ನಾಗಶಯನನ ನಾರದ ವಂದನೆ ದೇವ ||ಪ||
ಮಂಗಳಾಭಿಷೇಕಕೆ ಉದಕ ತರುವೆನೆನೆ
ಗಂಗೆಯಂಗುಷ್ಠದಿ ಪಡೆದಿರುವೆ
ಸಂಗೀತ ಕೀರ್ತನೆ ಪಾಡುವೆನೆಂದರೆ
ತುಂಬುರು ನಾರದರು ಪಾಡುತಿಹರೋ ದೇವ ||
ಪುಷ್ಪವ ತಂದು ನಿನಗರ್ಪಿಸುವೆನೆಂದರೆ
ಪುಷ್ಪ ಪಲ್ಲವಿಸಿದೆ ಹೊಕ್ಕುಳಲಿ
ಇಪ್ಪ ತೆತ್ತಿಸಕೋಟಿ ದೇವರ್ಕಳದ-
ನೊಪ್ಪಿ ನೈವೇದ್ಯ ನೀಡಲು ತೃಪ್ತನಾಗುವೆ ||
ಕೋಟಿಸೂರ್ಯರ ಪ್ರಭೆ ಮಿಗಿಲಾದಾತನಿಗೊಂದು
ದೀಪವನು ಹಚ್ಚಿದರೆ ಬೆಳಕಹುದೆ
ಸಾಟಿಗಾಣದೆ ಲಕ್ಷ್ಮಿ ಉರಸ್ಥಳವಾಗಿರೆ
ಲೋಷ್ಟ ಕಾಸು ಎಂದು ಕಾಣಿಕೆ ನೀಡೆಲೊ ||
ಹಾಸಿಗೆಯನು ತಂದು ಹಾಸುವೆನೆಂದರೆ
ಶೇಷನ ಮೇಲೆ ನೀ ಪವಡಿಸಿರ್ಪೆ
ಬೀಸಣಿಗೆಯ ತಂದು ಬೀಸುವೆನೆಂದರೆ
ಬೀಸುತಿಹನು ಖಗ ತನ್ನ ಪಕ್ಕದಲಿ ||
ನಿತ್ಯ ಗುಣಾರ್ಣವ ನಿಜಗುಣ ಪರಿಪೂರ್ಣ
ಸಚ್ಚಿದಾನಂದ ಸನಕಾದಿವಂದ್ಯ
ಮುಕ್ತಿದಾಯಕ ನಮ್ಮ ಪುರಂದರವಿಠಲ
ಭಕ್ತಿದಾಯಕನೆಂದು ಸ್ತುತಿಸಿ ಕೊಂಡಾಡುವೆನೊ ||
***
ರಾಗ ಶಂಕರಾಭರಣ. ತ್ರಿಪುಟ ತಾಳ (raga tala in audio ay differ)
shankarabharana - triputa
P: hEge meccisali arcisali ninna nAgashayanana nArada vandyane dEva
C1: mangaLAbhiSEkake udaka taruvenene gangeyunguSTadi paDediruve
sangIta kIrtane pADuvenendare tumburu nAradaru pADutiharO dEva
2: puSpava tandu ninagarpisuvenendare puSpa pallaviside hokkuLali
ippatettisakOTi dEvargaLadanoppi naivEdya nIDalu trptanAguve
3: kOTi sUryara prabhe migilAdAtanigondu dIpavanu haccidare beLagahude
sATi kANade lakSmi ura sthaLavAgire lOSTa kAsu endu kANike nIDelo
4: hAsigEyanu tandu hAsuvenendare shESana mEle nI pavaDisirpe
bIsaNigeya tandu bIsuvenendare bIsutihanu khaga tanna pakkadali
5: nitya guNArNva nija guNa paripUrNa saccidAnanda sanakAdi vandya
muktidAyaka namma purandara viTTla bhakti dAyakanendu stutisi koNDADuveno
Meaning: How do I please(meccisali) you, O the nAgashayana and nArada vandya
C1: (I thought of) fetching water(udaka) for your bath(mangalAbhiSEka), but Ganga(goddess of river ganges) is present in your toe: I thought of singing to you(sangIta KIrtane), but Tumburu and NArada are already singing for you.
C5: I will praise your name purandaravithala
***
pallavi
hEge meccisali arcisali ninna nAgashayanana nArada vandyane dEva
caraNam 1
mangaLAbhiSEkake udaka taruvenene gangeyunguSTadi paDediruve
sangIta kIrtane pADuvenendare tumburu nAradaru pADutiharO dEva
caraNam 2
puSpava tandu ninagarpisuvenendare puSpa pallaviside hokkuLali
ippatettisakOTi dEvargaLadanoppi naivEdya nIDalu trptanAguve
caraNam 3
kOTi sUryara prabhe migilAdAtanigondu dIpavanu haccidare beLagahude
sATi kANade lakSmi ura sthaLavAgire lOSTa kAsu endu kANike nIDelo
caraNam 4
hAsigEyanu tandu hAsuvenendare shESana mEle nI pavaDisirpe
bIsaNigeya tandu bIsuvenendare bIsutihanu khaga tanna pakkadali
caraNam 5
nitya guNArNva nija guNa paripUrNa saccidAnanda sanakAdi vandya
muktidAyaka namma purandara viTTla bhakti dAyakanendu stutisi koNDADuveno
***
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ
ನಾರದವಂದಿತನೆ ದೇವಾ ಪ
ಮಂಗಳಾಭಿಷೇಕಕೆಉದಕತರುವೆನೆನೆ
ಗಂಗೆಯ ಅಂಗುಟದಿ ಪಡೆದಿಹೆಯೊ ||
ಸಂಗೀತ ಕೀರ್ತನೆ ಪಾಡುವೆನೆಂದರೆಹಿಂಗದೆ
ತುಂಬುರ ನಾರದರು ಪಾಡುವರೊ 1
ಪುಷ್ಪವ ತಂದು ನಿನಗರ್ಪಿಸುವೆನೆಂದರೆ
ಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||
ಮುಪ್ಪತ್ತು ಮೂರ್ಕೋಟಿ ದೇವತೆಗಳು
ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು 2
ಕೋಟಿಸೂರ್ಯರ ಕಾಂತಿ ಮಿಗಿಲಾದವನಿ
ಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||
ಸಾಟಿಗಾಣದಸಿರಿಉರದೊಳು ನೆಲಸಿರೆ
ಪೋಟುಗಾಸನು ಎಂತು ಕಾಣಿಕೆಯಿಡಲಯ್ಯ 3
ಹಾಸಿಗೆಯನು ನಿನಗೆ ಹಾಸುವೆನೆಂದರೆ
ಶೇಷನ ಮೈಮೇಲೆ ಪವಡಿಸಿಹೆ ||
ಬೀಸಣಿಕೆಯ ತಂದು ಬೀಸುವೆನೆಂದರೆ
ಆಸಮೀರಣ ಚಾಮರವ ಬೀಸುತಿಹನೋ4
ನಿತ್ಯಗುಣಾರ್ಣವ ನಿಜಸುಖ ಪರಿಪೂರ್ಣ
ಸತ್ತು ಚಿತ್ತಾನಂದ ಸನಕಾದಿ ವಂದ್ಯ ||
ಮುಕ್ತಿದಾಯಕ ನಮ್ಮಪುರಂದರವಿಠಲನು
ಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ 5
***
ಒಟ್ಟಾರೆ ಈ ಪದ್ಯದ ಸಾರಾಂಶ
ಭಗವಂತನು ಸಕಲ(ಅನಂತ) ಕಲ್ಯಾಣಗುಣಗಣಪರಿಪೂರ್ಣನಾದವನು
ಸರ್ವೋತ್ತಮನು
ಸರ್ವತಂತ್ರ ಸ್ವತಂತ್ರನು
ಸರ್ವತ್ರವ್ಯಾಪ್ತನು
ದೋಷ ದೂರನು
ಅಚಿಂತ್ಯಾದ್ಭುತಶಕ್ತಿವುಳ್ಳವನು
ಅಘಟಿತಘಟನಾಪಟುತ್ವವುಳ್ಳವನು
ಕರ್ತುಂ ಅಕರ್ತುಂ ಅನ್ಯಥಾಕರ್ತುಂ
ನಿತ್ಯ ತೃಪ್ತನು ನಿತ್ಯ ಮುಕ್ತನು
ಕಟ್ಟಕಡೆಗೆ ಯಾರ ಯಾರ ಅಪೇಕ್ಷೆಯೂ ಇಲ್ಲದ ಅಷ್ಟೇ ಯಾಕೆ ಲಕ್ಷ್ಮೀ ದೇವಿಯನ್ನೂ ಕೂಡ ಅಪೇಕ್ಷಿಸದೇ ಸ್ವರಮಣ ನಾಗಿರುವ ಭಗವಂತನಿಗೆ ಯಾರ ಹಂಗವೂ ಬೇಕಿಲ್ಲ ಅರ್ಥಾತ್ ಇಲ್ಲವೇ ಇಲ್ಲ
ಅನ್ನೋದು ಶಾಸ್ತ್ರಸಿದ್ಧವಾದ ಶತಸಿದ್ಧವಾದ ಪರಮಸತ್ಯವಾದ ಮಾತು ...
ಹೀಗಿದ್ದಾಗ ಭಗವಂತನಿಗೆ ಯಾರ ಅವಶ್ಯಕತೆ ಇಲ್ಲದಿದ್ದರೂ
ಅವನು ತಾನೇ ತಾನಾಗಿ ಒಂದು ಸಂಕಲ್ಪವನ್ನು ಮಾಡಿಕೊಂಡ
ಏನಂತ ಲೋಕವಿಡಂಬನೆಗಾಗಿ
ಒಂದು ಸಜ್ಜನರ ಉದ್ಧಾರಕ್ಕಾಗಿ
ದೇವತೆಗಳಿಗೆ ಒಂದು ಸೇವೆಗಾಗಿ ಅವಕಾಶ ಕೊಡಬೇಕೆಂಬ ಉದ್ದೇಶದಿಂದ ಒಂದು ನಿರ್ಧಾರಕ್ಕೆ ಬಂದಾ...
ಭಗವಂತನ ಶರೀರ ( ಅಪ್ರಾಕೃತ)
ಹೊಲಸೇ ಆಗೋದಿಲ್ಲ ಕೊಳಚೆ ಎಂಬ ಪ್ರಸಕ್ತಿಯೆ ಇಲ್ಲ ಅವನಿರುವುದು ಸ್ವತ: ಸಮುದ್ರದಲ್ಲಿಯೇ ಅವನಿಗೆ ಸ್ನಾನ ಮಾಡಬೇಕೆನ್ನುವ ಪ್ರಸಕ್ತಿಯೇ ಇಲ್ಲ ಅಂದ್ಮೇಲೆ ಅವನಿಗೆ ಅಭಿಷೇಕ ಯಾಕೆ ಮಾಡ್ಬೇಕು
ಅವನಿಗೆ ಅಭಿಷೇಕದ ಅವಶ್ಯಕತೆಯೇ ಇಲ್ಲ ಆದರೂ ಗಂಗಾದೇವಿ ಯು ಸಾಕ್ಷಾತ್ ಪಾದಾಂಗುಷ್ಠದಿಂದ ಜನಿಸಿದವಳಾಗಿದ್ದು ವಿಷ್ಣುಪದಿ ಎಂಬ ಹೆಸರಿನಿಂದ ಭಗವಂತನ ಸೇವೆ ಮಾಡಿ ಕೃತಾರ್ಥಳಾಗಬೇಕು
ತಾನು ತನ್ನ ಸಾಧನೆಯನ್ನು ಭಗವಂತನ ಸೇವಾರೂಪದಲ್ಲಿ ಮಾಡಿ ಉದ್ಧಾರವಾಗಬೇಕೆಂಬು ಅವಳ ಅಪೇಕ್ಷೆಯೂ ಅದಕ್ಕೆ ತಕ್ಕಂತೆ ಅವಳಿಗೂ ಈ ಒಂದು ಸೇವೆಗೆ ಅವಕಾಶ ಕೊಡಬೇಕೆಂಬುದೂ ಕೂಡ ಶ್ರೀ ಹರಿಯ ಸಂಕಲ್ಪವೇ ಹೊರತು
ಭಗವಂತನಿಗೆ ಅದರ ಅವಶ್ಯಕತೆ ಇಲ್ಲವೇ ಇಲ್ಲ ಅವನದು ಅಪ್ರಾಕೃತ ಶರೀರ ಮೂಲದಲ್ಲೂ
ಅವತಾರಗಳಲ್ಲೂ ಅನ್ನೋದು
ಸತ್ಯಂ ಸತ್ಯಂ ಪುನ: ಸತ್ಯಂ
ಇದೇ ರೀತಿಯಲ್ಲಿ
ಗರುಡದೇವರಿಗೆ ಸೇವೆಗೆ ಒಂದು ಅವಕಾಶ ಕೊಡಬೇಕೆಂದು
ಅವನನ್ನು ತನ್ನ ವಾಹನವನ್ನಾಗಿ ಬಳಸಿಕೊಂಡು ಸರ್ವತ್ರ ವ್ಯಾಪ್ತನಾದವನಿಗೆ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಮತ್ತೆಲ್ಲಿಗೋ ಹೋಗುವ ಪ್ರಸಕ್ತಿಯೇ ಇಲ್ಲ ಅಂದ್ಮೇಲೆ ಅವನನ್ನು ವಾಹನವಾಗಿ ಬಳಸಿಕೊಳ್ಳುವದರ ಉದ್ದೇಶವಾದರೂ ಏನಿದೆ?
ಆದರೂ ಭಗವಂತನು ಲೋಕವಿಡಂಬನೆಗಾಗಿ ತಾನು ಒಂದು ಕಡೆಯಿಂದ ಮತ್ತೊಂದು ಕಡೆ ನಿಮಿತ್ತ ಮಾತ್ರ ಗರುಡನನ್ನು
ಬಳಸಿಕೊಂಡು ಚಲಿಸಿದಂತೆ ನಾಟಕವಾಡ್ತಾನೆ ಅಷ್ಟೇ
ಗರುಡದೇವರಿಗೆ ಸೇವೆಗೆ ಒಂದು ಅವಕಾಶವನ್ನು ಕರುಣಿಸಿ
ಭಗವಂತನ ಸೇವೆಗೆ ಸದಾ ಸಿದ್ಧನಾಗಿರ್ತಾನೆ ಎಂಬ ವಿಶೇಷ
ಕೀರ್ತಿಗೆ ಭಾಜನನಾಗುವಂತೆ ಮಾಡ್ತಾನೆ ಇದು ಭಗವಂತನ ಕಾರುಣ್ಯಾತಿಶಯವಲ್ಲದೇ ಮತ್ತಿನ್ನೇನು ?
ಮತ್ತೆ ಶೇಷದೇವರಿಗೂ
ಒಂದು ಸೇವೆಗೆ ಅವಕಾಶ ಮಾಡಿಕೊಟ್ಟ ಭಗವಂತ
ಯಾವ ಸೇವೆ? ಭಗವಂತನಿಗೆ ಶಯ್ಯಾ ( ಹಾಸಿಗೆ)ರೂಪದಲ್ಲಿ ಅಖಂಡ ಸೇವೆಗೆ ಒಂದು ಉತ್ತಮ ಅವಕಾಶ
ಭಗವಂತನಿಗೆ ನಿದ್ರೆಯೇ ಇಲ್ಲ
ಕೇವಲ ಲೋಕವಿಡಂಬನೆಗಾಗಿ
ಯೋಗ ನಿದ್ರೆಯಲ್ಲಿರುವಂತೆ ನಟನೆ ಮಾಡ್ತಾನೆ ಅಷ್ಟೇ
ನಿದ್ರಾರಹಿತ ನಿದ್ರಾರಮಣ ನಿರ್ವಿಕಾರ ಚಿದ್ದೇಹ ಸರ್ವಕಾಲ ಸುಂದರ ಸಾರ
ನಿದ್ರೆಯೇ ಇಲ್ಲದವನಿಗೆ ಹಾಸಿಗೆಯ ಅವಶ್ಯಕತೆಯಾದರೂ ಏನಿದೆ?
ಅವನಿಗೆ ನಿದ್ರೆ ಇಲ್ಲದಿದ್ದರೂ ಅವನಿಗೆ ಒಂದು ಸೇವೆಗೆ ಅವಕಾಶವನ್ನು ಕೊಟ್ಟು ಅವನನ್ನು ಉದ್ಧಾರಮಾಡ್ತಾನೆ
ಅವನಿಗೆ ಸಾಧನೆಗೊಂದು ಅವಕಾಶ ಕರುಣಿಸಿ ಅವನನ್ನು ಶೇಷಶಯನ ಎಂಬ ಬಿರುದಿಗೆ ಪಾತ್ರನನ್ನಾಗಿ ಮಾಡ್ತಾನೆ ಎಂಬುದರಲ್ಲಿ ಮುಖ್ಯ ತಾತ್ಪರ್ಯ ....
ತುಂಬುರು ನಾರದರು ಸಂಗೀತ ಪಾಡಿ ಭಗವಂತನನ್ನು ಮೆಚ್ಚಿಸುತ್ತಾರೆ
ಅರ್ಥಾತ್ ಭಗವಂತನು ಅವರ ಸಂಗೀತ ಕೀರ್ತನೆಗಳ ಸೇವೆಗೆ
ಸಂತೋಷ ಮೆಚ್ಚಿಗೆ ವ್ಯಕ್ತಪಡಿಸಿದಂತೆ ನಟನೆ ಮಾಡ್ತಾನೆ ಅಷ್ಟೇ...
ಭಗವಂತನೇ ಸಾಕ್ಷಾತ್ ಸಾಮವೇದಪ್ರತಿಪಾದ್ಯನಾಗಿದ್ದಾನೆ ಸಾಮಗಾನ ಅಂದ್ರೆ ಬಲು ಇಷ್ಟ ಪ್ರೀತಿ ಆದ್ರಿಂದ ಗರುಡದೇವರಿಗೂ ಸಾಮಗಾನ ಮಾಡುವಂತೆ ಆಜ್ಞೆ ಮಾಡಿ
ಇವರೆಲ್ಲರಿಗೂ ಸಂಗೀತ ಕೀರ್ತನೆಗಳ ಸೇವೆಗೆ ಒಂದು ಅವಕಾಶ ಒದಗಿಸಿ ಕೊಟ್ಟು ಸೇವೆಯನ್ನು ಸ್ವೀಕರಿಸಿ ಅವರನ್ನು ಅನುಗ್ರಹಿಸಿ ಉದ್ಧಾರ
ಮಾಡುವವನಷ್ಟೇ ...
ಬ್ರಹ್ಮದೇವರು ಸಾಕ್ಷಾತ್ ಭಗವಂತನ ನಾಭಿಕಮಲದಿಂದ
ಹುಟ್ಟಿದವರಾಗಿ ಭಗವಂತನ ಪ್ರಥಮಾಂಗರು, ಅವಿಚ್ಛಿನ್ನ ಭಕ್ತರು ಎಂಬ ವಿಶೇಷ ಬಿರುದಾವಳಿಗೆ ಪ್ರೀತಿ ಪಾತ್ರರಾಗಿದ್ದಾರೆ
ಸ್ವತ: ಹದಿನಾಲ್ಕು ದಳಗಳಿಂದ ಕೂಡಿದ ಕಮಲಪುಷ್ಪವನ್ನು ನಾಭಿಯಲ್ಲಿ ಹುಟ್ಟಿಸಿ ಆ ಕಮಲಪುಷ್ಪದಲ್ಲಿಯೇ ಬ್ರಹ್ಮದೇವರನ್ನು ಪುಟ್ಟಿಸಿದ್ದಾನೆ
ಹೀಗಾಗಿ ಯಾವ ಪುಷ್ಪಗಳಿಂದಲೂ ಅರ್ಚಿಸಿ ಮೆಚ್ಚಿಸಬೇಕಾಗಿಲ್ಲ ಎಂಬುದರಲ್ಲಿ ತಾತ್ಪರ್ಯ
ಕಮಲದಲ್ಲಿ ಸಾಕ್ಷಾತ್ ಲಕ್ಷ್ಮೀ ದೇವಿಯ ಸನ್ನಿಧಾನ ವಿಶೇಷವಾಗಿದೆ ಹಾಗಾಗಿ ಲಕ್ಷ್ಮೀ ದೇವಿಯರ ಅಂತರ್ಗತ ಭಗವಂತನ ಸೇವೆಯನ್ನು ಮಾಡಲು ಭಗವಂತನು ಬ್ರಹ್ಮದೇವರಿಗೆ ಅವಕಾಶವನ್ನು ಕಲ್ಪಿಸಿಕೊಟ್ಟು ಸೇವೆಯನ್ನು ಸ್ವೀಕರಿಸಿದಂತೆ ನಟಿಸಿ ಅನುಗ್ರಹಮಾಡುವವನಾಗಿದ್ದಾನೆ ಅಷ್ಟೇ..
ಸೂರ್ಯ ನ ಪ್ರಭೆ ಅರ್ಥಾತ್ ಕೋಟಿಸೂರ್ಯರ ಪ್ರಭೆಗಿಂತಲೂ ಮಿಗಿಲಾದ ಕಾಂತಿ ತೇಜಸ್ಸು ಪ್ರಕಾಶವುಳ್ಳವನಾಗಿದ್ದಾನೆ ಅಂದ್ಮೇಲೆ ಈ ಸೂರ್ಯನಿಂದಾದ್ರೂ ಏನು ಪ್ರಯೋಜನವಿದೆ ಇವನಿಂದೇನೂ ಆಗಬೇಕಾದ್ದೂ ಇಲ್ಲ ಆದರೂ ಅವನಿಗೆ ಒಂದು
ಹಗಲಿಗೆ ಅಭಿಮಾನಿಯಾಗಿರುವಂತೆ ಜೀವರ ಕರ್ಮಸಾಕ್ಷಿಯಾಗಿ ಕಾರ್ಯ ನಿರ್ವಹಿಸು ಎಂಬ ದೊಡ್ಡ ಜವಾಬ್ದಾರಿಯನ್ನು ಕರುಣಿಸಿ
ಸೂರ್ಯಾಂತರ್ಗತ ನಾರಾಯಣ ರೂಪದಿಂದ
ಗಾಯತ್ರೀ ಪ್ರತಿಪಾದ್ಯನಾಗಿ
ಸೇವೆಯನ್ನು ಸ್ವೀಕರಿಸಿ ಅನುಗ್ರಹಿಸುವವನಾಗಿದ್ದಾನೆ
ಭಗವಂತನ ಕಾರುಣ್ಯವಲ್ಲದೇ ಮತ್ತೇನೆನ್ನಬೇಕು ....
ಗರುಡದೇವರಿಗೆ ಮತ್ತೂ ಒಂದು ವಿಶೇಷ ಸೇವೆಗೆ ಅವಕಾಶ ಮಾಡಿಕೊಟ್ಟಾನೆ
ಭಗವಂತನಿಗೆ (ಸೆಖೆ) ನೇ ಆಗೋದಿಲ್ಲ ಬೆವರೇ ಬರೋದಿಲ್ಲ ಅಂದ್ಮೇಲೆ ಬೀಸಣಿಕೆಯಿಂದ ಗಾಳಿ ಹಾಕುವ ಪ್ರಸಕ್ತಿಯೇ ಇಲ್ಲ
ಆದ್ರೂ ಗರುಡದೇವರಿಗೆ ಮತ್ತೂ ಒಂದು ಸೇವೆಗೆ ಅವಕಾಶ ಕೊಡೋಣ ಅಂತ ಹೇಳಿದ್ರೇ ಗರುಡ ದೇವರು ತಮ್ಮ ಪ್ರಬಲವಾದ ವಿಶಾಲವಾದ ಸುಂದರವಾದ ರೆಕ್ಕೆಗಳಿಂದ ಆಹ್ಲಾದಕರವಾದ ಸಾಮಗಾನ ಮಾಡುತ್ತ ಮಾಡುತ್ತ ಬೀಸಣಿಕೆಯಿಂದ ಗಾಳಿ ಬೀಸುವಂತೆ ರೆಕ್ಕೆಗಳಿಂದ ಗಾಳಿಯನ್ನು ಬೀಸುವ ಮೂಲಕ ಭಗವಂತನನ್ನು ಸಂತೋಷ ಪಡಿಸುವರು ಸೇವೆಯಿಂದ ತೃಪ್ತಿಯನ್ನು ವ್ಯಕ್ತಪಡಿಸಿ ಅನುಗ್ರಹಿಸುವವನಷ್ಟೇ...
ನಿತ್ಯಾವಿಯೋಗಿಯಾದ ಲಕ್ಷ್ಮೀ ದೇವಿಯು ದೇಶತ: ಕಾಲತ: ಸಮಳಾಗಿದ್ದರೂ ಗುಣತ: ಕನಿಷ್ಟಳಾದಾಗ್ಯೂ ಅವಳನ್ನು ತನ್ನ ವಕ್ಷಸ್ಥಳದಲ್ಲೇ ಕೂಡಿಸಿಕೊಂಡು ತನ್ನ ಎಡಗಣ್ಣಿನ ಕೃಪಾದೃಷ್ಟಿಯನ್ನು ಅವಳ ಬಲಗಣ್ಣಿನ ಮೇಲೆ ಕರುಣಿಸಿದ್ದರಿಂದ ಭಗವಂತನ ಆಜ್ಞಾಧಾರಕಳಾಗಿ ಅತ್ಯಂತ ಪ್ರೀತಿಪಾತ್ರಳಾಗಿ ಭಗವಂತನ ಸೇವಾರೂಪದಲ್ಲಿ ತನ್ನ ಎಡಗಣ್ಣಿನ ಕೃಪಾಕಟಾಕ್ಷವೆಂಬ ದೃಷ್ಟಿಯಿಂದ ಈ ಜಗತ್ತಿನ ಸೃಷ್ಟಿ ಸ್ಥಿತಿ ಲಯವನ್ನು ಮಾಡುವ ಅತ್ಯುನ್ನತ ಅಧಿಕಾರವನ್ನು ಅತ್ಯಂತ ಸುಲಭವಾಗಿ ಅನಾಯಾಸವಾಗಿ ನಿರ್ವಹಿಸುವ ದ್ವಾರಾ ಭಗವಂತನಿಗೆ ಅತ್ಯಂತ ಪ್ರೀತಿಪಾತ್ರಳಾಗಿದ್ದಾಳೆ
ಪ್ರಳಯಕಾಲದಲ್ಲೂ ಕೂಡ ಬಿಟ್ಟಿರಲಾರದ ಅನ್ಯೋನ್ಯ ಸಂಬಂಧವನ್ನು ಶ್ರೀಭೂದುರ್ಗಾ ರೂಪದಿಂದ ( ಉದಕ ಆಲದೆಲೆ ಗಾಢಾಂಧಕಾರ ) ಅಂಭೃಣೀ ಸೂಕ್ತದಿಂದ ದುರ್ಗಾದೇವಿಯು ಮತ್ತೇ ಸೃಷ್ಟಿ ಮಾಡುವಂತೆ ಪ್ರಚೋದಿಸುವವಳಾಗ್ತಾಳೆ
ಸರ್ವಸ್ವವೂ ತಾನೇ ಆಗಿ
ಛತ್ರ ಚಾಮರ ವ್ಯಜನ ಪರಿಯಂಕ ರೂಪದಲ್ಲಿಯೂ ಸೇವೆಯನ್ನು ( ಕೋಟಿ ಕೋಟಿ ಭೃತ್ಯರಿರುವಾಗಲೂ) ತಾನೇ ಖುದ್ದಾಗಿ ಮಾಡುವಂಥ ಸೇವೆಯನ್ನು ಭಗವಂತನು ಅವಳಿಗೆ ಕರುಣಿಸಿ ಅನುಗ್ರಹಿಸುವವನಾಗಿದ್ದಾನೆ
ಇದೂ ಕೂಡ ಭಗವಂತನ ಕಾರುಣ್ಯಾತಿಶಯವಷ್ಟೇ ...
ಯದ್ಯಪೀ ಭಗವಂತನು ಸ್ವರಮಣನಾದಾಗ್ಯೂ ಅವಳಿಗೆ ಸೇವೆಗೊಂದು ಮಹತ್ತರವಾದ ಅವಕಾಶವನ್ನು ಕರುಣಿಸಿ ಪರಮಾನುಗ್ರಹವನ್ನು ಮಾಡುವವನಾಗಿದ್ದಾನೆ
ಒಟ್ಟಾರೆ ಭಗವಂತನಿಗೆ ಯಾವ ಕಾಲಕ್ಕೂ ಯಾರಿಂದಲೂ ಏನೂ ( ಎಳ್ಳಷ್ಟೂ) ಆಗಬೇಕಾದ್ದೇ ಇಲ್ಲ ಅಂದ್ಮೇಲೆ ನಾನು ಸೇವೆ ಮಾಡ್ತೀನಿ ನಾವು ಮಾಡ್ತೀವಿ
ದೇವತೆಗಳು ಮಾಡ್ತಾರೆ ಬ್ರಹ್ಮವಾಯುದೇವರು ಮಾಡ್ತಾರೆ ಲಕ್ಷ್ಮೀ ದೇವಿಯೂ ಮಾಡ್ತಾಳೆ ಅನ್ನೋದು ಭ್ರಮೆ ಹುಚ್ಚು ಕಲ್ಪನೆ ಹಾಸ್ಯಾಸ್ಪದ ಅನ್ನೋದು ಎಷ್ಟು ಸತ್ಯವಾದ ಮಾತು ಆಗಿದ್ದರೂ ಕೂಡ
ಭಗವಂತನೇ ತನ್ನ ಭಕ್ತರಿಗೊಂದು ಕಾರುಣ್ಯಾತಿಶಯದಿಂದಷ್ಟೇ
ಸೇವೆಯನ್ನು ಅವರವರ ಯೋಗ್ಯತಾನುಸಾರವೇ ಅವರವರಿಗೊಪ್ಪಿಸಿ ಅವರಿಂದ ಯಥಯೋಗ್ಯವಾದ ಸೇವೆಯನ್ನೂ ಸ್ವೀಕರಿಸಿ ಅವರವರ ಯಥಾಯೋಗ್ಯತಾನುಸಾರ ಸಾಧನೆಯನ್ನು ಮಾಡಿ ಮಾಡಿಸಿ ಅವರವರಿಗೆ ಯೋಗ್ಯವಾದ ಗತಿಗಳನ್ನು ಕಲ್ಪಿಸಿ ಮೋಕ್ಷದಲ್ಲೂ ಕೂಡ ತಾರತಮ್ಯೋಕ್ತವಾಗಿ ಸುಖಾನಂದವನ್ನು ಅನುಭವಿಸುವಂತೆ ಕರುಣಿಸುತ್ತಾನೆ ಅನ್ನೋದು ಅವನ ಕಾರುಣ್ಯಾತಿಶಯದಿಂದಷ್ಟೇ ಅಲ್ಲದೇ ಬೇರೇನೂ ಅಲ್ಲ
ಅದಕ್ಕೇ ಭಗವಂತನಿಗೆ
ಕರುಣಾನಿಧೇ ಕರುಣಾಸಮುದ್ರ
ಕರುಣಾಸಾಗರ ಕೃಪಾನಿಧೇ ಕೃಪಾಸಾಗರ ಕೃಪಾಸಮುದ್ರ
ದಯಾನಿಧೇ ದಯಾಸಾಗರ ದಯಾಸಮುದ್ರ
ಅಂತ ಹೇಳದೇ ಬೇರೆ ವಿಧಿನೇ ಇಲ್ವಲ್ಲಾ ಅರ್ಥಾತ್ ಈ ರೀತಿಯಾಗಿ ಸ್ಮರಣೆ ಮಾಡೋದರಿಂದ ಅನಂತ
ಪಾಪ ನಿವೃತ್ತಿ ಪುಣ್ಯಪ್ರಾಪ್ತಿ
ಅನಿಷ್ಟ ನಿವೃತ್ತಿ ಇಷ್ಟ ಪ್ರಾಪ್ತಿ
ಅನ್ನೋದು ಕೇವಲ ಕೇವಲ
ಭಗವತ್ಪ್ರಸಾದದಿಂದಲೇ ಸರ್ವಸ್ವವೂ ಪ್ರಾಪ್ತಿ ಅರ್ಥಾತ್
ಮೋಕ್ಷ ಪ್ರಾಪ್ತಿ
ಆಗ ಬದುಕು ಸಾರ್ಥಕತೆಗೆ ಸಾಧನೆಗೆ ತಾರಕ ಅನ್ನೋದು ಮಧ್ವ ಸಿದ್ಧಾಂತದ ಅಂತಿಮ ಗುರಿಯೂ ಆಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ ಇಲ್ಲ ಇಲ್ಲ
ದಯವಿಟ್ಟು ತಪ್ಪಿದ್ದಲ್ಲಿ ಮನ್ನಿಸಿ
(received in WhatsApp)
***