RAO COLLECTIONS SONGS refer remember refresh render DEVARANAMA
..
ಸ್ಮರಿಸುವೆ ಮುರಹರನ | ಪರಮ ಪುರುಷನ
ಧುರದಿ ಸುರಪ ನರನ | ಪೊರೆದ ದೇವನ ಪ
ವನಜ ಸನ್ನಿಭ ಲೋಚನ | ಜನಕಜೆ ಮನ
ವನಜ ಭಾಸ್ಕರ ಕೇಶವನ | ದನುಜ ಕಾಲನ 1
ಭಕುತ ಪಾಲಕ ಅಜೀತ ಮುಕುತಿ ಪ್ರದಾತ
ಲಕುಮಿ ಸುರವರ ಪೂಜಿತ | ವಿಖಿನನ ಪಿತ2
ಶಾಮಸುಂದರ ವಿಠಲಾ | ಸಾಮಜ ಪಾಲಾ
ಶಾಮ ಸನ್ನುತ ಗೋಪಾಲಾ ಭೂಮಿಜೆ ಲೋಲಾ 3
***