ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಜಯಾ ಶ್ರೀನಿವಾಸಾ ಜಗದೀಶಾ ವೆಂಕಟೇಶಾ ದಯದಿಂದಲಿ ಪಾಲಿಸೆನ್ನಾ ದೋರಿನಿಜ ಪ್ರಕಾಶಾ ಪ
ಉರಗಾದ್ರಿಯಲ್ಲಿ ಬಂದು ಭೂವೈಕುಂಠಿದೇಯಂದು ಕರದಿಂದ ಮಹಿಮೆದೋರಿ ತಾರಿಸುವ ಜನದಿಂದು 1
ಧರ್ಮಾರ್ಥ ಕಾಮ್ಯ ಚತುರ್ವಿಧಮುಕ್ತಿಗಳು ಧರ್ಮವರಿತೆಸಾಧುರಿಗೆ ನೀಡುತಿಹೆ ದಯಾಳು 2
ಕುಲಧರ್ಮದಿಂದಲೆನೆಗೆ ಮಾನ್ಯತಾನಬಂದ್ಹಾಂಗೆ ವಲಮೆಯಿಂದ ಪರಗತಿಗೆ ಕುಡುಮಾನ್ಯತೆನವೀಗ 3
ಮಂದರೊಳು ಮಂದನಾನು ಜ್ಞಾನಭಕ್ತಿಯರಿಯೆನು ತಂದೆ ಮಹಿಪತಿಸ್ವಾಮಿ ಇಂದು ಉದ್ಧರಿಸುನೀನು 4
****