Showing posts with label ಹರಿಯೇ ಗತಿಯೆನ್ನಿರೈ ಶ್ರೀನರಹರಿಯೆ prasannavenkata. Show all posts
Showing posts with label ಹರಿಯೇ ಗತಿಯೆನ್ನಿರೈ ಶ್ರೀನರಹರಿಯೆ prasannavenkata. Show all posts

Monday, 18 November 2019

ಹರಿಯೇ ಗತಿಯೆನ್ನಿರೈ ಶ್ರೀನರಹರಿಯೆ ankita prasannavenkata

by ಪ್ರಸನ್ನವೆಂಕಟದಾಸರು
ಹರಿಯೇ ಗತಿಯೆನ್ನಿರೈ ಶ್ರೀನರಹರಿಯೆ ಶರಣೆನ್ನಿರೈ ಪ.

ಹರಿಪಾದಕಮಲವ ನಂಬದ ಮೂಢನು ಮನುಜನಲ್ಲದನುಜಶ್ರೀಹರಿಚರಿತಾಮೃತ ಕೇಳದೆ ಗರ್ವಿಪ ನರನು ಪಾಮರನÀು 1

ಹರಿಯ ಬಂಟರ ಅನುಸರಣೆಗಳ ಪರಿತ್ಯಾಗಿ ವೃದ್ಧಗೂಗಿಹರಿಮಹಿಮೆಯ ಹೊಗಳಾಡದ ಮಾತಿನ ಮುಖನು ಮಂಡೂಕನು 2

ಕೃಷ್ಣಗೆ ಪ್ರಿಯವ್ರತ ದಾನಕೆ ವಿಮುಖಾದ ಧನಪನವ ಕುಣಪಕೃಷ್ಣಾಕೃತಿಯ ಬಹಿರಂತದಿ ನೋಡದ ಜಾಣನವ ಕೋಣ 3

ಕೃಷ್ಣಗೆ ನಮಿಸದೆಸತಿಸುತರೊಳು ಭೂರಿತುಷ್ಟ ಹಿತನಷ್ಟ ಶ್ರೀಕೃಷ್ಣನವರ ಕಂಡೆರಗದ ವಿಷಯದಭೋಗಿಭವರೋಗಿ4

ಗೋವಿಂದ ಸರ್ವೋತ್ತಮನಿರೆ ಬೇರೆಂಬಜ್ಞಾನಿ ಮದ್ಯಪಾನಿಗೋವಿಂದನೊಳು ವಿಶ್ವಾಸಿಲ್ಲದ ಭಕ್ತಿಯ ಧೀರ ಶುದ್ಧಜಾರ5

ಗೋವಿಂದ ತೀರ್ಥ ಪ್ರಸಾದÀವ ನರಿಯದ ಬಲ್ಲನೆ ಕಳ್ಳನುಗೋವಿಂದನೊಪ್ಪದ ಮತವಿಡಿದವ ಮಹಿಗೆಕಕ್ಕಸರಕ್ಕಸ6

ಪ್ರಸನ್ನ ಮೂರುತಿ ವಿಧಿಭವವಂದ್ಯನ ಅರ್ಚಕ ಧನ್ಯರೆ ಮಾನ್ಯರುಪ್ರಸನ್ನವೆಂಕಟಪತಿ ಕಂಡುಂಡಾ ಭಕ್ತಿಯಾಸಕ್ತರೆ ಮುಕ್ತರು 7
*******