Showing posts with label ಜೋ ಜೋ ಜೋ ಜೋ ಜೋ ಕೃಷ್ಣ ಪರಮಾನಂದ kadarundalagihanumaiah. Show all posts
Showing posts with label ಜೋ ಜೋ ಜೋ ಜೋ ಜೋ ಕೃಷ್ಣ ಪರಮಾನಂದ kadarundalagihanumaiah. Show all posts

Tuesday, 3 August 2021

ಜೋ ಜೋ ಜೋ ಜೋ ಜೋ ಕೃಷ್ಣ ಪರಮಾನಂದ ankita kadarundalagihanumaiah

 ..

ಜೋ ಜೋ ಜೋ ಜೋ ಜೋ ಕೃಷ್ಣ ಪರಮಾ-

ನಂದ ಗೋಪಿಯ ಕಂದ ಮುಕ್ಕುಂದ ಜೋಜೋ ಪ


ಪೆಟ್ಟಿಗೆಯೊಳಗಿದ್ದ ಪರಿಪೂರ್ಣ ಕಾಮಾ

ಮುಟ್ಟಿ ಭಜಿಸೊ ಮಹಾಯತಿಗಳ ಪ್ರೇಮಾ

ತೊಟ್ಟಿಲವೊಳಗೆ ಮಲಗಿದ್ದ ಶ್ರೀರಾಮಾ

ಘಟ್ಯಾಗಿ ತೂಗಿರಿ ಯತಿಗಳ ಸ್ತೋಮಾ 1


ಪಠವಳಿನುಟ್ಟು ಬಂದರು ಸುರರಾಗ

ಘಟಣಿ ಬಿದ್ದೀತೆಂದು ಮಹಪುಣ್ಯವೀಗ

ವಟಪತ್ರ ಕಲ್ಪನ್ನ ತೂಗಿರಿ ಬೇಗ ಶ್ರೀರಾಮಾ

ಘಟ್ಯಾಗಿ ತೂಗಿರಿ ಯತಿಗಳ ಪ್ರೇಮಾ2

ಪಾಕಶಾಸನ ಬಂದು ಮಳೆಗಳ ಕರೆಯೆ

ಗೋಕುಲವನು ಕಾಯ್ದ ಮಹಿಮೆಯು ಸರಿಯೆ

ಲೋಕದೊಳಜಭವರಿಗೆ ದೊಡ್ಡ ಧೊರೆಯೆ

ಶ್ರೀಕಾಂತ ಸರ್ವೋತ್ಮ ನೀನೆ ಶ್ರೀಹರಿಯೆ 3


ಆಲದೆಲಿಮ್ಯಾಲೆ ಮಲಗಿರೊ ಕಂದಾ

ಮ್ಯಾಲ ಕಲ್ಪವನು ದೃಷ್ಟಿಸಿದ್ಯೋ ನಿನ್ನಿಂದಾ

ಬಾಲನ ಪಡದ್ಯೊ ನಾಭಿಕಮಲದಿಂದಾ

ಪಾಲಾಬ್ಧಿ ಶ್ರೀರಮಣ ಮುಕ್ಕುಂದಾ 4


ಮಾಮುನಿ ಸತ್ಯಬೋಧರಾಯರಿಂದ

ಪ್ರೇಮದಿಂದಲ್ಲೆ ತೂಗಿಸಿಕೊಂಬೊ ಛೆಂದಾ

ಸ್ವಾಮಿ ಕದರುಂಡಲಗಿ ಹನುಮಯ್ಯಗಾನಂದ

ಪ್ರೇಮದಿಂದಲ್ಲೆ ತೂಗಿದರು ಗೋವಿಂದ 5

****