Showing posts with label ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ mahipati. Show all posts
Showing posts with label ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ mahipati. Show all posts

Wednesday, 11 December 2019

ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ ankita mahipati

ಭೀಮಪಲಾಸ ರಾಗ ತೀನ್ ತಾಳ

ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ
ಗುಟ್ಟಿನೊಳು ಕೊಡಬೇಕು ಇಟ್ಟುದೋರುತದ ಮುಕ್ತಿ ||ಪ||

ಕೊಟ್ಟ ಗುರುವಿಗೆ ಮನ ಕೊಳ್ಳಬೇಕು ನಿಜಘನ
ಇಟ್ಟಾದೆ ನಿಜಧನ ಪಡಿಬೇಕು ಸಾಧನ
ಕೊಟ್ಟಾಂಗ ಕೊಂಬು ಖೂನ ಹೇಳಿಕೊಡುವನ ಗುರುಜ್ಞಾನ
ಮುಟ್ಟಿ ಭಜಿಸುದು ಪೂರ್ಣಸ್ವಾಮಿ ಶ್ರೀನಾಥಾರ್ಪಣ ||೧||

ಕೊಟ್ಟು ಕೊಂಡ ನೋಡಿ ನೇಮ ಸೃಷ್ಟಿಯೊಳು ಸುದಾಮ
ಮುಷ್ಟಿ ಅವಲಕ್ಕಿ ಧರ್ಮ ಪಡೆದುಕೊಂಡ ದಿವ್ಯಗ್ರಾಮ
ಕೊಟ್ಟು ಶಾಕದಳವಮ್ಮ ದ್ರೌಪದಿ ಆದಳು ಸಂಭ್ರಮ
ಕೃಷ್ಣಗಿದೆ ಅತಿಪ್ರೇಮ ಶಿಷ್ಟಜನಕ ಸುಕ್ರಮ ||೨||

ಮುಕ್ತಿಗಿದೆ ಮೇಲು ಭಕ್ತಿ ನೋಡಿ ಸಜ್ಜನರ ಯುಕ್ತಿ
ಭೋಕ್ತ ಬಲ್ಲ ಗುರುಮೂರ್ತಿ ಮಾಡಬೇಕು ಭಾವಭಕ್ತಿ
ಮುಕ್ತ ಜನರಿಗಿದೆ ಗತಿಕೊಟ್ಟು ಕೊಂಡಾಡುವ ಶಕ್ತಿ
ಅರ್ತು ಇದೇ ಮಹಿಪತಿ ಕೊಂಡಾಡೊ ಗುರುಸ್ತುತಿ ||೩|
***

ಕೊಟ್ಟು ಕೊಂಡಾಡ ಬೇಕು ಘಟ್ಟಿಕೊಂಡು ಗುರುಭಕ್ತಿ ಗುಟ್ಟಿನೊಳು ನೋಡ ಬೇಕು ಇಟ್ಟು ದೋರುತದ ಮುಕ್ತಿ ಪ


ಕೊಟ್ಟು ಗುರುವಿಗೆ ಮನಕೊಳ್ಳಬೇಕು ನಿಜಘನ ಇಟ್ಟಾದೆ ನಿಜಧನ ಪಡಿಬೇಕು ಸಾಧನ ಕೊಟ್ಟಾಂಗ ಕೊಂಬು ಖೂನ ಹೇಳಿ ಕೊಡುವ ಗುರು ಜ್ಞಾನ ಮುಟ್ಟಿ ಭಜಿಸುದು ಪೂರ್ಣ ಸ್ವಾಮಿ ಶ್ರೀನಾಥಾರ್ಪಣ 1 

ಕೊಟ್ಟು ಕೊಂಡು ನೋಡಿ ನೇಮ ಸೃಷ್ಟಿಯೊಳು ಸುಧಾಮ ಕೊಂಡ ದಿವ್ಯಗ್ರಾಮ ಕೊಟ್ಟು ಶ್ಯಾಖದಳವಮ್ಮ ದ್ರೋಪದ್ಯಾದಳು ಸಂಭ್ರಮ ಕೃಷ್ಣಗಿದೆ ಅತಿ ಪ್ರೇಮ ಶಿಷ್ಟ ಜನರ ಸುಕ್ರಮ 2 

ಮುಕ್ತಿಗಿದೇ ಮೇಲು ಭಕ್ತಿನೋಡಿ ಸಜ್ಜನರ ಯುಕ್ತಿ ಭೋಕ್ತ ಬಲ್ಲ ಗುರುಮೂರ್ತಿ ಮಾಡಬೇಕು ಭಾವ ಭಕ್ತಿ ಮುಕ್ತ ಜನರಿಗಿದೇ ಗತಿ ಕೊಟ್ಟು ಕೊಂಡಾಡುವ ಶಕ್ತಿ ಅರ್ತು ಇದೇ ಮಹಿಪತಿ ಕೊಂಡಾಡೋ ಗುರುಸ್ತುತಿ 3

****