Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಸಾಧನ ಭಾಗ ಸುಳಾದಿ
( ಸಕಲ ಪರಮತದ ಸಾರ ತಿಳಿದು ನಿರಾಕರಿಸುತ್ತ ತಾರತಮ್ಯ ಪಂಚಭೇದವನ್ನು ತಿಳಿದು ಸಾಧನಗೈವ ಹರಿಭಕ್ತರಿಗಾವ ಭಯವಿಲ್ಲ )
ರಾಗ ವರಾಳಿ
ಧ್ರುವತಾಳ
ನಿನಗಲ್ಲದ ಶಿರ ಎಂದಿಗು ಬಲುಭಾರ
ನಿನಗಲ್ಲದ ಅಕ್ಷಿ ಹಾಳ ಗವಾಕ್ಷಿ
ನಿನಗಲ್ಲದ ಕಿವಿ ರಕ್ಷಿಯ ಹಿಂಗಿವಿ
ನಿನಗಲ್ಲದ ಮೂಗು ಹಸಿಯಾಕಾಗೂ
ನಿನಗಲ್ಲದ ವದನ ಲಾಳೀಯ ವದನ
ನಿನಗಲ್ಲದ ನಾಲಿಗೆ ಕೆರಹೀನ ನಾಲಿಗೆ
ನಿನಗಲ್ಲದ ಕರ ಮೊರದ ಬೊಂಬಿಯ ಕರ
ನಿನಗಲ್ಲದ ಪಾದ ನಾಯಿ ನರಿಯ ಪಾದ
ನಿನಗಲ್ಲದ ಗಾತ್ರ ಜೀರ್ಣವಾದ ಪತ್ರ
ನಿನಗಲ್ಲದವಯಂಗಳು ಜನಕಿದ್ದು ಫಲವೇನು
ಬಿನಗಡಿದು ಭೂತಾದಿ ಗಣಕೆ ಕೊಡಲಿಬಹುದು
ಅನಿಲ ನಾಮಕ ನಮ್ಮ ವಿಜಯವಿಠ್ಠಲ ನಿನ್ನ
ನೆನಿಸದಿದ್ದ ಮನುಜ ಅವನೇ ನಿಜ ದನುಜಾ ॥ 1 ॥
ಮಟ್ಟತಾಳ
ಪವಮಾನ ಮತದಲ್ಲಿ ದಿವಾರಾತ್ರಿ ಬಿಡದೆ
ನವವಿಧ ಭಕುತಿ ನವವಿಧ ದ್ವೇಷ
ತ್ರಿವಿಧ ಜೀವಿಗಳ ವಿವರವ ತಿಳಿದು
ಭುವನದೊಳಗೆ ಭೇದವನೈದು ತಿಳಿದು ಪೇಳಿ
ನವನೀತ ಹೃದಯದವನಾಗಿ ಇದ್ದೂ
ತ್ರಿವಿಕ್ರಮ ವಿಜಯವಿಠ್ಠಲನ
ಸವಿಯಾದ ನಾಮ ಕವಿಯಾಗಿ ನೆನೆದು
ಸವಿಯದ ಪದವಿ ಸವಿಗೊಳದವನ್ನ
ಅವನೀಗ ಜೀವ ನಾಶವನೆ ಕಾಣಿರೋ
ಅವನಿಯೊಳು ತ್ರಿಭುವನದೊಳಗೆ ॥ 2 ॥
ತ್ರಿವಿಡಿತಾಳ
ಹರಿ ನಿನ್ನ ಪರದೈವವೆಂದು ತಿಳಿಯದವನು
ಹೊರಗಿನವಗೆ ಜನನವೆಂಬೊದು ಶತಸಿದ್ಧ
ಹರಿ ನಿನ್ನ ದ್ವೇಷವ ಮಾಳ್ಪನ ಮೊಗನೋಡೆ
ಮರಳೆ ರವಿಯ ನೋಡದಲೆ ಶುಚಿಯಿಲ್ಲ
ಹರಿ ಮರುತನ ದ್ರೋಹಿಗಳ ಮಂದಿರದಲ್ಲಿ
ಮರದು ನೀರು ಕೊಳಲು ಚರಿಸು ಚಾಂದ್ರಾಯಣ
ಹರಿನಾಮ ವಿಜಯವಿಠ್ಠಲ ನಿನ್ನ ಪಾದವ
ಸ್ಮರಿಸದ ಹಿರಿಯನು ಬಲುಕಾಲದ ಗೂಗಿ ॥ 3 ॥
ಅಟ್ಟತಾಳ
ವಾರ ವಾರಕ್ಕೆ ಆಚಾರವಂತನಾಗಿ
ವೀರ ವೃತಗಳ ಪಾರವ ಚರಿಸಿ
ಮೂರೇಳು ಸಾರಿಗೆ ವಾರಣಾಸೀ ಪುಣ್ಯ
ತೀರಥಗಳ ಮಿಂದಾರಾಧನೆಯ ಮಾಡಿ
ನಾರಾಯಣಂಗೆ ತಾರತಮ್ಯದಿಂದ
ನೀರೆರದು ಉದ್ಧಾರನಾಗದಿರೇ
ನೀರ ಮೇಲೆ ಬರವ ರಚಿಸಿದಂತೇ
ತೋರದೆ ಸತ್ಕರ್ಮ ಹಾರಿ ಪೋಗುವದಯ್ಯಾ
ಧಾರುಣ ನಾಮಕ ವಿಜಯವಿಠ್ಠಲ ನಿನ್ನ
ಕಾರುಣ್ಯ ಪಡೆದರೆ ತೃಣ ಒಂದು ಮೇರು ॥ 4 ॥
ಆದಿತಾಳ
ಆ ಕಪರ್ದಿ ಮುನಿ ಪೋಗಿ ತಾ ಕಪಟದಿಂದಲಿ
ಪಾಂಡು ಕುಮಾರನಲ್ಲಿ ಗ್ರಾಸ ಬೇಕೆಂದು ಎಡಿಗಡಿಗೆ
ಹಾ ಕೃಷ್ಣನೆಂದು ಪಾಂಚಾಲಕುಮಾರಿ ಕರಿಯೆ ಸ್ವಲ್ಪ
ಶಾಕದಳವುಂಡು ತಾನೇಕ ಜನ ತೃಪ್ತಿ ಬಡಿಸಿ
ಲೋಕದೊಳಗೆ ಪೂರ್ಣ ಕಮಲಾಕಾಂತನು ವಲಿಯೆ
ಆಪತ್ತು ಕಡಿಗೆ ಮಾಡಿ ಪುಣ್ಯ
ತೂಕವೆನಿಸುವ ಮೇರುವಿಗೆ
ಆಖಂಡ ಪುರುಷನಾಮ ವಿಜಯವಿಠ್ಠಲರೇಯನ
ಯಾಕೆ ಭಜಿಸದೆ ಲೋಕ ಶೋಕಿಸುವರು ನರಕದಲ್ಲಿ ॥ 5 ॥
ಜತೆ
ಘಾಳಿಗೆ ಬೆವರಿಲ್ಲ ನಿನ್ನವರಿಗೆ ಕೇಡಿಲ್ಲ
ವ್ಯಾಳ ವಿಜಯವಿಠ್ಠಲ ನಿನ್ನ ಬಿಟ್ಟವ ಕೆಟ್ಟ ॥
***********
ಸಕಲ ಪರಮತದ ಸಾರ ತಿಳಿದು ನಿರಾಕರಿಸುತ್ತ ತಾರತಮ್ಯ ಪಂಚಭೇಧವನ್ನು ತಿಳಿದು ಸಾಧನಗೈವ ಹರಿಭಕ್ತರಗಾವ ಭಯವಿಲ್ಲ ಎಂದು ತಿಳಿಸುವ ಸುಳಾದಿ.
ರಾಗ-ವರಾಳಿ ಧ್ರುವತಾಳ
ನಿನಗಲ್ಲದ ಶಿರ ಎಂದಿಗು ಬಲುಭಾರ|
ನಿನಗಲ್ಲದ ಅಕ್ಷಿ ಹಾಳ ಗವಾಕ್ಷಿ|
ನಿನಗಲ್ಲದ ಕಿವಿ ರಕ್ಷಿಯ ಹಿಂಗಿವಿ|
ನಿನಗಲ್ಲದ ಮೂಗು ಹಸಿಯಾಕಾಗೂ|
ನಿನಗಲ್ಲದ ವದನ ಲಾಳೀಯ ವದನ|
ನಿನಗಲ್ಲದ ನಾಲಿಗೆ ಕೆರಹೀನ ನಾಲಿಗೆ ನಿನಗಲ್ಲದ ಕರ ಮೊರದ ಬೊಂಬಿಯಕರ|
ನಿನಗಲ್ಲದ ಪಾದ ನಾಯಿ ನರಿಯ ಪಾದ ನಿನಗಲ್ಲದ ಗಾತ್ರ ಜೀರ್ಣವಾದ ವಸ್ತ್ರ|
ನಿನಗಲ್ಲದವಯಂಗಳು ಜನಕ್ಕಿದು ಫಲವೇನು|
ಬಿನಗಡಿದು ಭೂತಾದಿ ಗಣಕೆ ಕೊಡಲಿಬಹುದು|
ಅನಿಲ ನಾಮಕ ನಮ್ಮ ವಿಜಯ ವಿಠ್ಠಲ ನಿನ್ನ
ನೇಣಿಸದಿದ್ದ ಮನುಜ ಅವನೇ ನಿಜ ದನುಜಾ||೧||
ಮಟ್ಟತಾಳ
ಪವಮಾನ ಮತದಲ್ಲಿ ದಿವರಾತ್ರಿ ಬಿಡದೆ|
ನವವಿಧ ಭಕುತಿ
ನವ ವಿಧ ದ್ವೇಷ ತ್ರಿವಿಧ ಜೀವಿಗಳ ವಿವರವ ತಿಳಿದು|
ಭುವನದೊಳಗೆ
ಭೇದವನಾಯ್ಡು (ತಿಳಿ ) ಪೇಳಿ|
ನವನೀತ ಹೃದಯದವನಾಗಿ ಇದ್ದೂ|
ತ್ರಿವಿಕ್ರಮ ವಿಜಯ ವಿಠ್ಠಲನ್ನ|
ಸವಿಯಾದ ನಾಮ ಕವಿಯಾಗಿ ನೆನೆದು ಸವಿಯದ ಪದವಿ ಸವಿಗೊಳದವನ್ನ ಅವನೀಗಾ ಜೀವ ನಾಶವನೆ ಕಾಣಿರೋ|
ಅವನಿಯೊಳು ತ್ರಿಭುವನದೊಳಗೆ||೨||
ತ್ರಿವಿಡಿತಾಳ
ಹರಿ ನಿನ್ನ ಪರದೈವವೆಂದು ತಿಳಿಯದವನು|
ಹೊರಗಿನವಗೆ ಜನನವೆಂಬೊದು ಶತಸಿದ್ಧ|
ಹರಿ ನಿನ್ನ ದ್ವೇಷವ ಮಾಳ್ಪನ ಮೊಗನೋಡೆ|
ಮರಳೆ ರವಿಯ ನೋಡದಲೆ ಶುಚಿಯಿಲ್ಲ|
ಹರಿ ಮಾರುತನ ದ್ರೋಹಿಗಳ
ಮಂದಿರದಲ್ಲಿ| ಮರದು ನೀರು ಕೊಳಲು ಚರಿಸು ಚಾಂದ್ರಾಯಣ|
ಹರಿನಾಮ ವಿಜಯವಿಠ್ಠಲ ನಿನ್ನ ಪಾದವ |
ಸ್ಮರಿಸದ ಹಿರಿಯನು ಬಹುಕಾಲ ಗೂಗಿ||೩||
ಅಟ್ಟತಾಳ
ವಾರ ವಾರಕ್ಕೆ ಆಚಾರವಂತನಾಗಿ|
ವೀರ ವೃತಗಳ ಪಾರವ ಚರಿಸಿ|
ಮೂರೇಳು ಸಾರಿಗೆ ವಾರಣಾಸೀ ಪುಣ್ಯ|
ತೀರಥಗಳ ಮಿಂದಾರಾಧನೆಯ ಮಾಡಿ ನಾರಾಯಣಂಗೆ ತಾರತಮ್ಯದಿಂದ | ನೀರೆರದು ಉದ್ಧಾರನಾಗದಿರೇ|
ನೀರ ಮೇಲೆ ಬರವ ರಚಿಸಿದಂತೇ|
ತೋರದೆ ಸತ್ಕರ್ಮ ಹಾರಿ ಹೋಗುವದಯ್ಯಾ|
ಧಾರುಣ ನಾಮಕ ವಿಜಯವಿಠ್ಠಲ ನಿನ್ನ|
ಕಾರುಣ್ಯ ಪಡೆದರೆ ತೃಣವಂದು ಮೇರು||೪||
ಆದಿತಾಳ
ಆಕವರ್ದಿ ಮುನಿ ಪೋಗಿ ತಾಕಪಟದಿಂದಲಿ ಪಾಂಡು ಕುಮಾರನಲ್ಲಿ ಗ್ರಾಹಸಬೇಕೆಂದು ಎಡಿಗಡಿಗೆ|
ಹಾ ಕೃಷ್ಣನೆಂದು ಪಾಂಚಾಲಕುಮಾರಿ ಕರಿಯೆ ಸ್ವಲ್ಪು|
ಶಾಕದಳವುಂಡು ತಾನೇಕ ಜನ ತೃಪ್ತಿಪಡಿಸಿ|
ಲೋಕದೊಳಗೆ ಪೂರ್ಣ ಕಮಲಾಕಾಂತನವಲಿಮೆ ಆಪ|
ತ್ತು ಕಡಿಗೆ ಮಣ್ಯ ತೂಕವೆನಿಸುವ ಮೇರುವಿಗೆ|
ಆಖಂಡ ಪುರುಷನಾಮ ವಿಜಯ ವಿಠ್ಠಲರೇಯನ ಯಾಕೆ ಭಜಿಸದೆ ಲೋಕಶೋಕಿಸುವದು ನರಕದಲ್ಲಿ||೫||
ಜತೆ
ಘಾಳಿಗೆ ಬೆವರಿಲ್ಲ| ನಿನ್ನವ (ರಿ) ಗೆ ಕೇಡಿಲ್ಲ|
ವ್ಯಾಳ ವಿಜಯ ವಿಠ್ಠಲ ನಿನ್ನ ಬಿಟ್ಟವ ಕೆಟ್ಟ||೬||
***********