Showing posts with label ತಂದೆ ನೀನೆ ದಯದಿ ಪಾಲಿಸೆಂದು ಬಂದೆನೋ mahadevapuravasa. Show all posts
Showing posts with label ತಂದೆ ನೀನೆ ದಯದಿ ಪಾಲಿಸೆಂದು ಬಂದೆನೋ mahadevapuravasa. Show all posts

Thursday, 5 August 2021

ತಂದೆ ನೀನೆ ದಯದಿ ಪಾಲಿಸೆಂದು ಬಂದೆನೋ ankita mahadevapuravasa

     ..

ತಂದೆ ನೀನೆ ದಯದಿ ಪಾಲಿಸೆಂದು ಬಂದೆನೋ ಪ

ಹಿಂದುಮುಂದು ಗತಿಯದಾರುಯಿಲ್ಲವೆಂಬೆನೊ ಅ.ಪ

ಕುಕ್ಷಿಯೊಳಗೆ ಜಗವನಿಟ್ಟುಕೊಂಡು ಪೊರೆವನೆ

ಪಕ್ಷಿಗಮನ ನಿಮ್ಮ ನೆನೆವೆ ಭಜಕಗೊಲಿವನೆ 1

ಕ್ಷೀರವಾರ್ಧಿಶಯನ ಗೋಪಿ-ಜಾರ ಪಾಲಿಸೊ

ಮಾರಜನಕ ಮುದದೊಳೆನ್ನ ದೂರಲಾಲಿಸೊ 2

ಸುಮಹದೇವಪುರದ ನಿಲಯ-ಸುಜನರಕ್ಷನೆ

ಕ್ರಮದೊಳೆನ್ನ ರಕ್ಷಿಸಯ್ಯ-ಕಮಲೆಯಾಣ್ಮನೆ 3

***

****