Showing posts with label ಗೋಕುಲದ ಗೋಪಿಯರದೆಷ್ಟು ಧನ್ಯರೋ purandara vittala. Show all posts
Showing posts with label ಗೋಕುಲದ ಗೋಪಿಯರದೆಷ್ಟು ಧನ್ಯರೋ purandara vittala. Show all posts

Thursday, 5 December 2019

ಗೋಕುಲದ ಗೋಪಿಯರದೆಷ್ಟು ಧನ್ಯರೋ purandara vittala

ಪುರಂದರದಾಸರು
ಗೋಕುಲದ ಗೋಪಿಯರದೆಷ್ಟು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ ಪ

ಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗುಜಾವದಿ ಮೊಸರ ಕಡೆವಾಗಲು 1

ನಡೆವಾಗ ನುಡಿವಾಗ ಭೋಜನವ ಮಾಡುವಾಗ |ಉಡುವಾಗ ಆಭರಣ ಇಡುವಾಗಲು ||ಮುಡಿವಾಗ ಮಲ್ಲಿಗೆ ಉಯ್ಯಲೆಯನಾಡುವಾಗ |ಅಡಿಗಡಿಗೆ ತಾಂಬೂಲ ಮೆಲುವಾಗಲು 2

ಪರಿಪರಿ ರಾಗದಿಂದಲಿ ಪರಿಪರಿ ಮಾತಿನಿಂದ |ಪರಿಪರಿ ಗೀತಪ್ರಸಂಗದಿಂದ ||ಪರಿಪೂರ್ಣನಾದ ಶ್ರೀ ಪುರಂದರವಿಠಲನ |ಹಿರಿದಾಗಿ ಮನದೊಳಗೆ ಸ್ಮರಿಸುತಿಹರು 3
***

pallavi

gOkulada gOpiyaradEsu dhanyarO shrIkAntananurAgadali pADutiharo

caraNam 1

kuLitu karevAga nintu kaLavegaLa kuTTuvAga taLisAraNi sammArjisuvAga
aLuva makkaLa toTTiloLiTTu tUguvAga beLagu jAvadi mosara kaDevAgalu

caraNam 2

naDevAga nuDivAga bhOjanava mADuvAga uDuvAga AbharaNa iDuvAgalu
muDivAga mallige uyyaleyavADuvAga aDigaDige tAmbUla meluvAgalu

caraNam 3

pari pari rAgadindali pari pari mAtininda pari pari gIta prasangadinda
paripUrNa nAda shrI purandara viTTalana haridAgi manadoLage smarisutiharu
***