Showing posts with label ನಂಬಿರೋ ಮನವನುದಿನಾ ನಂಬಿರೋ ಮನವನುದಿನಾ gurumahipati. Show all posts
Showing posts with label ನಂಬಿರೋ ಮನವನುದಿನಾ ನಂಬಿರೋ ಮನವನುದಿನಾ gurumahipati. Show all posts

Wednesday, 1 September 2021

ನಂಬಿರೋ ಮನವನುದಿನಾ ನಂಬಿರೋ ಮನವನುದಿನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಂಬಿರೋ ಮನವನುದಿನಾ ಪ ನಂಬಿರೋ ಮನವನುದಿನಾ | ನಂಬಿದರಿಂಬಾಗುವನಾ 1 

ಸುರಮುನಿರಂಜನು ಸುರರಿಪು ಭಂಜನಾ | ನಿರುಪಮ ಕಂಜನಯನ ವದನಾ 2 

ಈರೆರಡಾಸ್ಯನ ಪಿತ ಪದ್ಮಾಸ್ಯನೆ | ಈ ರೈದಾಸ್ಯನ ಕೊಂದವನಾ 3 

ಅಸುರನ ಕಂದನ ನುಳಹಿದಾ ನಂದನ | ವಸುದೇವ ಬಂಧನ ಹರಿಸಿದನಾ 4 

ಇಹಪರ ವಂದ್ಯನ ದೇವಕಿ ಕಂದನ | ಮಹಿಪತಿ ನಂದನ ಜೀವನಾ 5

***