Showing posts with label ರಾಘವೇಂದ್ರ ಗುರುರಾಜಾ ಸುತೇಜಾ shreeshakeshavavittala. Show all posts
Showing posts with label ರಾಘವೇಂದ್ರ ಗುರುರಾಜಾ ಸುತೇಜಾ shreeshakeshavavittala. Show all posts

Monday 6 September 2021

ರಾಘವೇಂದ್ರ ಗುರುರಾಜಾ ಸುತೇಜಾ ankita shreeshakeshavavittala

ankita ಶ್ರೀಶಕೇಶವವಿಠಲ 

ರಾಗ: ಧನಶ್ರೀ ತಾಳ: ಅಟ


ರಾಘವೇಂದ್ರ ಗುರುರಾಜಾ ಸುತೇಜಾ


ಸಾನುರಾಗದಿ ನಿನ್ನ ಧ್ಯಾನಮಾಡದ 

ಹೀನಮಾನವವಲ್ಲೆ ಅನುಮಾನವಿಲ್ಲದೆ ನಾ

ಮಾನಗೈಯಲಿಬೇಕೆಂದನುಮಾನದಲಿ ನಿ-

ದಾನಿಸಲಾಗೆ ಬಂದು ಸತ್ವರದಿಂದ

ನೀನೆ ಹೃದಯದಿನಿಂದು ಆಕ್ಷಣ ಎನ್ನ

ಜ್ಞಾನಾಂಧಕಾರಕೆ ಭಾನುರೂಪನಾದಿ 1

ಕರುಣಾಸಾಗರ ನಿನ್ನ ಚರಣ ಸೋಕಲು ಲೋಹ

ಪರಶು ತಾಕಲು ಚಾಮಿಕರನಾದ

ತೆರÉ ಎನ್ನ ದುರಿತರಾಶಿಯತರಿದು ದೂತನಮೇಲೆ

ಪರಮಾನುಗ್ರಹಗರೆದು ಪೊರೆದನೆಂಬ ಬಿರುದು

ಲೋಕದಿ ಮೆರೆದು ಸಾರುತಲಿದೆ

ಪರಮಹಂಸಗುರು 2

ಶ್ರೀಶಕೇಶವವಿಠಲನ ಕರುಣಾವಿಲಾಸ-

ದಿ ಸುಖಿಸುವರೀಸಮಯದಲೆನ್ನ

ದೋಷ ವಿಚಾರಿಸದೆ ಮಮತೆಯಿಂದ

ಪೋಷಿಪರೆಂದರಿದೆ ಕಂಡಕಡೆ 

ಆಶೆಯಿಂದಲೆ ಬರಿದೆ ಚಲಿಸಲು ಉದಾಸಿಸದಲೆ ಪೊರೆದು ಸುಕೃತವೀಯುವ 3

***