ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನ ಕಣ್ಣಾರೆ ನಾ |ಪ|
ಕಂಡು ಧನ್ಯನಾದೆನೋ ಬ್ರಹ್ಮಾಂಡ ನಖದಿಯೊಡೆದ ಹರಿಯ
ತಂಡ ತಂಡದಿ ಪೂಜೆಗೊಳುತ ಪಾಂಡವರನು ಸಲಹಿದವನ |ಅ ಪ|
ಗೆಜ್ಜೆ ಕಾಲ ಕಡಗವಿಟ್ಟು, ಮಜ್ಜಿಗೆ ಕಡೆಗೋಲ ಪಿಡಿದು
ಹಜ್ಜೆ ಪಂಕ್ತಿ ಊಟವುಂಡು ಗುಜ್ಜು ವೇಷ ಧರಿಸಿದವನ||
ಎಂಟು ಮಠದ ಯತಿಗಳು ತನ್ನ ಬಂಟರೆಂದು ಪೂಜೆಗೊಳುತ
ಕಂಟಕ ಕಂಸಾದಿಗಳನೆ ದಂಟಿನಂದದಿ ಸೀಳಿದವನ||
ಏಸು ಜನ್ಮದ ಸುಕೃತವೊ ಕಮಲೇಶ ವಿಠಲರಾಯ ತನ್ನ
ದಾಸರ ಅಭಿಲಾಷೆಯಿತ್ತು ಕೂಸಿನಂದದಿ ಪೋಷಿಸುವನ||
***
ಕಂಡು ಧನ್ಯನಾದೆನೋ ಬ್ರಹ್ಮಾಂಡ ನಖದಿಯೊಡೆದ ಹರಿಯ
ತಂಡ ತಂಡದಿ ಪೂಜೆಗೊಳುತ ಪಾಂಡವರನು ಸಲಹಿದವನ |ಅ ಪ|
ಗೆಜ್ಜೆ ಕಾಲ ಕಡಗವಿಟ್ಟು, ಮಜ್ಜಿಗೆ ಕಡೆಗೋಲ ಪಿಡಿದು
ಹಜ್ಜೆ ಪಂಕ್ತಿ ಊಟವುಂಡು ಗುಜ್ಜು ವೇಷ ಧರಿಸಿದವನ||
ಎಂಟು ಮಠದ ಯತಿಗಳು ತನ್ನ ಬಂಟರೆಂದು ಪೂಜೆಗೊಳುತ
ಕಂಟಕ ಕಂಸಾದಿಗಳನೆ ದಂಟಿನಂದದಿ ಸೀಳಿದವನ||
ಏಸು ಜನ್ಮದ ಸುಕೃತವೊ ಕಮಲೇಶ ವಿಠಲರಾಯ ತನ್ನ
ದಾಸರ ಅಭಿಲಾಷೆಯಿತ್ತು ಕೂಸಿನಂದದಿ ಪೋಷಿಸುವನ||
***
pallavi
kaNDu dhanyAnAdenO shrI uDupi krSNana kaNNare nA kaNDu
anupallavi
kaNDu dhanyanAdenO brahmaANDa nagariyoDeda hariya tanDa tanDadi pUjegoLuta pAnDavarane salahidavana
caraNam 1
gejje kAla kaDagaviTTu majjige kaDegOla piDidu
hejje pankti UTavunDu gujju vESa dharisidavana
caraNam 2
enthu maTada yatigaLu tanna banTarendu pUjegoLuta
kanTaka kamsAdigaLane danTinante sILidavana
caraNam 3
Esu janmada sukrtavo kamalEsha viThalarAya tanna
dAsa janAbhISTavittu kUsinandadi poSisidavana
***