Parashurama stutih ಪರಶುರಾಮ ದೇವರು
ಬೆಳಗಿರಾರುತಿಯನು ಜಲಜ ನೇತ್ರರೆ ನೀವುಛಲವ ಸಾಧಿಸಿದಂಥ ಚೆಲುವರಾಯನಿಗೆ ಪ
ರೇಣುಕಾಸುತ ಕ್ಷೋಣಿಪಾಲಕರ ಕೊಂದುಕಾಮಧೇನುವಿನ ಆಶ್ರಮ ಸ್ಥಾನದಿ ತಂದಾ 1
ಹತ್ತೇಳು ಒಂದು ಅಕ್ಷೋಹಿಣೀ ಸೈನ್ಯಹತ್ಯೆ ಮಾಡುತ್ತ ರಕ್ತದ ನದಿಯನು ಸುತ್ತಹರಿಸಿದವಗೆ 2
ವಂದ್ಯ ಮಹಿಮನೆ ಇಪ್ಪತ್ತೊಂದು ಬಾರಿಲೆ ಕ್ಷಾತ್ರವೃಂದವನಳುಹಿದ ಇಂದಿರೇಶನಿಗೆ 3
****