Showing posts with label ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾವಣ್ಯದ ಕಣಿಯಾದ hayavadana. Show all posts
Showing posts with label ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾವಣ್ಯದ ಕಣಿಯಾದ hayavadana. Show all posts

Wednesday, 1 September 2021

ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾವಣ್ಯದ ಕಣಿಯಾದ ankita hayavadana

 ..

ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾ-ವಣ್ಯದ ಕಣಿಯಾದ ಉಡುಪಿನ ಕೃಷ್ಣನ ಪ.


ಕರಗುವ ಮಿಸುನಿಯ ಕಾಂತಿಯಿಂ ಗರುಡನಗರಿಗಳ ಇರವ ಧಿಕ್ಕರಿಪ ಪೀತಾಂಬರಎರಡು ಪಾಶ್ರ್ವಗಳಲ್ಲಿ ಶಿರದ ಕಿರೀಟವುಕೊರಳಹಾರದ ಜೋಡು ಇರಲು ಈ ಪರಿಯಿಂದಮರೆಯಲಬ್ಜದ ಕಂಕಣ ಭೂಮಿಗೈದುವವರ ಸೂರ್ಯನಾರಾಯಣ ಬಾಹುಗಳುಳ್ಳಮಕರಕುಂಡಲ ಬಾಹುಪುರಿಗಳಿಂದೆಸೆವನ1


ಅಳಿಗಳ ಕೂಟದಿ ಪೊಳೆವ ನೆತ್ತಿಯ ಗೊಂಡೆಎಳೆಯ ಮುತ್ತಿನ ಸರ ದುಂಡುರಕ್ಷಾಮಣಿಗಳ ಕೂಟ ಪೊಳೆಯಲು ಕೆಂಪುದÀಗಲೆಯಿಂದಕೆಳಗಾಗಲರುಣನ ಗರಿ ಪಾದ ಕಂಸೆಯಗಲಿ ಇಂದ್ರ ನೀಲದದಾಳ ದಿಕ್ಕುಗಳನೆಬೆಳಗುತಲೆ ಬಹಳ ಲೀಲೆಯ ತೋರ್ಪಖಳರೆದೆ ಶೂಲನ ಚೆಲುವ ಗೋಪಾಲನ 2


ಜಾತಿಮುತ್ತಿನ ಚುಂಗು ಖ್ಯಾತಿಯಿಂದೊಪ್ಪುವಚಾತುರ್ಯದಿ ವಾರೆಗೊಂಡೆಯ ಕಟ್ಟಿಆ ಜೂತದಿಂದಲಿ ಅತಿ ಮೈಜೋಡು ತೊಟ್ಟು ಈ-ರೀತಿಯಿಂದೆಡಗೈಯ ವಂಕಿ ಮಧ್ಯದೊಳಾನುಚ್ಚುತ ಖಡ್ಗದಿಂದೊಪ್ಪುವ ಭೂತಳದಿವಿಖ್ಯಾತಿ ಪಡೆದು ಮೆರೆವÀ ದುಷ್ಟಮೃಗವಘಾತಿಸಿ ಬಿಡುವ ಕಿರಾತÀ ಸ್ವರೂಪನ್ನ 3


ಮಿಸುನಿಯ ಮುಂಡಾಸು ಪೊಸರವಿಯಂತಿರೆಶಶಿಯ ಪ್ರಭೆಯಂತೆ ಪಸರಿಸಲಂಗಿಯುಹಸನಾದ ನವರಂಜು ವಶದಲ್ಲಿ ತುಂಬಿರೆಕುಸುಮನಂದದಿ ಧೋತ್ರವ ಉಟ್ಟುವೈರ್ವಸನವ ಸುತ್ತಿ ಗಾತ್ರದಿ ಕುಲಾಯಿ ಒಪ್ಪಿನಸುನಗೆಯಿಂದೊಪ್ಪುವ ನವವಿಪ್ರವೇಷನ್ನ 4


ಕಡೆದ ಬೊಗರಿಯಂತೆ ಕಡೆದು ಮಾಡಿದ ಬಾಹುದೃಢವಾದ ಕುಚಗಳು ದುರಿತದುನ್ನತವಾದಬಡನಡು ಬಳುಕಲು ಕಡೆಗಣ್ಣ ನೋಟದಿಮೃಡ ಮುಖ್ಯರ್ಮೋಹಿಸಿ ಒಡಲ ಮಾರದಿರಲುಮುಡಿಯ ನೋಡುತ ನವಿಲು ನಾಚಿ ಮೊಗಗೊಡದಡವಿಯ ಸೇರಲು ಭೂಷಣಗಳುಜಡಿವುತ್ತ ಜಗದೊಳು ಕಡುಮೋಹಿನೀ ಬಲು 5


ಶಂಕೆಇಲ್ಲದ ಕರ್ಮ ಕಿಂಕರರೊಳಗಾಗಿಟೊಂಕದಿ ಕೈಯಿಟ್ಟು ಶಂಕಿಸಲು ತನ್ನಂಘ್ರಿಪಂಕಜಂಗಳ ಬೇಡಿ ಪುರುಷಾರ್ಥ ಪಡೆಯಿರೊಶಂಕೆ ಬೇಡವೊ ಎಂದು ಲೆಂಕರಿಗೆ ಸೂಸಿಪ್ಪ-ಸಂಖ್ಯಾತ ಕರಯುಗಳದಿಂದೊಪ್ಪುವಶಂಖ ಚಕ್ರ ಆಯುಧಂಗಳ ಪಿಡಿದು ಸರ್ವಾಲಂಕಾರದಿಂ ವೆಂಕಟೇಶನ ರೂಪ6


ಈ ವಿಧ ತಪ್ಪದೆ ಏಳು ವಾರಗಳಲ್ಲಿಪಾವನಮತ ಗುರು ಬಳಿಗೆ ಬಂದವರೆಲ್ಲಶ್ರೀವರ ಹಯವದನನ ಸೇವೆಗೊಳ್ಳಿರೋ ನಿತ್ಯಆವಾವ ನಾಡಿನ ಆಶ್ರಿತ ಜನರನ್ನುಭಾವಶುದ್ಧಗಳರಿತು ಕೋರಿಕೆಗಳಈವ ಭಕ್ತರಿಗೊಲಿದು ಪಾಷಂಡಾದಿಶೈವರ ತರಿದ ಸದ್ವೈಷ್ಣವರ ದೇವÀನ್ನ7

***