Audio by Mrs. Nandini Sripad
ಶ್ರೀ ವಿಜಯರಾಮಚಂದ್ರವಿಠಲರ ಕೃತಿ ಶ್ರೀ ಅಪ್ಪಾವರ ಮೇಲೆ ಗುರುಭಕ್ತಿ ಸುಳಾದಿ
ರಾಗ ಆನಂದಭೈರವಿ
ಧ್ರುವತಾಳ
ಗುರುಭಕ್ತಿ ಮಾಡು ಮನವೆ ವೈಷಮ್ಯ ನೈರ್ಘೃಣ್ಯ ಬಿಟ್ಟು ।
ನೀಛಲದಿ ನೀನಾಗುವಿ ದಾಸಶ್ರೇಷ್ಠ ಧರಣಿಯೊಳು
ನಿನಗೆ ನೀನೇ ತಿಳಿ ಗುರುಮಹಿಮೆಯನ್ನು ಗುಪಿತದಲ್ಲಿ
ಗುಣವಂತನಾ ಮಾಡಿ ಗುಣಪರಿಪೂರ್ಣ
ವಿಜಯರಾಮಚಂದ್ರವಿಠ್ಠಲನು
ಗುರುವಾಗಿ ತೋರುವನು ॥ 1 ॥
ಮಟ್ಟತಾಳ
ಆದಿಯಲ್ಲಿ ಗುರುಕರುಣ ಪಡೆಯಬೇಕು
ಪದಸ್ಥ ಸುರರ ಕೂಡಿ ಪಾಪ ಕಳೆಯಬೇಕು
ಪರಮಾದರದಿ ಗುರುಪಾದವ ಚಿಂತಿಸೆ
ಗುರು ವಿಜಯರಾಮಚಂದ್ರವಿಠ್ಠಲ
ಗುರುಲಘು ಪದಾರ್ಥದಲ್ಲಿ ಗೋಚರಿಸುವ ॥ 2 ॥
ತ್ರಿಪುಟತಾಳ
ಗುರುವೇ ಮುಖ್ಯನು ತಿಳಿಯೋ ವೃತ್ತಿಜ್ಞಾನದ ಗೋಳಾಟ ಕಳೆದು
ಗೋಪಾಲಕನ ಸಂದರ್ಶನಕ್ಕೆ ಗುರಿಯಾಗುವ
ಗುರುಭಜನೆಯ ದೃಢ ಭಕುತಿಯಲಿ ಮಾಡೆ
ಮಾಮನೋಹರ ನಮ್ಮ ವಿಜಯರಾಮಚಂದ್ರವಿಠಲ
ಗುರುವಂತರ್ಗತನಾಗಿ ಅಜ್ಞಾನವ ಕಳೆವ ॥ 3 ॥
ಅಟ್ಟತಾಳ
ಗುರುಸ್ಮರಣೆ ನಿರಂತರದಿ ಮಾಡೆ
ಇತರ ಸ್ಮರಣೆ ತಪ್ಪಿಸಿ ಹರಿಸ್ಮರಣೆ ಇತ್ತು
ಹರುಷ ಪಡಿಸುವರು
ಹಗಲಿರುಳು ಹರಿದಾಸರ ಸಂಗವಿತ್ತು
ಹಾನಿವೃದ್ಧಿಗಳು ಲೇಸು ಮಾಡಿಸುವರು
ಗುರುಸ್ಮರಣೆ ಮರೆತು ಗುಣವಂತನಾನೆಂದು ತಿಳಿದು
ಗಣಿತವಿಲ್ಲದ ಹಲವು ಕರ್ಮಗಳನ್ನು ಮಾಡಿದರೂ
ಹರಿ ಒಲಿಯ ಕಾಣೋ
ವಿಜಯರಾಮಚಂದ್ರವಿಠಲನ್ನ ಕಾಣಬೇಕಾದರೆ
ಮನುಜರು ಗುರುಚರಣದ್ವಂದ್ವಗಳ
ಪಾಡಿ ಕೊಂಡಾಡಬೇಕು ಸಂತತ ಬಿಡದೆ ॥ 4 ॥
ಆದಿತಾಳ
ಗುರುವೆ ತಾರಕನೆಂದು ತಿಳಿದು ನಲಿನಲಿದು ಪಾಡೆ
ಘನ ಸಂಸಾರದ ಘೋರಾರಣ್ಯದಿಂದ ಗೋಳಾಡಿಸದೆ
ಪಾರಗೈಸಿ ಪಂಚಬೇಧ ತಾರತಮ್ಯ ಜ್ಞಾನವರುಪಿ
ಗುರು ಪವಮಾನನ ಮತವೆ ಸಿದ್ಧವೆಂದು ತಿಳಿಸಿ
ಸಂಶಯಗಳ ಬಿಡಿಸಿ ಸಂಸಾರವೆಂಬೋ ಘೋರಾರಣ್ಯದಿಂದ
ತಳಮಳಗೊಳಿಸದೆ ಪಾರಗೊಳಿಸುವರು ಸರಸದಿಂದಲಿ
ಗುರು ಪವಮಾನನೊಡೆಯ ನಮ್ಮ ವಿಜಯರಾಮಚಂದ್ರವಿಠಲನ್ನ
ಉಪಾಸನೆಗೈಯುವ ಮಾರ್ಗವ
ಮಮತೆಯಿಂದಲಿ ಪೇಳಿ ಉದ್ಧಾರ ಮಾಡುವರು
ನಮ್ಮ ಗುರುರಾಯರು ॥ 5 ॥
ಜತೆ
ಈ ಪರಿ ತಿಳಿದು ನಲಿಯೇ ವಿಜಯರಾಮಚಂದ್ರವಿಠಲ
ಒಲುಮೆಯಿಂದಲಿ ಒಲಿವ ॥
*********
ರಾಗ ಆನಂದಭೈರವಿ ಧ್ರುವತಾಳ
ಗುರುಭಕ್ತಿ ಮಾಡು ಮನವೆ ವೈಷಮ್ಯ ನೈರ್ಘೃಣ್ಯ ಬಿಟ್ಟು ।
ಮಟ್ಟತಾಳ
ಆದಿಯಲ್ಲಿ ಗುರುಕರುಣ ಪಡೆಯಬೇಕು
ತ್ರಿಪುಟತಾಳ
ಗುರುವೇ ಮುಖ್ಯನು ತಿಳಿಯೋ ವೃತ್ತಿಜ್ಞಾನದ ಗೋಳಾಟ ಕಳೆದು
ಅಟ್ಟತಾಳ
ಗುರುಸ್ಮರಣೆ ನಿರಂತರದಿ ಮಾಡೆ
ಆದಿತಾಳ
ಗುರುವೆ ತಾರಕನೆಂದು ತಿಳಿದು ನಲಿನಲಿದು ಪಾಡೆ
ಜತೆ
ಈ ಪರಿ ತಿಳಿದು ನಲಿಯೇ ವಿಜಯರಾಮಚಂದ್ರವಿಠಲ
ಶ್ರೀ ವಿಜಯರಾಮಚಂದ್ರವಿಠಲರ ಕೃತಿ ಗುರುಭಕ್ತಿ ಸುಳಾದಿ
ರಾಗ ಆನಂದಭೈರವಿ ಧ್ರುವತಾಳ
ಗುರುಭಕ್ತಿ ಮಾಡು ಮನವೆ ವೈಷಮ್ಯ ನೈರ್ಘೃಣ್ಯ ಬಿಟ್ಟು ।
ನೀಛಲದಿ ನೀನಾಗುವಿ ದಾಸಶ್ರೇಷ್ಠ ಧರಣಿಯೊಳು
ನಿನಗೆ ನೀನೇ ತಿಳಿ ಗುರುಮಹಿಮೆಯನ್ನು ಗುಪಿತದಲ್ಲಿ
ಗುಣವಂತನಾ ಮಾಡಿ ಗುಣಪರಿಪೂರ್ಣ
ವಿಜಯರಾಮಚಂದ್ರವಿಠ್ಠಲನು ಗುರುವಾಗಿ ತೋರುವನು ॥ 1 ॥
ಮಟ್ಟತಾಳ
ಆದಿಯಲ್ಲಿ ಗುರುಕರುಣ ಪಡೆಯಬೇಕು
ಪದಸ್ಥ ಸುರರ ಕೂಡಿ ಪಾಪ ಕಳೆಯಬೇಕು
ಪರಮಾದರದಿ ಗುರುಪಾದವ ಚಿಂತಿಸೆ
ಗುರು ವಿಜಯರಾಮಚಂದ್ರವಿಠ್ಠಲ
ಗುರುಲಘು ಪದಾರ್ಥದಲ್ಲಿ ಗೋಚರಿಸುವ ॥ 2 ॥
ತ್ರಿಪುಟತಾಳ
ಗುರುವೇ ಮುಖ್ಯನು ತಿಳಿಯೋ ವೃತ್ತಿಜ್ಞಾನದ ಗೋಳಾಟ ಕಳೆದು
ಗೋಪಾಲಕನ ಸಂದರ್ಶನಕ್ಕೆ ಗುರಿಯಾಗುವ
ಗುರುಭಜನೆಯ ದೃಢ ಭಕುತಿಯಲಿ ಮಾಡೆ
ಮಾಮನೋಹರ ನಮ್ಮ ವಿಜಯರಾಮಚಂದ್ರವಿಠಲ
ಗುರುವಂತರ್ಗತನಾಗಿ ಅಜ್ಞಾನವ ಕಳೆವ ॥ 3 ॥
ಅಟ್ಟತಾಳ
ಗುರುಸ್ಮರಣೆ ನಿರಂತರದಿ ಮಾಡೆ
ಇತರ ಸ್ಮರಣೆ ತಪ್ಪಿಸಿ ಹರಿಸ್ಮರಣೆ ಇತ್ತು
ಹರುಷ ಪಡಿಸುವರು
ಹಗಲಿರುಳು ಹರಿದಾಸರ ಸಂಗವಿತ್ತು
ಹಾನಿವೃದ್ಧಿಗಳು ಲೇಸು ಮಾಡಿಸುವರು
ಗುರುಸ್ಮರಣೆ ಮರೆತು ಗುಣವಂತನಾನೆಂದು ತಿಳಿದು
ಗಣಿತವಿಲ್ಲದ ಹಲವು ಕರ್ಮಗಳನ್ನು ಮಾಡಿದರೂ
ಹರಿ ಒಲಿಯ ಕಾಣೋ
ವಿಜಯರಾಮಚಂದ್ರವಿಠಲನ್ನ ಕಾಣಬೇಕಾದರೆ
ಮನುಜರು ಗುರುಚರಣದ್ವಂದ್ವಗಳ
ಪಾಡಿ ಕೊಂಡಾಡಬೇಕು ಸಂತತ ಬಿಡದೆ ॥ 4 ॥
ಆದಿತಾಳ
ಗುರುವೆ ತಾರಕನೆಂದು ತಿಳಿದು ನಲಿನಲಿದು ಪಾಡೆ
ಘನ ಸಂಸಾರದ ಘೋರಾರಣ್ಯದಿಂದ ಗೋಳಾಡಿಸದೆ
ಪಾರಗೈಸಿ ಪಂಚಬೇಧ ತಾರತಮ್ಯ ಜ್ಞಾನವರುಪಿ
ಗುರು ಪವಮಾನನ ಮತವೆ ಸಿದ್ಧವೆಂದು ತಿಳಿಸಿ
ಸಂಶಯಗಳ ಬಿಡಿಸಿ ಸಂಸಾರವೆಂಬೋ ಘೋರಾರಣ್ಯದಿಂದ
ತಳಮಳಗೊಳಿಸದೆ ಪಾರಗೊಳಿಸುವರು ಸರಸದಿಂದಲಿ
ಗುರು ಪವಮಾನನೊಡೆಯ ನಮ್ಮ ವಿಜಯರಾಮಚಂದ್ರವಿಠಲನ್ನ
ಉಪಾಸನೆಗೈಯುವ ಮಾರ್ಗವ
ಮಮತೆಯಿಂದಲಿ ಪೇಳಿ ಉದ್ಧಾರ ಮಾಡುವರು
ನಮ್ಮ ಗುರುರಾಯರು ॥ 5 ॥
ಜತೆ
ಈ ಪರಿ ತಿಳಿದು ನಲಿಯೇ ವಿಜಯರಾಮಚಂದ್ರವಿಠಲ
ಒಲುಮೆಯಿಂದಲಿ ಒಲಿವ ॥
*************