Showing posts with label ವಂದನೆ ಮಾಡಿರೈ ಯತಿಕುಲಚಂದ್ರನ ankita rangavittala jitamitra stutih. Show all posts
Showing posts with label ವಂದನೆ ಮಾಡಿರೈ ಯತಿಕುಲಚಂದ್ರನ ankita rangavittala jitamitra stutih. Show all posts

Friday, 27 December 2019

ವಂದನೆ ಮಾಡಿರೈ ಯತಿಕುಲಚಂದ್ರನ ankita rangavittala jitamitra stutih

ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ | ಪ |

ಬಂದ ದುರಿತಗಳ ಹಿಂದೆ ಕಳೆದು ಆ- 
ನಂದ ಪಡುವ ವಿಭುದೇಂದ್ರ ಕರೋಧ್ಭವನ || ಅ.ಪ. ||

ರಘುಕುಲವರಪುತ್ರ ರಾಮನ ಚರಣ 
ಕರುಣಾಪಾತ್ರನಿಗಮೋಕ್ತಿಯ ಸೂತ್ರ ಪಾಠವ 
ಪಠಿಸುವಸುಗುಣ ಜಿತಾಮಿತ್ರ ನಗಧರ ಶ್ರೀ 
ಪನ್ನಗಶಯನನ ಗುಣಪೊಗಳುವ 
ಅಪಾರ ಅಗಣಿತ ಮಹಿಮರ || 1 ||

ವರಮಹಾತ್ಮೆ ತಿಳಿಸಿ ಮೊದಲಿಂದೀ 
ಪರಿಯಂದದಿಚರಿಸಿ ನಿರುತ ಮನವ ನಿಲಿಸಿ 
ಶ್ರೀಹರಿ ಕರಿವರದನ ಒಲಿಸಿದರೆ ಜನರಿಗೆ 
ಅರಿಯದೆ ಮರೆಯಾಗುತ ಹರುಷದಿ 
ಗೋನದ ತರವಲ್ಲಿರುವವರ || 2 ||

ಮುದದಿ ಕೃಷ್ಣಾ ತಟಿಯ ಮಧ್ಯದಿ 
ಸದನದ ಪರಿಯಸದಮಲ ಯತಿವರ್ಯ 
ತಪಮೌನದಲಿಇದ್ದು ದ್ರುತ ಕರಿಯಕಾರ್ಯ 
ಒದಗಿ ನದಿಯು ಸೂ -ಸುತ ಬರಲೇಳು 
ದಿನಕುದಯಾದವರ ಸುಪದ ಕಮಲಂಗಳ || 3 ||

ಮಾಸ ಮಾರ್ಗಶೀರ್ಷಾರಾಧನೆಗಶೇಷದಿನ 
ಅಮಾವಾಸ್ಯ ದಾಸರು ಪ್ರತಿವರುಷ 
ಮಾಳ್ಪರುಲೇಸೆನಲು ಶ್ರಿತಿಗೋಷ ಕಾಶಿಯ ಕ್ಷೇತ್ರ 
ಈ ಸ್ಥಳ ಮಿಗಿಲೈದಾಸರಿಗೆ ಭೂಸುರ ಪದಗಳ || 4 ||

ಮಧ್ವಶಾಸ್ತ್ರ ಗ್ರಂಥಸಾರದ ಪದ್ಧತಿ 
ತಿಳಿಸಿದಂಥರುದ್ರವಂದ್ಯ ಮೂರುತಿ ರಂಗವಿಠಲ 
ಪದ ಪದ್ಮಾರಾಧಕ ಪ್ರಸಿದ್ಧ ಮುನೀಂದ್ರರ || 5 ||
*********

ಶ್ರೀ ಶ್ರೀಪಾದರಾಜರ ಮಾತುಗಳಲ್ಲಿ.... "
ರಾಗ : ಹಿಂದೋಳ ತಾಳ : ಆದಿ
ವಂದನೆ ಮಾಡಿರೈ ಯತಿಕುಲ
ಚಂದ್ರನ ಪಾಡಿರೈ ।। ಪಲ್ಲವಿ ।।

ಬಂದ ದುರಿತಗಳ
ಹಿಂದೆ ಕಳೆದು । ಆ ।
ನಂದ ಪಡುವ ವಿಬು-
ಧೇಂದ್ರ ಕರೋದ್ಭವರ ।। ಅ. ಪ ।।

ರಘುಕುಲ ವರ ಪುತ್ರ ರಾಮನ -
ಚರಣ ಕರುಣಾ ಪಾತ್ರ ।
ನಿಗಮೋಕ್ತಿಯ
ಸೂತ್ರ ಪಾಠ ಪಠಿಸುವ ।
ಸುಗುಣ ಜಿತಾಮಿತ್ರ ।।
ನಗಧರ ಶ್ರೀ ಪನ್ನಗ -
ಶಯನನ ಗುಣ ।
ಪೊಗಳುವ ಅಪಾರ -
ಅಗಣಿತ ಮಹಿಮರ ।। ಚರಣ ।।

ವರ ಮಹಾತ್ಮೆ ತಿಳಿಸಿ -
ಮೊದಲಿಂದೀ ।
ಪರಿಯಂದದಿ ಚರಿಸಿ ।
ನಿರುತ ಮನವ -
ನಿಲಿಸಿ ಶ್ರೀ ಹರಿ ।।
ಕರಿ ವದನನ ಒಲಿಸಿ ।
ಧರೆ ಜನರಿಗೆ ಅರಿಯದೆ -
ಮರೆಯಾಗುತ ।
ಹರುಷದಿ ಗೋನದ -
ತರುವಲ್ಲಿರುವರ ।। ಚರಣ ।।

ಮುದದಿ ಕೃಷ್ಣಾ ತಟಿಯ ।
ಮಧ್ಯದಿ ಸದನದ -
ಈ ಪರಿಯ ।
ಸತದಾಮಲ -
ಯತಿವರ್ಯ ।।
ತಪ ಮೌನದಲಿ -
ಇದ್ದುದನರಿಯ ।
ಓದುಗಿ ನದಿಯು
ಸೂಸುತ ಬರಲೇಳು ದಿನ ।
ಕುದಯರಾದವರ ಸುಪದ
ಕಮಲಂಗಳ ।। ಚರಣ ।।

ಮಾಸ ಮಾರ್ಗ-
ಶೀರ್ಷಾರಾಧನೆಗ ।
ಶೇಷ ದಿನ ಅಮಾವಾಸ್ಯ ।
ದಾಸರು ಪ್ರತಿ ವ-
ರುಷ ಮಾಳ್ಪರು ।।
ಲೇಸೆನಲು ಶ್ರೀತಿಗೋಷ ।
ಕಾಶಿಯ ಕ್ಷೇತ್ರಕೆ -
ಈ ಸ್ಥಲ ಮಿಗಿಲೈ ।
ದಾಸ ಜನಕೆ ಭೂರುಹ
ಯತಿ ಪದಗಳ ।। ಚರಣ ।।

ಮಧ್ವ ಶಾಸ್ತ್ರ ಗ್ರಂಥ ಸಾರದ ।
ಪದ್ಧತಿ ತಿಳಿದಂಥ ।
ಅದ್ವೈತ ಪಂಥ ಮುರಿದು ।।
ಮತ ಉದ್ಧರಿಸುವಂಥ ।
ರುದ್ರ ವಂದ್ಯ ಮೂರುತಿ -
ರಂಗವಿಠ್ಥಲನ ಪದ ।
ಪದ್ಮಾರಾಧಕ ಪ್ರಸಿದ್ಧ -
ಮುನೀಂದ್ರರ ।। ಚರಣ ।।
***