Showing posts with label ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿ shyamasundara. Show all posts
Showing posts with label ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿ shyamasundara. Show all posts

Wednesday 1 September 2021

ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿ ankita shyamasundara

kruti ಶ್ಯಾಮಸುಂದರ (ಮಣಿಧಾಳ್ ದೇಸಾಯಿಯವರು)

ರಾಗ: ಮಧ್ಯಮಾವತಿ/ಭೈರವಿ ತಾಳ: ಆದಿ/ಝಂಪೆ


ಸ್ಮರಿಸುವೆನು ಗುರುರಾಯ ವರಮಂತ್ರಪುರಾಧಿಪ

ಪೊರೆಯೊ ಎನ್ನನು ಜೀಯ ತವಮಹಿಮೆ ವರ್ಣಿಸ-

ಲರಿಯೆ ಮುರಹರಪ್ರಿಯ ಅಧಮಾಧಮನು ಮಮ-

ಪರಿಯ ನೀ ಬಲ್ಲೆಯಯ್ಯ ತೋರಯ್ಯ ದಯ


ವರದಚರಿತೆಯ ಅರುಹುವದಕೆ 

ವರವಾಕ್ಸರಣಿಯನು ಪಾಲಿಸಿ 

ನಿರುತ ಹರಿಗುರುಚರಣದಲಿ ರತಿ 

ತ್ವರಿತ ಕರುಣಿಸು ರಾಘವೇಂದ್ರನೆ ಅ.ಪ


ಹಿಂದೆ ಕೃತಯುಗದಲ್ಲಿ ಪ್ರಹ್ಲಾದನಾಮದಿ

ತಂದೆ ಹಿರಣ್ಯಕನಲ್ಲಿ ಸರ್ವೋತ್ತಮನು ಹರಿ

ದ್ವಂದ್ವ ಕರ್ಮವನಲ್ಲಿ ಅರ್ಪಿಸಲು ಮಹದಾ-

ನಂದ ಪೊಂದುವರಲ್ಲಿ ಎಂದು ಪೇಳುತಲಿ

ಮಂದ ದೈತ್ಯವನಂದಮಾತಿಗೆ 

ಬಂಧನಾದಿಗಳಿಂದಶಿಕ್ಷಿಸೆ 

ಬಂದದುರಿತವನಂದು ಕಳೆದಾ-

ಕಂದನನು ಹರಿಪೊರೆಯೆ ದಿತಿಜನು

ಒಂದು ತಿಳಿಯದೆ ಮಂದಿರದಿ ಗೋ-

ವಿಂದನೆಲ್ಲಿಹನೆಂದು ಕೇಳಲು 

ಮಂದರೋದ್ಧರನಿಲ್ಲದಿಹ ಸ್ಥಳ

ಒಂದು ಇಲ್ಲವೊ ಎಂದು ಸಾರಿದೆ

ತಂದುತೋರಿಸು ಸ್ತಂಭದಲಿ ತವ 

ಇಂದಿರಾಪತಿಯ ಎಂದು ಗರ್ಜಿಸೆ 

ಕಂದನಾಡಿದ ಮಾತುಗಳನು ನಿಜ-

ವೆಂದು ನರಹರಿ ಬಂದು ಪೊರೆದುದ 1

ಶ್ರೀಶನಾಜ್ಞೆಯವಹಿಸಿ ದ್ವಿತೀಯಾವತಾರದಿ

ವ್ಯಾಸರಾಯರೆಂದೆನಿಸಿ ಬ್ರಹ್ಮಣ್ಯರÀಲಿ ಸಂ-

ನ್ಯಾಸವನುಸ್ವೀಕರಿಸಿ ಸರ್ವಜ್ಞ ಶಾಸ್ತ್ರಾ-

ಭ್ಯಾಸವನುಪೂರೈಸಿ ವ್ಯಾಸತ್ರಯವರಚಿಸಿ 

ದೇಶದೇಶಗಳನ್ನು ಚರಿಸುತ

ಆ ಸಮಸ್ತ ಕುವಾದಿಗಳ ಮತ 

ನಾಶಗೊಳಿಸಿ ರಮೇಶ ಶ್ರೀವೆಂಕ-

ಟೇಶನನು ಬಹು ದಿನವು ಪೂಜಿಸಿ

ವಾಸಿಸುತ ಗಜರಾಮಪುರದ-

ಧೀಶರಾಯನ ಕುಹಯೋಗವ

ನಾಶಗೊಳಿಸುತ ಕನಕ ಪುರಂದರ 

ದಾಸರಿಂದೊಡಗೂಡಿ ಕೃಷ್ಣನು-

ಪಾಸನೆಯ ಭಕ್ತಿಯಲಿಗೈಯುತ 

ವಾಸುದೇವನ ಶಿಲ್ಪಶಾಸ್ತ್ರದ

ಶಾಸನಕೆ ಪ್ರತಿಯಾಗಿ ನಿಲ್ಲಿಸಿ 

ತೋಷಿಸಿದ ಸೌಭಾಗ್ಯ ವೈಭವ 2

ಮದನಜನಕನದೂತ ವಿಜಯೀಂದ್ರಯತಿ ಕರ-

ಪದುಮಸಂಭವಜಾತ ಶ್ರೀ ರಾಘವೇಂದ್ರ ಸು-

ಪದವ ಪಡೆದ ಪ್ರಖ್ಯಾತ ಜಯತೀರ್ಥಮುನಿಕೃತ

ಸುಧೆಗೆ ಪರಿಮಳ ಗ್ರಂಥ ರಚಿಸಿ ಮೆರೆದಾತ

ಬಧಿರ ಪಂಗು ಮೂಕಾಂಧ ವ್ಯಂಗರು 

ವಿಧವಿಧದ ಘನರೋಗಗ್ರಸ್ತರು

ಸದಯ ನೀ ಗತಿಯೆಂದು ಸೇವಿಸೆ 

ತ್ರಿದಶಭೂರುಹದಂತೆ ಸಲಹುವಿ

ಕುಧರದೇವನದಿವ್ಯರದನಜ 

ನದಿಯತೀರದಿ ಮೂಲರಘುಪತಿ

ಪದವ ಪೂಜಿಸುತಲಿ ಸಜೀವದಿ 

ಮುದದಿ ವೃಂದಾವನಪ್ರವೇಶಿಸಿ

ಪದುಮನಾಭ ಶ್ರೀಶ್ಯಾಮಸುಂದರ 

ಮಧು ವಿರೋಧಿಯ ಧ್ಯಾನಿಸುತ ಸಿರಿ

ಸದನನನು ಒಲಿಸುತ್ತ ಕರುಣಾ 

ನಿಧಿಯೆ ಭಜಕರ ಪೊರೆವ ಮಹಿಮೆಯ 3

***



ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿ ಪ


ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ

ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ

ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ

ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ

ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ

ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ

ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ

ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ

ನಂದ ಪೊಂದುವರಲ್ಲಿ ಎಂದು ಪೇಳುತಿರೆ

ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ

ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ

ಕಂದನನು ಹರಿಪೊರೆಯೆ ದಿತಿಜನು

ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ

ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ

ವಂದೂ ಇಲ್ಲವೂ ಎಂಂದು ಸಾರಿದೆ

ತಂದು ತೋರಿಸು ಸ್ತಂಭದಲಿ ತವ

ಇಂದಿರಾಪತಿಯೆಂದು ಗರ್ಜಿಸೆ

ಕಂದನಾಡಿದ ಮಾತುಗಳನು ನಿಜ

ವೆಂದು ನರಹರಿ ಪೊರೆದೆ 1


ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ

ವ್ಯಾಸರಾಯನು ಎನಿಸಿ ಬ್ರಹ್ಮಣ್ಯರÀಲಿ ಸ

ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ

ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ

ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ

ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ

ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ

ನಾಶಗೊಳಿಸುತ ಕನಕ ಪುರಂದರ ದಾಸರಿಂದೊಡಗೂಡಿ

ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ

ವಾಸುದೇವನ ಶಿಲ್ಪ ಶಾಸ್ತ್ರದ

ಶಾಸನಕೆ ಪ್ರತಿಯಾಗಿ ನಿಲ್ಲಿಸಿ

ತೋಷಿಸಿದ ಸೌಭಾಗ್ಯ ವೈಭವ 2


ಮದನ ಜನಕನ ದೂತ ವಿಜಯೀಂದ್ರ ಯತಿಕರ

ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು

ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ

ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ

ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು

ಸದಯ ನೀಗತಿಯೆಂದು ಸೇವಿಸೆ

ತ್ರಿದಶ ಭೂರುಹದಂತೆ ಸಲಹುವಿ

ಕುಧರ ತೀರದಿ ಮೂಲ ರಘುಪತಿ

ಪದವ ಪೂಜಿಸುತಲಿ ಸಜೀವದಿ

ಮುದದಿ ವೃಂದಾವನ ಪ್ರವೇಶಿಸಿ

ಪದುಮನಾಭ ಶ್ರೀ ಶಾಮಸುಂದರ

ಮಧು ವಿರೋಧಿಯನು ಧ್ಯಾನಿಸುತ ಶಿರಿ

ಸದನನು ವಲಿಸುತ್ತ ಕರುಣಾ

ನಿಧಿಯು ಭಜಕರ ಪೊರೆವ ಮಹಿಮೆಯ 3

***