Showing posts with label ದಿವಿಜ ರಮಣನ ದ್ವೇಷಿ pranesha vittala ಹರಿವಾಯು ಸ್ತುತಿ DIVIJA RAMANANA DWESHI HARIVAYU STUTIH. Show all posts
Showing posts with label ದಿವಿಜ ರಮಣನ ದ್ವೇಷಿ pranesha vittala ಹರಿವಾಯು ಸ್ತುತಿ DIVIJA RAMANANA DWESHI HARIVAYU STUTIH. Show all posts

Friday, 30 October 2020

ದಿವಿಜ ರಮಣನ ದ್ವೇಷಿ ankita pranesha vittala ಹರಿವಾಯು ಸ್ತುತಿ DIVIJA RAMANANA DWESHI HARIVAYU STUTIH

 ರಾಗ ಕಾಂಬೋಧಿ 

Audio by Mrs. Nandini Sripad

ಶ್ರೀ ಪ್ರಾಣೇಶದಾಸಾರ್ಯ ವಿರಚಿತ   ಶ್ರೀ ಹರಿವಾಯುಸ್ತುತಿ 


 ಭಾಮಿನಿಷಟ್ಪದಿ 


 ನಖಸ್ತುತಿ 


ದಿವಿಜ ರಮಣನ ದ್ವೇಷಿ ಜನರೆಂ ।

ಬವನಿ ಭರ ಮಾತಂಗ ಮಾಧೇ ।

ಯವಹ ಕುಂಭಗಳೆಂಬ ಗಿರಿಗಳ ದಾರಣಾಧಿಪಟೂ ।

ಪವಿಗಳನು ಪೋಲ್ವಮರಗಣದಿಂ ।

ಸುವಿದಳಿತ ದುರ್ಧ್ವಾಂತ ಕುಮತಿ ।

ಪ್ರವಿತತಾಂತರದಿಂದ ಭಾವಿತ ನಖ ಶರಣ್ಯೆಮಗೇ ॥ 1 ॥


ಸುಗುಣಗಣ ಸಂಕೋಪಸಂಗತ ।

ದೃಗ್ಗೃಥಿತ ಪ್ರಾಂತೋತ್ಥಿತಾಗ್ನಿಯ ।

ಝಗಝಗಿಪ ಮಾರ್ತಾಂಡನುಪಮೆಯ ವಿಸ್ಫುಲಿಂಗಗಳಿಂ ।

ಯುಗಯುಗಾಸ್ಯ ಭವೇಂದ್ರ ಸಂದೋ ।

ಹಗಳನೈದಿಸಿ ಭಸಿತ ಭಾವವ ।

ಬಗೆಬಗೆಯಲಿಂದವನಿಜಯಳನಪ್ಪಿ ರಮಿಸುವನೇ ॥ 2 ॥


ಶುಭನಿಕೇತನ ಸೌಖ್ಯದ ಭವ ।

ನ್ನಿಭರನನ್ಯರಗಾಣೆನಧಿಕ ।

ತ್ರಿಭುವನದಿ ನಾಲ್ಕೆರಡನೇ ರಸದಂತೆ ಸನ್ಮಹಿತಾ ।

ವಿಭು ವಿಭೂತಿದ ಭೂಜಲೇಂದ್ರ ।

ಪ್ರಭೃತಿರಸ ಸಪ್ತೋತ್ತಮನೆ ಯನ ।

ಗಭಯ ಕೊಡು ಪ್ರಹ್ಲಾದನುತ ಪ್ರಾಣೇಶವಿಟ್ಠಲನೇ ॥ 3 ॥


 ಶ್ರೀ ವಾಯುಸ್ತುತಿ 


ಭಾರತೀಶ ಭವೇಂದ್ರನುತ ಸೀ - ।

ತಾರಮಣಗತಿ ಪ್ರೀತ ಹನುಮಾನ್ ।

ಘೋರ ಕೀಚಕಚಯ ಧನಂಜಯ ಸೌಖ್ಯ ಸತ್ತೀರ್ಥಾ ॥ ಪ ॥


ಹರಿಯ ಚರಣ ಸರೋಜನಿಷ್ಠಾ ।

ವರ ಸುಗುಣದಿಂದಧಿಕ ಗುರುತಮ ।

ಚರಣ ಲೋಕತ್ರಯ ಸುಪೂಜಿತ ಶ್ರೀಮದಾನಂದ ।

ವರ ಮುನೀಂದ್ರನೆ ನಿನ್ನ ಚರಣಾಂ ।

ಬುರುಹದಲಿ ಭ್ರಾಜಿಪ ರಜೋಗಣ ।

ಪರಮ ಪಾವಿಸಲಾವ ರಜಗಳು ಭಾರತೀ ವಿನುತ ॥ 1 ॥


ಶ್ರದ್ಧೆಯಿಂದಭಿವೃದ್ಧ ಕಲಕಲ ।

ಶಬ್ಧದಿಂದನುಬದ್ಧ ಸೇವಾ ।

ವೃದ್ಧ ಸಂವಿದ್ವಿಬುಧಗಣದ ಸುಮೌಲಿ ರತ್ನಗಳಾ ।

ಹೃದ್ಯ ಸಂಘಟ್ಟನದಿ ಘರಷಿತ ।

ಶುದ್ಧ ಪಾದುಕ ಜನಿತ ಕನ ।

ಕದ ಸದ್ರಜೋಗಣರಂಜಿತಾಶಾ ಸುರೇಣುಗಳಿಗೆ ನಮೋ ॥ 2 ॥


ಜನನ ಮೃತಿ ಮೊದಲಾದ ಬಹುಳಾಂ ।

ಜನಕೆ ವಿರಹವನೀವ ಬಲು ಸ ।

ಜ್ಜನಕೆ ಸುಗುಣಗಳಿತ್ತು ವಿಮಲಾನಂದ ಕರುಣಿಸುವಾ ।

ದಿನದಿನದಿ ದೂಷಿಸುವ ದುರ್ಮತಿ ।

ದನುಜರನು ದುಃಖೋಗ್ರತಮದೊಳ್ ।

ಮುಣುಗಿಸುವ ನಿನ್ನಂಘ್ರಿ ಪಾಂಸುಗಳಾನು ವರಣಿಪೆನೇ ॥ 3 ॥


ಕಲಿಯ ಮಲದಿಂ ಕಲುಷಜನದಲಿ ।

ವಲಿದು ವಿಜ್ಞಾನವನೆ ಕರುಣಿಸೆ ।

ಜಲಜ ಜಾಹ್ನವಿ ಜಡೆ ಬಿಡೌಜಸ ಮುಖ್ಯ ಸುರವಿನುತಾ ।

ಸುಲಭರನು ಸಂರಕ್ಷಿಸುವ ಸ ।

ತ್ಸುಲಲಿತಾಗಮ ಮಹಿತ ಮಧ್ವಾ ।

ಮಲ ಸುರೂಪನೆ ಮರುತ ನಾ ನಿನ್ನೆಂತು ವರಣಿಪೆನೋ ॥ 4 ॥


ಪೊಳೆವ ಮಿಂಚಿನ ಪೋಲ್ವ ಗದೆಯಿಂ ।

ಥಳಥಳಿಪ ದಿನಕರನ ತೇಜದ ।

ಚಲುವ ಭುಜ ಭೂಷಣದಿ ಭೂಷಿತ ಭುಜದಿ ಧರಿಸುತಲೀ ।

ಬೆಳಗಿ ಭುವನಂತರವ ನಿಜರುಚಿ ।

ಗಳಲಿ ಭಾಜಿಪ ಭೀಮರೂಪಾ ।

ನಿಳನೆ ನಿರ್ಮಲಮತಿಯ ಕರುಣಿಪುದಲವಬೋಧಾಖ್ಯಾ ॥ 5 ॥


ಭವಜ ಸಂತಾಪಗಳ ವನಕೆ ।

ಅವಧಿ ಕರುಣಾಕಲಿತನೇ ಹೃದಯಾ ।

ಲವ ಶುಭಸ್ಮಿತ ಪೊರಯುತ ವಿದ್ಯಾಖ್ಯ ಮಣಿಕಿರಣಾ ।

ನಿವಹದಿಂ ದಿಗ್ದಶವ ಬೆಳಗುವ ।

ಭುವನರುಹನಾಭನ ನಿವಾಸದ ।

ಲವಿರಹಿತ ಸುಖತೀರ್ಥಜಲಧಿಯೆ ಶಮಲ ಪರಿಹರಿಸೋ ॥ 6 ॥


ಬಂಧಕಂದಿಪ ಭಜಕಜನಕಾ ।

ನಂದ ಪೊಂದಿಪ ನುಡಿಯ ರಮಣನೆ ।

ಛಂದದಿಂದಾಂಜಲಿಯ ಶಿರದಲಿ ಬಂಧಿಸುವೆ ಭರದೀ ।

ಇಂದಿರಾರಮಣನ ಪದಾಂಬುಜ ।

ಒಂದು ಮನದಲಿ ಭಜಿಪ ಭಕುತಿಯ ।

ಗಂಧವಹ ನಿನ್ನಂಘ್ರಿ ಭಜನೆಯ ಭೂರಿ ಕರುಣಿಪುದೂ ॥ 7 ॥


ಘನ ಸರೋರುಹಮಿತ್ರ ಶಶಲಾಂ ।

ಛನ ಸಮೇತಾ ನಭನರಾಧಿಪ ।

ಜನ ವಿಭೂತಿಗಳುಳ್ಳ ವಸುಮತಿ ದಿವಿಜ ಭುವನಗಳಾ ।

ಜನನಭರಣೋದ್ದಳನಗಳ ಕಾ ।

ರಣದ ಸುಭ್ರೂವಿಭ್ರಮವು ಹೆ ।

ದ್ಧನುಜ ಸಂಕರ ಸಲಿಲಜಾದ್ಯರ ಸತತ ಮೋಹಿಪುದೂ ॥ 8 ॥


ನಿನ್ನ ಯತಿರೂಪವನು ಪೂಜಿಪ ।

ಧನ್ಯಜನರಾನಂದರೂಪದಿ ।

ರನ್ನ ಸಹಚರಚಲಿತ ಚಾಮರಚಯದಿ ಶೋಭಿಪರೂ ।

ಘನ್ನ ದ್ಯುತಿ ತಾರುಣ್ಯ ಶುಭ ಲಾ ।

ವಣ್ಯ ಲೀಲಾಪೂರ್ಣ ಸತಿಯರ ।

ಚನ್ನ ಕುಚ ಸಂಶ್ಲೇಷ ಜನಿತಾನಂದ ಸಂಭರರೂ ॥ 9 ॥


ಕುಂದಮಂದಾರಾದಿ ಕುಸುಮದ ।

ಗಂಧ ಸಂಗತ ಮರುತ ।

ಸಹಿತಾನಂದ ಜನಕಾನಂದವೀವುದು ವನರುಹಾಕ್ಷಿಯರಾ ।

ವೃಂದ ಸಂಸೇವಿತ ನಿರಂಜನ ।

ಚಂದ್ರ ದಿವಸಾಧೀಶ ಮದನಾ ।

ಹೀಂದ್ರ ಸುರಪತಿ ಸೇವ್ಯಮಹಿತ ಮುಕುಂದನರಮನೆಯೋಳ್ ॥ 10 ॥


ಧಿಟ್ಟ ಕಟಕಟ ಶಬ್ಧ ಶಬಲೋ ।

ದ್ಘಟ್ಟಜನಿ ಕೆಂಗಿಡಿಗಳಿಂದತಿ ।

ಜುಷ್ಟ ಪಂಕಿಲ ಜರಿವ ಸುಖಬಿಂದುವಿನ ತಮದೊಳಗೆ ।

ಸ್ಪಷ್ಟವಾದಿತರಾದ ಭವದ ನ ।

ಭೀಷ್ಟರನು ಸಂತಪ್ತ ಶಿಲೆಗಳ ।

ಲಿಟ್ಟು ಕುಂದಿಪರನವರತ ತ್ವದ್ಭೃತ್ಯ ಜನರುಗಳು ॥ 11 ॥


ಶ್ರೀನಿವಾಸನ ಸರಸ ಚರಣ ।

ಧ್ಯಾನ ಮಂಗಳಮಹಿತ ಭವದಸ ।

ಮಾನ ಸನ್ನಿಧಿ ಪಿಡಿದು ಸುಮುದಾಸೀನ ಮಾನವನೂ ।

ಜ್ಞಾನಿಗೋಚರ ರಹಿತ ದುಃಖಾ ।

ಧೀನ ಸುಖ ಸಂಸಾರದೊಳು ಬಲು ।

ದೂನನಾಗಿಹ ನಿತ್ಯ ನಿರಯವ ನೋಡನೆಂದೆಂದೂ ॥ 12 ॥


ಕ್ಷುದಧಿಕಾರ್ದಿತ ರಾಕ್ಷಸರ ಖರ ।

ರದನ ನಖಕ್ಷೋಭಿತಾಕ್ಷ ।

ಮದಕ್ಷುರಾನನ ಪಕ್ಷಿವೀಕ್ಷಿತಗಾತ್ರ ಸಹಿತರನೂ ।

ರುದಿರ ಪೂಯಾ ಕುಲಿತ ನಾನಾ ।

ವಿಧದ ಕ್ರಿಮಿಕುಲ ಕಲಿಲತಮದೊಳ ।

ಗಧಿ ನಿಮಗ್ನರ ಬಾಧಿಪವು ಪವಿ ಕಲ್ಪ ಕುಜಲೂಕಾ ॥ 13 ॥


ಜನನಿ ಜನಕಾಗ್ರಜ ಹಿತಪ್ರದ ।

ಪ್ರಣಯಭರ ಸರ್ವಾಂತರಾತ್ಮನೆ ।

ಜನನಮರಣಾದಿಗಳ ಜರಿಸುವ ಮರುತ ಜಾಹ್ನವಿಯಾ ।

ಜನಕ ಹರಿಯ ಅಪೂರ್ವ ನಿನ್ನಯ ।

ವನಜ ಚರಣದಿ ವಿಮಲ ಭಕುತಿಯು ।

ದಿನದಿನದಿ ಯನಗಧಿಕ ಕರುಣಿಪುದಮಿತ ಸದ್ಭೋಧಾ ॥ 14 ॥


ಸಕಲ ಸದ್ಗುಣಗಣಗಳಿಂದಾ ।

ಧಿಕ ರಮಾ ಸಂಶ್ಲೇಷಿ ಹರಿಪಾ ।

ದ ಕಮಲದಿ ತದ್ಭಕ್ತ ತಾಮರಸೋದ್ಭವ ಸಮೀರಾ ।

ಮಖ ಶತಾಮುಖ ತಾರತಮ್ಯವ ।

ಯುಕುತಿಯಲಿ ತಾ ತಿಳಿದು ನಿರ್ಮಲ ।

ಭಕುತಿ ಭಾರವ ವಹಿಸುವನ ನಮ್ಮನಿಲ ನೀ ಪೊರೆವೇ ॥ 15 ॥


ತತ್ತ್ವ ಸುಜ್ಞಾನಿಗಳ ನಿರ್ಮಲ ।

ಮುಕ್ತಿಯೋಗ್ಯ ಮಹಾನುಭಾವರ ।

ಸತ್ಯ ಸುಖಕೈದಿಸುವೆ ಮಿಶ್ರಜ್ಞಾನ ಜನರುಗಳಾ ।

ಸುತ್ತಿಸುವೆ ಸಂಸಾರದಲಿ ಬಲು ।

ವತ್ತಿಸುವೆ ಮಿಥ್ಯಾಮನೀಷರ ।

ನಿತ್ಯ ನಿರಯದಲೆಂದು ಕೇಳುವೆ ನಾನು ನಿಗಮಗಳಾ ॥ 16 ॥


ಮಹಿತ ಪೌರುಷ ಬಾಹುಶಾಲಿ ವಿ ।

ರಹಿತ ಸರ್ವಾಘೌಘ ನಿರ್ಮಲ ।

ಸಹಿತ ಬಹುಲ ಬ್ರಹ್ಮಚರ್ಯ ಪ್ರಮುಖ ಧರ್ಮಗಳಾ ।

ಬಹು ಸಹೋಮಯ ಭಜಕ ರಹಿತವ ।

ದಹಿಸುವ ಪ್ರತಿದಿನದಿ ಮೋಹಕ ।

ಮಹಮಹಿಮ ಹನುಮಂತದೇವರ ರೂಪಕಾನಮಿಪೇ ॥ 17 ॥


ಶತ ಮನೀಷನೆ ಶಮದ ಪಂಚಾ ।

ಶತ ಸಹಸ್ರ ಸುಯೋಜನಗಳಿಂ ।

ದತಿ ವಿದೂರ ಮಹೌಷಧಿಗಳುಳ್ಳಾ ಗಿರೀಂದ್ರವನೂ ।

ಪ್ರಥಿತ ನೀ ತರಲಾಗ ಗಮಿಸೀ ।

ಕ್ಷಿತಿ ಧರೇಂದ್ರನ ಕಿತ್ತು ತಂದಾ ।

ಪ್ರತಿಮ ನಿನ್ನನು ನೋಡ್ದರಾ ಜನರೊಂದು ಕ್ಷಣದೊಳಗೇ ॥ 18 ॥


ಘನಗುಣಾಂಭೋನಿಧಿಯೆ ಶತಯೋ ।

ಜನ ಸಮುನ್ನತ ವಿಸ್ತೃತಾಚಲ ।

ವನು ಅನಾದರದಿಂದಲೊಗೆಯಲು ಲೀಲೆ ಮಾತ್ರದಲೀ ।

ಅನುಸರಿಸಿ ಸ್ವಸ್ವ ಸ್ಥಳಗಳತಿ ।

ಘನ ಸುಶಕಲ ಸಮೇತ ಸುಶಿಲಾ ।

ಗಣಗಳುಳ್ಳದ್ದೆನಿಸೆ ನಿನ್ನಯ ಕೌಶಲಕೆ ನಮಿಪೇ ॥ 19 ॥


ನಿನ್ನ ಮುಷ್ಟಿಯಲಿಂದ ಪೇಷಿತ ।

ಸ್ವರ್ಣಮಯವರ್ಮ ವಿಭೂಷಿತ ।

ಚೂರ್ಣಿತಾಸ್ಥಿಗಳುಳ್ಳ ರಾವಣನುರವ ನೋಡುವರೂ ।

ಸ್ವರ್ಣಗಿರಿ ಸುತಟಾಕ ಶಂಕಾ ।

ಪೂರ್ಣರಾಗುವರಾ ಸುಮುಷ್ಟಿಯು ।

ಬನ್ನ ಕಳೆದು ಬಹೂನ್ನತಾನಂದಗಳ ಕೊಡದೇನೋ ॥ 20 ॥


ಜಾನಕಿ ಮುದ್ರಾದಿ ದಾನವು ।

ದಾನವರ ದಹನಾದಿ ಸೇನಾ ।

ಶ್ರೇಣಿಗತಿ ಸುಪ್ರೀತ ಕರುಣಾಶಾಲಿ ಸುಖಮಾಲೀ ।

ಭಾನುಕುಲ ಸುಲಲಾಮ ಪ್ರೇಮಾ ।

ಧೀನ ಮಾನಸನಾಗಿ ವನರುಹ ।

ಸೂನುವಿನ ಶುಭಪದವನಿತ್ತನು ನಿನಗೆ ನಳಿನಾಕ್ಷಾ॥ 21 ॥


ಮದ ಬಕನ ಸಂಹರಿಸಿ ಅತಿ ವೇ ।

ಗದಿ ಪುರಸ್ಥಿತ ಸರ್ವ ಜನದ ಸು ।

ವಿಧೃತಿ ಸುಖ ವಿಘ್ನಗಳ ಭರದಲಿ ಬಿಡಿಸಿ ಕಾಯ್ದಿದೆಯೋ ।

ಅಧಮತರ ದುರ್ಧಿಷಣ ದುರುಳರಿ ।

ಗಧಿಕ ಕಿರ್ಮೀರನ ರಣಾಂಗದಿ ।

ಸದೆದ ಸತ್ಕೌರವ ಕುಲೇಂದ್ರನೆ ನಮಿಪೆನನವರತಾ ॥ 22 ॥


ಅತ್ಯ ಯತ್ನದಲಿಂದ ಕುಜರಾ ।

ಪತ್ಯನಂಗಾಸ್ಥಿಗಳ ಸಂಧಿಗ ।

ಳೊತ್ತಿ ನಿರ್ಮಥಿಸಲು ಸುರಾರಿ ಜನೋತ್ತಮೋತ್ತಮನಾ ।

ಅರ್ಥಿಯಲಿ ಸಂಹರಿಸೆ ಹರಿ ತಾ ।

ತೃಪ್ತನಾದನು ಎಂತೋ ಆ ಪರಿ ।

ತೃಪ್ತನಾದನೆ ಪೇಳು ರಾಜಸೂಯಾಶ್ವಮೇಧದಲೀ ॥ 23 ॥


ಸಿಂಹನಾದದಲಿಂದ ಪೂರಿತ ।

ಬಹ್ವನೀಕಕ್ಷಪಣ ನಿಪುಣಾ ।

ರಂಹಸದ ತ್ವದ್ರಣವ ವರ್ಣಿಪರಿನ್ನುಂಟೇ ।

ಸಿಂಹ ಸಂಹನನಾಂಗ ಕಮಲಾ ।

ಸಿಂಹನಲ್ಲದೆ ಸತತ ಸುವಿ ।

ರಹಿತಾಂಹಸನೆ ನಿಮ್ಮಂಘ್ರಿ ಕಮಲಕ್ಕೆರಗಿ ವಂದಿಪೆನೋ ॥ 24 ॥


ಜ್ಞಾನಧನದಾನಿಲನೆ ನಿನ್ನಯ ।

ರಾಣಿ ವಾಣಿಯು ಯೆನ್ನ ಮನದ - ।

ಜ್ಞಾನ ಕಳೆದು ವಿಶಾಲ ಭಕುತಿಯ ಹರಿಯ ಮಹಿಮೆಗಳ ।

ಜ್ಞಾನವನು ಕರುಣಿಸುತಲನುದಿನ ।

ಹೀನ ದುರಿತೌಘಗಳ ವಿರಹಿಸ - ।

ಲಾ ನರೇಂದ್ರನ ಕುವರಿ ನಿನ್ನಾಜ್ಞೆಯ ಕರುಣದಲೀ ॥ 25 ॥


ಭೇದ ವಿರಹಿತ ಬಹು ಚಿದಾನಂ - ।

ದಾದಿ ಗುಣ ಸಂಪೂರ್ಣರೆನಿಸಿದ ।

ಭೇದವಚನಕೆ ಗೋಚರಿಸಿದ ವಿಶೇಷ ಬಲದಿಂದಾ ।

ಮೋದದಲಿ ದ್ವಿಜಬಾಹುಜೋದಿತ ।

ರಾದ ವೇದವ್ಯಾಸಕೃಷ್ಣರ ।

ಪಾದ ಪಂಕಜ ನಿರುತ ನಿನ್ನಯ ಚರಣಕಾನಮಿಪೇ ॥ 26 ॥


ನಂದದಲಿ ಸೌಗಂಧಿಕವ ತರ ।

ಲಂದು ಪೋಗಲು ಭೀಮರೂಪದ ।

ಲಂದದಿಂದಾಂಜನೆಯ ಕುವರನ ಬಾಲ ಧರಿಸದಲೇ ।

ಕುಂದಿದಂದದಿ ತೋರಿಸಿದೆ ಆ ।

ನಂದತೀರಥ ದನುಜಮೋಹನ ।

ನಂದಸಾಂದ್ರನೆ ನಿನ್ನ ಚರಿತೆಯು ಲೀಲೆ ಕೇವಲವೋ ॥ 27 ॥


ಕುಟಿಲ ಕಟುಮತಿ ಕಟುಕ ದೈತ್ಯರ ।

ಕಠಿಣತರ ಗದೆಯಿಂದ ಕುಂದಿಸಿ ।

ನಿಟಿಲನೇತ್ರನ ನುಡಿಗಳಿಂದಾಜೇಯ ಮಾಯಿಗಳಾ ।

ದಿಟನೆ ವಾಗ್ಬಾಣಗಳ ನಿಚಯದಿ ।

ಶಠರ ವಿಶ್ವಾತಥದ ವಚನರ ।

ತ್ರುಟಿಯು ಮೀರದೆ ತರಿದು ತರುಣಿಗೆ ಕುಸುಮ ನೀನಿತ್ತೇ ॥ 28 ॥


ಯುಗಪದದಿ ಸಂಹೃತ ಮಹಾಸುರ ।

ರಿಗೆ ಮಿಗಿಲು ಮಣಿಮಂತ ತಾನತಿ ।

ಮಿಗಿಲು ಕೋಪದ ವಶಗನಾಗಿ ಮಹೌಜಸನೇ ನಿನ್ನಾ ।

ಬಗೆಯ ಜನರಾಂತರಕೆ ಮೋಹವ ।

ಬಗೆವ ಬಹುಗುಣಪೂರ್ಣ ಹರಿಗೆ ।

ವಿಗುಣ ಜೀವೈಕ್ಯವನು ಪೇಳುವ ಕುಮತ ರಚಿಸಿದನೂ ॥ 29 ॥


ಅವನ ದುರ್ಧಿಷಣಾನುಸಾರದಿ ।

ಪವನಪಿತಗೆ ಜೀವೈಕ್ಯವನು ಪೇ ।

ಳುವ ಕುವಾದವ ಕೆಲರು ಸಲಿಸಲು ಕೆಲರನಾದರಿಸೇ ।

ಪವನ ನೀನವತರಿಸಿ ವೇಗದ ।

ಲವನಿಯೊಳಗಾ ಕುಮತಿ ದುರ್ಯ್ಯು ।

ಕ್ತ್ಯವನಿರುಹಗಳ ದಹಿಸಿದ್ಯಪ್ರತಿ ದಾವ ಸಮನಾಗೀ ॥ 30 ॥


ಅಮಿತಮಹಿಮನೆ ನಿನ್ನ ವಾಖ್ಯಾ ।

ವಿಮಲ ಪಂಚಾನನ ನಿನಾದವ ।

ಭ್ರಮಿಸಿ ಕೇಳುತ ಭಯದಿ ವದರಿ ನಿರಾಶೆಯಲಿ ಜರಿದು ।

ಶಮಿತ ದರ್ಪಾಕೋಪರಾಗಿ ।

ಭ್ರಮದಿ ಸಂತತರೆನಿಸಿ ದಶದಿಶೆ ।

ಗಮಿಸಿ ಪೋದರು ಮಾಯಿ ಗೋಮಾಯಿಗಳು ಘಳಿಗೆಯೊಳೂ ॥ 31 ॥


ಜಯ ಸುಶೀಲ ಸುಪೂರ್ಣ ಶಕ್ತಿಯೆ ।

ಜಯ ಗುರೋ ಜನ್ಮತ್ರಯದಲಾ ।

ಮಯ ವಿದೂರನೇ ಮಾಯಿಜನರು ವಿಹಿಂಸೆಗೊಳಿಸಿದರೂ ।

ಭಯ ವಿಧುರ ನಿರ್ಮಲ ಚಿದಾನಂದ ।

ಮಯನೆ ಸುಖಸಂದಾಯಿ ನೇತ್ರ ।

ತ್ರಯ ಮುಖರಿಗಧಿಪತಿಯೆ ಮಮ ಸುಖವೀವುದಾಚಾರ್ಯ ॥ 32 ॥


ಉದಯಿಸುವ ಮಂದಸ್ಮಿತದ ಮೃದು ।

ಮಧುರ ಸಲ್ಲಾಪಾಖ್ಯ ಸುಧೆಯ ।

ತ್ಯಧಿಕ ಧಾರಾಸೇಕದಿಂ ಸಂಶಾಂತ ಭವಶೋಕಾ ।

ಸದಮಲರ ಮನೋನಯನದಿಂ ಸಂ ।

ಮುದದಿ ಸೇವಿತವಾದ ನಿನ್ನಯ ।

ವದನಚಂದ್ರವನೆಂದು ನಾ ನಿತ್ಯದಲಿ ನೋಡುವೆನೋ ॥ 33 ॥


ಮೋದತೀರ್ಥನೆ ನಿನ್ನ ವಚನಾ ।

ಸ್ವಾದಿಸುವ ಬಹು ಸುಕೃತಿ ಜನರಾ ।

ಗಾಧ ಅಪೇಕ್ಷಗಳ ಹರಸುತ ಮೋದವೀಯುತಲೀ ।

ಸಾದರದಿ ಶೋಭಿಸುವ ನಿನ್ನಯ ।

ವೇದ ವ್ಯಾಖ್ಯಾನವನು ಸಂತತ ।

ಬೋಧಪೂರ್ಣನೆ ಎಮ್ಮ ಶ್ರವಣಕೆ ಗೋಚರಿಸಿ ಸಲಹೋ ॥ 34 ॥


ರತುನಮಯ ಪೀಠದಲಿ ಕುಳಿತಿಹ ।

ಶತಮನೀಷನೆ ಭಾವಿ ವಾಣೀ ।

ಪತಿಯೆ ನಿನ್ನನು ವೈದಿಕಾದಿಸು ವಿದ್ಯದಭಿಮಾನೀ ।

ಕ್ರತುಭುಜರು ಸೇವಿಪರು ಸತತದಿ ।

ವಿತತ ನಿನ್ನಯ ಚರಿತೆಯನು ದೇ ।

ವತೆ ಸಮಾಜದಿ ಗಂಧರ್ವರು ಪೊಗಳುತಿಹರದಕೇ ॥ 35 ॥


ಜನ್ಮ ಮೃತಿ ನಿರಯಾದಿ ಭಯ ಭೀ ।

ಷಣ ಕುಸಂಸಾರಾಂಬುನಿಧಿಯೊಳ್ ।

ಮುಣುಗಿದಮಲ ಸುಯೋಗ್ಯ ಜನರನು ನೋಡಿ ಕರುಣದಲೀ ।

ಅನಿಲ ಪ್ರಾರ್ಥಿತನಾಗಿ ನಿನ್ನಿಂ ।

ದನುನಯದಿ ಮಾರಮಣ ಮನ್ನಿಸಿ ।

ಜನಿಸಿದನು ಋಷಿಯಿಂದ ವಾಸವಿಯುದದೊಳಗಮಲಾ ॥ 36 ॥


ಅಧಮ ಜನರಿಂದತಿ ತಿರೋಹಿತ ।

ಸದಮಲಾಗಮ ತತಿಗೆ ಕರುಣದಿ ।

ಬುಧರಿಗಾ ಮುದವಾಹ ತೆರದಲಿ ಸೂತ್ರ ರಚಿಸಿದನೂ ।

ಅದುಭುತಾತ್ಮ ಮಹಾನುಭಾವನಿ ।

ಗೆದುರು ಮಿಗಿಲೋಬ್ಬುಂಟೇ ಲೋಕದಿ ।

ಬದರಿಕಾಶ್ರಮನಿಲಯ ವೇದವ್ಯಾಸಗಾನಮಿಪೇ ॥ 37 ॥


ಶ್ರೀಶನಾಜ್ಞೆಯ ಧರಿಸಿ ಶಿರದಲಿ ।

ಈಶ ಗರುಡ ಶಚೀಶಮುಖರ ದಿ ।

ವೀಶ ಪ್ರಾರ್ಥನೆ ಮನಕೆ ತಂದು ಮಹಾಮಹಿಮ ದೇವಾ ।

ಪೋಷಿಸಲು ಸಜ್ಜನರಿಗತಿ ತ್ವರ ।

ಕಾಶ್ಯಪಿಯೊಳಗವತರಿಸಿ ನೀ ಸ ।

ದ್ಭಾಷ್ಯ ವಿರಚಿಸಿ ಖಂಡಿಸಿದಿ ದುರ್ಭಾಷ್ಯಗಳನೆಲ್ಲಾ ॥ 38 ॥


ರಜತಪೀಠಾಹ್ವಯ ಪುರದಿ ನೀ ।

ರಜಭವನೆ ನಡುಸದನ ನಾಮಕ ।

ದ್ವಿಜನ ಗೃಹದಲಿ ಜನಿಸಿ ಮಹಮಹಿಮೆಗಳ ತೋರುತಲೀ ।

ನಿಜ ತುರಿಯ ಆಶ್ರಮವ ಧರಿಸೀ ।

ಪ್ರಜರುಗಳನುದ್ಧರಿಸಲುಪನಿಷ ।

ದ್ವ್ರಜ ಸುಭಾರತ ಭಾಷ್ಯಗಳ ರಚಿಸಿದೆಯೋ ಕರುಣಾಳೂ ॥ 39 ॥


ವಂದಿಸುವೆ ಸುರವೃಂದವಂದ್ಯನೆ ।

ವಂದಿಸುವೆ ಜಾಹ್ನವಿಯ ಸ್ನಾನದ ।

ಕಿಂತಧಿಕ ಪುಣ್ಯವನು ಚರಣ ಸ್ಪರುಶ ಮಾಳ್ಪರಿಗೇ ।

ಪೊಂದಿಸುವನಿಗೆ ವಂದಿಸುವೆ ಭವ ।

ಬಂಧ ಹರಿಸುತ ಸುಖವ ಕೊಡುವಾ ।

ನಂದತೀರಥ ನಿನಗೆ ಅಭಿವಂದಿಸುವೆನನವರತಾ ॥ 40 ॥


ಶ್ರೀಶಮರುತರ ದಾಸ ಗುಹಸುತ ।

ಕೇಶವ ಶ್ರೀ ಭಾರತೀಶರ ।

ನೀ ಸುಪದ್ಯಗಳಿಂದ ಸ್ತುತಿಸಿದ ತಾ ಸುಭಕುತಿಯಲೀ ।

ತೋಷದಿಂ ಪಠಿಸುತ್ತ ನಮಿಸುವ ।

ರಾಶೆಗಳ ಪೂರೈಸುತೀರ್ವರು ।

ಕ್ಲೇಶರಹಿತ ಸ್ಥಾನವಿತ್ತು ಸುಸೌಖ್ಯನುಣಿಸುವರು ॥ 41 ॥

 ಶ್ರೀ ಮಧ್ವೇಶ ಕೃಷ್ಣಾರ್ಪಣಮಸ್ತು

***



SrI prANESadAsArya viracita SrI harivAyustuti


BAminiShaTpadi


rAga kAMbOdhi


naKastuti

divija ramaNana dvEShi janareM |

bavani Bara mAtaMga mAdhE |

yavaha kuMBagaLeMba girigaLa dAraNAdhipaTU |

pavigaLanu pOlvamaragaNadiM |

suvidaLita durdhvAMta kumati |

pravitatAMtaradiMda BAvita naKa SaraNyemagE || 1 ||

suguNagaNa saMkOpasaMgata |

dRuggRuthita prAMtOtthitAgniya |

JagaJagipa mArtAMDanupameya visPuliMgagaLiM |

yugayugAsya BavEMdra saMdO |

hagaLanaidisi Basita BAvava |

bagebageyaliMdavanijayaLanappi ramisuvanE || 2 ||


SuBanikEtana sauKyada Bava |

nniBarananyaragANenadhika |

triBuvanadi nAlkeraDanE rasadaMte sanmahitA |

viBu viBUtida BUjalEMdra |

praBRutirasa saptOttamane yana |

gaBaya koDu prahlAdanuta prANESaviTThalanE || 3 ||


SrI vAyustuti

BAratISa BavEMdranuta sI – |

tAramaNagati prIta hanumAn |

GOra kIcakacaya dhanaMjaya sauKya sattIrthA || pa ||

hariya caraNa sarOjaniShThA |

vara suguNadiMdadhika gurutama |

caraNa lOkatraya supUjita SrImadAnaMda |

vara munIMdrane ninna caraNAM |

buruhadali BrAjipa rajOgaNa |

parama pAvisalAva rajagaLu BAratI vinuta || 1 ||


SraddheyiMdaBivRuddha kalakala |

SabdhadiMdanubaddha sEvA |

vRuddha saMvidvibudhagaNada sumauli ratnagaLA |

hRudya saMGaTTanadi GaraShita |

Suddha pAduka janita kana |

kada sadrajOgaNaraMjitASA surENugaLige namO || 2 ||


janana mRuti modalAda bahuLAM |

janake virahavanIva balu sa |

jjanake suguNagaLittu vimalAnaMda karuNisuvA |

dinadinadi dUShisuva durmati |

danujaranu duHKOgratamadoL |

muNugisuva ninnaMGri pAMsugaLAnu varaNipenE || 3 ||


kaliya maladiM kaluShajanadali |

validu vij~jAnavane karuNise |

jalaja jAhnavi jaDe biDaujasa muKya suravinutA |

sulaBaranu saMrakShisuva sa |

tsulalitAgama mahita madhvA |

mala surUpane maruta nA ninneMtu varaNipenO || 4 ||


poLeva miMcina pOlva gadeyiM |

thaLathaLipa dinakarana tEjada |

caluva Buja BUShaNadi BUShita Bujadi dharisutalI |

beLagi BuvanaMtarava nijaruci |

gaLali BAjipa BImarUpA |

niLane nirmalamatiya karuNipudalavabOdhAKyA || 5 ||


Bavaja saMtApagaLa vanake |

avadhi karuNAkalitanE hRudayA |

lava SuBasmita porayuta vidyAKya maNikiraNA |

nivahadiM digdaSava beLaguva |

BuvanaruhanABana nivAsada |

lavirahita suKatIrthajaladhiye Samala pariharisO || 6 ||


baMdhakaMdipa BajakajanakA |

naMda poMdipa nuDiya ramaNane |

CaMdadiMdAMjaliya Siradali baMdhisuve BaradI |

iMdirAramaNana padAMbuja |

oMdu manadali Bajipa Bakutiya |

gaMdhavaha ninnaMGri Bajaneya BUri karuNipudU || 7 ||


Gana sarOruhamitra SaSalAM |

Cana samEtA naBanarAdhipa |

jana viBUtigaLuLLa vasumati divija BuvanagaLA |

jananaBaraNOddaLanagaLa kA |

raNada suBrUviBramavu he |

ddhanuja saMkara salilajAdyara satata mOhipudU || 8 ||


ninna yatirUpavanu pUjipa |

dhanyajanarAnaMdarUpadi |

ranna sahacaracalita cAmaracayadi SOBiparU |

Ganna dyuti tAruNya SuBa lA |

vaNya lIlApUrNa satiyara |

canna kuca saMSlESha janitAnaMda saMBararU || 9 ||


kuMdamaMdArAdi kusumada |

gaMdha saMgata maruta |

sahitAnaMda janakAnaMdavIvudu vanaruhAkShiyarA |

vRuMda saMsEvita niraMjana |

caMdra divasAdhISa madanA |

hIMdra surapati sEvyamahita mukuMdanaramaneyOL || 10 ||


dhiTTa kaTakaTa Sabdha SabalO |

dGaTTajani keMgiDigaLiMdati |

juShTa paMkila jariva suKabiMduvina tamadoLage |

spaShTavAditarAda Bavada na |

BIShTaranu saMtapta SilegaLa |

liTTu kuMdiparanavarata tvadBRutya janarugaLu || 11 ||


SrInivAsana sarasa caraNa |

dhyAna maMgaLamahita Bavadasa |

mAna sannidhi piDidu sumudAsIna mAnavanU |

j~jAnigOcara rahita duHKA |

dhIna suKa saMsAradoLu balu |

dUnanAgiha nitya nirayava nODaneMdeMdU || 12 ||


kShudadhikArdita rAkShasara Kara |

radana naKakShOBitAkSha |

madakShurAnana pakShivIkShitagAtra sahitaranU |

rudira pUyA kulita nAnA |

vidhada krimikula kalilatamadoLa |

gadhi nimagnara bAdhipavu pavi kalpa kujalUkA || 13 ||


janani janakAgraja hitaprada |

praNayaBara sarvAMtarAtmane |

jananamaraNAdigaLa jarisuva maruta jAhnaviyA |

janaka hariya apUrva ninnaya |

vanaja caraNadi vimala Bakutiyu |

dinadinadi yanagadhika karuNipudamita sadBOdhA || 14 ||


sakala sadguNagaNagaLiMdA |

dhika ramA saMSlEShi haripA |

da kamaladi tadBakta tAmarasOdBava samIrA |

maKa SatAmuKa tAratamyava |

yukutiyali tA tiLidu nirmala |

Bakuti BArava vahisuvana nammanila nI porevE || 15 ||


tattva suj~jAnigaLa nirmala |

muktiyOgya mahAnuBAvara |

satya suKakaidisuve miSraj~jAna janarugaLA |

suttisuve saMsAradali balu |

vattisuve mithyAmanIShara |

nitya nirayadaleMdu kELuve nAnu nigamagaLA || 16 ||


mahita pauruSha bAhuSAli vi |

rahita sarvAGauGa nirmala |

sahita bahula brahmacarya pramuKa dharmagaLA |

bahu sahOmaya Bajaka rahitava |

dahisuva pratidinadi mOhaka |

mahamahima hanumaMtadEvara rUpakAnamipE || 17 ||


Sata manIShane Samada paMcA |

Sata sahasra suyOjanagaLiM |

dati vidUra mahauShadhigaLuLLA girIMdravanU |

prathita nI taralAga gamisI |

kShiti dharEMdrana kittu taMdA |

pratima ninnanu nODdarA janaroMdu kShaNadoLagE || 18 ||


GanaguNAMBOnidhiye SatayO |

jana samunnata vistRutAcala |

vanu anAdaradiMdalogeyalu lIle mAtradalI |

anusarisi svasva sthaLagaLati |

Gana suSakala samEta suSilA |

gaNagaLuLLaddenise ninnaya kauSalake namipE || 19 ||


ninna muShTiyaliMda pEShita |

svarNamayavarma viBUShita |

cUrNitAsthigaLuLLa rAvaNanurava nODuvarU |

svarNagiri sutaTAka SaMkA |

pUrNarAguvarA sumuShTiyu |

banna kaLedu bahUnnatAnaMdagaLa koDadEnO || 20 ||


jAnaki mudrAdi dAnavu |

dAnavara dahanAdi sEnA |

SrENigati suprIta karuNASAli suKamAlI |

BAnukula sulalAma prEmA |

dhIna mAnasanAgi vanaruha |

sUnuvina SuBapadavanittanu ninage naLinAkShA|| 21 ||


mada bakana saMharisi ati vE |

gadi purasthita sarva janada su |

vidhRuti suKa viGnagaLa Baradali biDisi kAydideyO |

adhamatara durdhiShaNa duruLari |

gadhika kirmIrana raNAMgadi |

sadeda satkaurava kulEMdrane namipenanavaratA || 22 ||


atya yatnadaliMda kujarA |

patyanaMgAsthigaLa saMdhiga |

Lotti nirmathisalu surAri janOttamOttamanA |

arthiyali saMharise hari tA |

tRuptanAdanu eMtO A pari |

tRuptanAdane pELu rAjasUyASvamEdhadalI || 23 ||


siMhanAdadaliMda pUrita |

bahvanIkakShapaNa nipuNA |

raMhasada tvadraNava varNiparinnuMTE |

siMha saMhananAMga kamalA |

siMhanallade satata suvi |

rahitAMhasane nimmaMGri kamalakkeragi vaMdipenO || 24 ||


j~jAnadhanadAnilane ninnaya |

rANi vANiyu yenna manada – |

j~jAna kaLedu viSAla Bakutiya hariya mahimegaLa |

j~jAnavanu karuNisutalanudina |

hIna duritauGagaLa virahisa – |

lA narEMdrana kuvari ninnAj~jeya karuNadalI || 25 ||


BEda virahita bahu cidAnaM – |

dAdi guNa saMpUrNarenisida |

BEdavacanake gOcarisida viSESha baladiMdA |

mOdadali dvijabAhujOdita |

rAda vEdavyAsakRuShNara |

pAda paMkaja niruta ninnaya caraNakAnamipE || 26 ||


naMdadali saugaMdhikava tara |

laMdu pOgalu BImarUpada |

laMdadiMdAMjaneya kuvarana bAla dharisadalE |

kuMdidaMdadi tOriside A |

naMdatIratha danujamOhana |

naMdasAMdrane ninna cariteyu lIle kEvalavO || 27 ||


kuTila kaTumati kaTuka daityara |

kaThiNatara gadeyiMda kuMdisi |

niTilanEtrana nuDigaLiMdAjEya mAyigaLA |

diTane vAgbANagaLa nicayadi |

SaThara viSvAtathada vacanara |

truTiyu mIrade taridu taruNige kusuma nInittE || 28 ||


yugapadadi saMhRuta mahAsura |

rige migilu maNimaMta tAnati |

migilu kOpada vaSaganAgi mahaujasanE ninnA |

bageya janarAMtarake mOhava |

bageva bahuguNapUrNa harige |

viguNa jIvaikyavanu pELuva kumata racisidanU || 29 ||


avana durdhiShaNAnusAradi |

pavanapitage jIvaikyavanu pE |

Luva kuvAdava kelaru salisalu kelaranAdarisE |

pavana nInavatarisi vEgada |

lavaniyoLagA kumati duryyu |

ktyavaniruhagaLa dahisidyaprati dAva samanAgI || 30 ||


amitamahimane ninna vAKyA |

vimala paMcAnana ninAdava |

Bramisi kELuta Bayadi vadari nirASeyali jaridu |

Samita darpAkOparAgi |

Bramadi saMtatarenisi daSadiSe |

gamisi pOdaru mAyi gOmAyigaLu GaLigeyoLU || 31 ||


jaya suSIla supUrNa Saktiye |

jaya gurO janmatrayadalA |

maya vidUranE mAyijanaru vihiMsegoLisidarU |

Baya vidhura nirmala cidAnaMda |

mayane suKasaMdAyi nEtra |

traya muKarigadhipatiye mama suKavIvudAcArya || 32 ||


udayisuva maMdasmitada mRudu |

madhura sallApAKya sudheya |

tyadhika dhArAsEkadiM saMSAMta BavaSOkA |

sadamalara manOnayanadiM saM |

mudadi sEvitavAda ninnaya |

vadanacaMdravaneMdu nA nityadali nODuvenO || 33 ||


mOdatIrthane ninna vacanA |

svAdisuva bahu sukRuti janarA |

gAdha apEkShagaLa harasuta mOdavIyutalI |

sAdaradi SOBisuva ninnaya |

vEda vyAKyAnavanu saMtata |

bOdhapUrNane emma SravaNake gOcarisi salahO || 34 ||


ratunamaya pIThadali kuLitiha |

SatamanIShane BAvi vANI |

patiye ninnanu vaidikAdisu vidyadaBimAnI |

kratuBujaru sEviparu satatadi |

vitata ninnaya cariteyanu dE |

vate samAjadi gaMdharvaru pogaLutiharadakE || 35 ||


janma mRuti nirayAdi Baya BI |

ShaNa kusaMsArAMbunidhiyoL |

muNugidamala suyOgya janaranu nODi karuNadalI |

anila prArthitanAgi ninniM |

danunayadi mAramaNa mannisi |

janisidanu RuShiyiMda vAsaviyudadoLagamalA || 36 ||


adhama janariMdati tirOhita |

sadamalAgama tatige karuNadi |

budharigA mudavAha teradali sUtra racisidanU |

aduButAtma mahAnuBAvani |

geduru migilObbuMTE lOkadi |

badarikASramanilaya vEdavyAsagAnamipE || 37 ||


SrISanAj~jeya dharisi Siradali |

ISa garuDa SacISamuKara di |

vISa prArthane manake taMdu mahAmahima dEvA |

pOShisalu sajjanarigati tvara |

kASyapiyoLagavatarisi nI sa |

dBAShya viracisi KaMDisidi durBAShyagaLanellA || 38 ||


rajatapIThAhvaya puradi nI |

rajaBavane naDusadana nAmaka |

dvijana gRuhadali janisi mahamahimegaLa tOrutalI |

nija turiya ASramava dharisI |

prajarugaLanuddharisalupaniSha |

dvraja suBArata BAShyagaLa racisideyO karuNALU || 39 ||


vaMdisuve suravRuMdavaMdyane |

vaMdisuve jAhnaviya snAnada |

kiMtadhika puNyavanu caraNa sparuSa mALparigE |

poMdisuvanige vaMdisuve Bava |

baMdha harisuta suKava koDuvA |

naMdatIratha ninage aBivaMdisuvenanavaratA || 40 ||


SrISamarutara dAsa guhasuta |

kESava SrI BAratISara |

nI supadyagaLiMda stutisida tA suBakutiyalI |

tOShadiM paThisutta namisuva |

rASegaLa pUraisutIrvaru |

klESarahita sthAnavittu susauKyanuNisuvaru || 41 ||

***