Showing posts with label ತರುಳ ಪ್ರಹ್ಲಾದನ್ನ ದುರುಳ ಮಾತುಗಳಿಂದ gurujagannatha vittala. Show all posts
Showing posts with label ತರುಳ ಪ್ರಹ್ಲಾದನ್ನ ದುರುಳ ಮಾತುಗಳಿಂದ gurujagannatha vittala. Show all posts

Tuesday, 13 April 2021

ತರುಳ ಪ್ರಹ್ಲಾದನ್ನ ದುರುಳ ಮಾತುಗಳಿಂದ ankita gurujagannatha vittala

ತರುಳ ಪ್ರಹ್ಲಾದನ್ನ ದುರುಳ ಮಾತುಗಳಿಂದ l

ಮರುಳು ದೈತ್ಯಾನು ಬಾಧಿಸೆ l

ವುರಳೀಸಿ ಅವನ ಹಿಂಗುರಳ ಪಿಡಿದೆಳೆದು l

ಉದರ ಕರುಳಾಗಳಾನೆ ಬಗಿದು ಬಾಲನ ಕಾಯಿದಿ ll 1 ll


ಸರಸಿಯೊಳಗೆ ಕರಿವರನನು l

ಪರಿಪರಿ ಬಾಧಿಗೈವುತಿರೆ l

ನರಹರಿ ಪೊರಿಯಂದು ಮೊರೆಯಿಡೆ ಅವನನು l

ಅರಸಿಗ್ಹೇಳದೆ ನೀ ಬಂದು ಮಕರಿಕೊಂದು ll 2 ll


ದುಷ್ಟ ಕೌರವ ಮಹ ಶಿಷ್ಠ ದ್ರೌಪದಿಯನ್ನು l

ಕಷ್ಟ ಬಡಿಸುತಿರಲಾಗ l

ಶ್ರಿಷ್ಠಿಕರ್ತನೆ ಶಿರಿಕೃಷ್ಣನೆ ಕಾಯೆನಲು

ಧಿಟ್ಟ ಗುರುಜಗನ್ನಾಥವಿಟ್ಠಲ ದಾತಾ ll 3 ll

***