿಡುತಿದೆ

ಏಳು ಬೇಗನೆ ಗುರುವೆ ನೀ ನೋಡದಿರಲೆನ್ನ

ಬಾಳು ಹಾಳಾಗುವುದು ಕರುಣದೊರೆಯೆ  1

ಮೊರೆಹೊಕ್ಕವರನೆಲ್ಲನುದ್ದರಿಸುವುದೆ ಕೃತಿಯು

ಹೊರಗಾದೆ ನಾನೊಬ್ಬ ನಿನ್ನ ದಯೆಗೆ

ಕರುಣಾಳು ನೀನೆಂಬ ಬಿರುದ ಹೋಗಾಡದಿರು

ಪೊರೆಯನ್ನ ಶೀಘ್ರದಲಿ ರಾಘವೇಂದ್ರ  2

ನೊಂದೆನೈ ಹಲವುಪರಿ ಇನ್ನಿದನು ತೊಲಗಿಸುತ

ತಂದೆ ನೀ ಭವ ವೈದ್ಯ ಸಲಹೆನ್ನನು

ಇಂದಿರಾರಮಣ ರಘುಪತಿಪಾದ ಸುಮಭೃಂಗ

ಬಂದು ಪಾಲಿಸು ದಯದಿ ತಡಮಾಡದೆ  3

***