..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಕಂಚಿ ಕಾಮಾಕ್ಷಿ
ಶರಣು ಶರಣು ಶರಣು ಶರಣು ಕಾಮಾಕ್ಷಿ
ಶರಣು ಮೋಹಿನಿ ಮಾ ವಾಣಿ ಶರ್ವಾಣಿ ಪ
ಹರಿ ಸಿರಿ ಸರಸ್ವತಿ ಸಹ ಪ್ರಜ್ವಲಿಸುವೆ
ಗಿರಿಜೆ ಶರಣು ಕಂಚಿನಿಲಯೆ ಸತತಕಾಯೆ ಅ ಪ
ಏಕಾತ್ಮಾನಂದಮಯ ನಿಖಿಳ ಗುಣಾರ್ಣವ
ಜಗಜ್ಜನ್ಮಾದಿಗಳಿಗೆ ಮುಖ್ಯ ಕಾರಣೆ ವ್ಯಾಪ್ತೆ
ಅಕಳಂಕ ಪುಂಸ್ತ್ರೀಗಾತ್ರೆ ಚಿನ್ಮಯೆ ವೃಂದಾ
ರಕರಿಗೆ ಪೀಯೂಷ ಕರುಣಿಸಿ ಉಣಿಸಿದೆ 1
ಭಾಮಾ ರುಕ್ಮಿಣಿ ಸೀತಾ ಸೋಮಸೋದರಿ ರಮೆ
ಕಮಲಾಸನಾದಿ ಸುಮನಸವಂದಿತೆ ತ್ರಾತೆ
ಕಮಲನಾಭನ ಸೇವೆ ವನಮಾಲೆ ಚಾಮರಾ
ದ್ಯಮಿತ ರೂಪದಿ ಮಾಳ್ಪ ಮಹಾಲಕ್ಷ್ಮೀ ನಮೋ ನಮೋ 2
ಪಕ್ಷಿವಾಹನ ಸಾಕ್ಷಿ ಚೇತಾನಿರ್ಗುಣ ಅ
ಧೋಕ್ಷಜ ಸರ್ವಾಂತರಾತ್ಮನ ತೀವ್ರ
ಪ್ರೇಕ್ಷಿಸೊ ಜ್ಞಾನ ಭಕುತಿ ಮತಿ ಎನಗಿತ್ತು
ರಕ್ಷಿಸೆ ಸರಸ್ವತಿ ಫಣಿರ ಪಕ್ಷಿಪ ನುತೆ 3
ಹೇಮ ಅಂಕುಶ ಪಾಶ ಇಕ್ಷುದಂಡವು ಪುಷ್ಪ
ಕೋಮಲಹಸ್ತ 2 ನಾಲ್ಕಲ್ಲಿ ಶೋಭಿತವು
ಕಾಮಿತವರಪ್ರದೆ ಕಾತ್ಯಾಯನಿ ಉಮಾ
ಹೈಮವತಿಯೆ ಶಿವೆ ದಯಮಾಡಿ ಪೊರೆಯೆನ್ನ 4
ತತ್ರ ತತ್ರ ಸ್ಥಿತೋ ವಿಷ್ಣುಃ ತತ್ ತತ್ ಶಕ್ತಿ ಪ್ರದರ್ಶಯನ್
ಸೂತ್ರವು ಮಣಿಗಳೊಳಂತೆ ಧಾರಕ ಹರಿ
ವೃತತಿಜಪಿತ ವಿಷ್ಣು ಪ್ರಸನ್ನ ಶ್ರೀನಿವಾಸ
ಗತಿ ಪ್ರಿಯತರೆ ಶಿವೆ ಸತತ ಪಾಲಿಸೆ ಎನ್ನ 5
***