ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವ ನಾನೆಂದು ಸಿರಿನಲ್ಲಾ ರಕ್ಷಿಸೋ | ಎನ್ನವಗುಣಗಳ ಎಣಿಸದೆ ದಯದಿಂದ ಪ
ನಿನ್ನ ಮೂರುತಿಯ ಬೆಳಗವದೋರಿಸಿ | ನಿನ್ನ ಪಾದಾಂಬುಜ ಪರಿಮಳ ಸುಳಿಸಿ | ನಿನ್ನ ನಾಮಾಮೃತ ಸವಿಸವಿ ಉಣಿಸಿ1
ನಿನ್ನ ಪೂಜಿಸಿಕೊಂಡು ಕರಗಳಿಂದ | ಚೆನ್ನಾಗಿ ಪ್ರದಕ್ಷಿಣೆಯಾ ಪಾದಗಳಿಂದ | ಕಾಯ ನಮನದಿಂದ - ಎನ್ನ ಮನವಿಟ್ಟು ನಿನ್ನ ನೆನುವಿನಿಂದಾ2
ಅನುದಿನ ಕೊಟ್ಟು ನಿನ್ನ ದಾಸರ ಸಂಗ | ಕೊನೆದೇಳದಿರಲೆನ್ನಾ ವಿಶ್ರಾಮದಂಗ | ನೀನಾಗಿರು ತುಂಬಿಯೆನ್ನಾ ಬಾಹ್ಯಾಂತರಂಗ | ಘನಗುರು ಮಹಿಪತಿ ಪ್ರಭುಶ್ರೀರಂಗ3
***