ಪುಟ್ಟ ಪುಟ್ಟ ಶ್ರೀನಿವಾಸ ಬೇಗ ಬಾರೊ | ಬಹು
ದಿಟ್ಟ ನಿನ್ನಯ ಪಾದ ಎನಗೆ ತೋರೋ ಪ.
ಸಿಟ್ಟಿನಿಂದಲಿ ನೀನು ಕೆಟ್ಟ ದೈತ್ಯನ | ಕೊಂದು
ಪುಟ್ಟ ಬಾಲನ ಕಾಯ್ದ ನಾರಸಿಂಹ ಅ.ಪ.
ಬಿಟ್ಟ ಕಣ್ಣು ಬೆಟ್ಟ ಬೆನ್ನು ಸೊಟ್ಟಕೋರೆ | ಬಹು
ದುಷ್ಟ ಘೋರರೂಪಿ ನೀನು ಪುಟ್ಟ ಬಾಲ
ದುಷ್ಟ ರಾಜರ ಕೊಂದ ದಿಟ್ಟ ರಾಮನೆ | ಕೃಷ್ಣ
ಬಿಟ್ಟ ವಸ್ತ್ರವ ದುಷ್ಟ ಹನನ ಕಲ್ಕಿ 1
ನೀರೊಳಿದ್ದು ಭಾರ ಪೊತ್ತು ಕೋರೆ ತೋರ್ದೆ | ಬಹು
ಘೋರಕಾರ ಬಾಲರೂಪಿ ಕ್ರೂರ ರಾಮ
ನಾರಿಚೋರನ ಕೊಂದು ಜಾರ ಚೋರನು | ಆಗಿ
ವಿೂರಿ ಬತ್ತಲೆ ನಿಂದು ಏರಿ ಕುದುರೆ 2
ಕುಟ್ಟಿ ತಮನ ಕೊಟ್ಟು ಅಮೃತ ದಿಟ್ಟ ವರಹ | ಹರಿ
ಸಿಟ್ಟು ನಿನಗೆ ಪುಟ್ಟಿ ಭಾರ್ಗವ ಶ್ರೇಷ್ಠ ಶ್ರೀ ರಾಮ
ಕೃಷ್ಣಮೂರುತಿ ಬುದ್ಧ ಕೆಟ್ಟ ಕಲಿಯ | ಗೆದ್ದ
ಶ್ರೇಷ್ಠ ಗೋಪಾಲಕೃಷ್ಣವಿಠ್ಠಲ ಈಗ 3
****