Showing posts with label ನನ್ನಯ್ಯ ನೀನೊಬ್ಬನೆ ಮಾರುತಿವರದ prasannavenkata. Show all posts
Showing posts with label ನನ್ನಯ್ಯ ನೀನೊಬ್ಬನೆ ಮಾರುತಿವರದ prasannavenkata. Show all posts

Tuesday, 12 November 2019

ನನ್ನಯ್ಯ ನೀನೊಬ್ಬನೆ ಮಾರುತಿವರದ ankita prasannavenkata

by ಪ್ರಸನ್ನವೆಂಕಟದಾಸರು
ನನ್ನಯ್ಯ ನೀನೊಬ್ಬನೆ ಮಾರುತಿವರದ ಪ.

ಉನ್ಮತ್ತತಂದೆ ಕೊಲ್ಲಲು ಒಯ್ಯಲು ತಾಯಿಚಿನ್ನನ್ನುಳಿಸಿಕೊಂಡಳೆ ಬನ್ನವನುಣ್ಣುತನಿನ್ನಿಚ್ಛೆಯೆನ್ನಲು ವಹ್ನಿವಿಷಾನ್ನವ ತಣ್ಣಸವೆನ್ನಿಪೆ ತನ್ನವರಿನ್ನ್ಯಾಕೊ ನರಹರಿಯೆ 1

ಉತ್ತಾನಪಾದಿ ಮುನಿದು ಅಡವಿಯ ದಾರಿಹತ್ತಿ ನಿರಾಲಂಬದಿ ಉತ್ತಮ ಮಂತ್ರನಾರದಿತ್ತರೆ ಭಕ್ತಿಂದ ಅತ್ತಿತ್ತಾಗದ ಚಿತ್ತಕೆ ಒಲಿದೆಹೆತ್ತವರೊತ್ತಾದರೆವಾಸುದೇವ2

ಅಗ್ರಜಾವಜÕ ಮಾಡಲು ವಿಭೀಷಣಶೀಘ್ರ ಪಾದಾಬ್ಜಕೆರಗಲು ವ್ಯಗ್ರಪ್ಲವಗಗ್ರರು ಉಗ್ರದಿ ನಿಗ್ರಹಿಸೆ ಆಗ್ರಹಿಸಿದೆ ಭಕ್ತಾಗ್ರಣಿ ಹನುಮ ಮತಾಗ್ರದಿ ಪ್ರಸನ್ವೆಂಕಟ 3
*******