ಹರಿ ಹರಿಯೆಂದು ನೆನೆಯೋ ಮರಿಯದೆ ಮನುಜ ಪ
ನಡೆಯುತ ನುಡಿಯುತ ನಡೆ ನುಡಿಯೊಳಗೆ ಪೊಡವಿಧರನ ಮಹಿಮೆಯ ಕೊಂಡಾಡುತ ಇಡವುತ ತೊಡವುತ ಮುಡವುತ ಮನದೊಳು ಬಿಡದೆ ಸ್ಮರಸೊ ನೀ ಅಡಿ ಗಡಿಗೊಮ್ಮೆ 1
ಉಣುತ ಉಡುತನ್ನೋದಕ ಕೊಳುತ ವನಿತಯರೊಡಗೂಡಿ ಘನಸುಖ ಪಡೆಯುತ ಅನಭದಿಂದಾನಂದದಿ ನೆನೆಯೋ ತನುಮನದೊಳು ನೀ ಕ್ಷಣಕ್ಷಣಕೊಮ್ಮೆ 2
ಏಳುತ ಕೂಡುತ ಮಲಗುತ ನೆನೆಯೋ ಹಲವು ಪರಿಲಿ ಶ್ರೀ ಹರಿ ಸರ್ವೋತ್ತಮ ನೆಲೆಗೊಂಡಿರೋ ಮಹಿಪತಿ ನಿಜನಾಮವ ಸಲಹುತ ಸ್ವಾಮಿ ಶ್ರೀಗುರು ಶ್ರೀಪತಿಯ 3
****