Showing posts with label ಮೂರ್ಖರಾದರು ಜನರು ಇವರು ಲೋಕದೊಳಗೆ purandara vittala. Show all posts
Showing posts with label ಮೂರ್ಖರಾದರು ಜನರು ಇವರು ಲೋಕದೊಳಗೆ purandara vittala. Show all posts

Thursday, 5 December 2019

ಮೂರ್ಖರಾದರು ಜನರು ಇವರು ಲೋಕದೊಳಗೆ purandara vittala

ಪುರಂದರದಾಸರು
ರಾಗ ಮುಖಾರಿ. ಝಂಪೆ ತಾಳ 

ಮೂರ್ಖರಾದರು ಜನರು ಲೋಕದೊಳಗೆ ||ಪ||
ಏಕ ದೇವನ ಬಿಟ್ಟು ಕಾಕು ದೈವವ ಭಜಿಸಿ ||ಅ.ಪ||

ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖ
ಗಂಟನೊಬ್ಬರ ಕೈಯಲಿಡುವಾತ ಮೂರ್ಖ
ನೆಂಟರಿಗೆ ಸಾಲವನು ಕೊಡುವಾತ ಮೂರ್ಖ, ಜನ-
ಕಂಟಕನಾಗಿರುವ ಕಡು ಮೂರ್ಖನಯ್ಯ ||

ಪಡೆದ ಮಕ್ಕಳ ಮಾರಿ ಒಡಲ ಪೊರೆವವ ಮೂರ್ಖ
ಮಡದಿ ಹುಟ್ಟಿದ ಮನೆಯಲಿರುವವನು ಮೂರ್ಖ
ಬಡತನವು ಬಂಡಾಗ ಬೈದುಕೊಂಬುವ ಮೂರ್ಖ
ದೃಢ ಭಕ್ತಿಯಿಲ್ಲದವ ಕಡು ಮೂರ್ಖನಯ್ಯ ||

ಮುಪ್ಪಿನಲಿ ಮದುವೆಯನು ಮಾಡಿಕೊಂಬುವ ಮೂರ್ಖ
ಸರ್ಪನಲಿ ಸರಸವಾಡುವನೆ ಮೂರ್ಖ
ಇಪ್ಪತ್ತ ಒಂದು ಕುಲ ಉದ್ಧರಿಸದವ ಮೂರ್ಖ
ಅಪ್ಪ ರಂಗಯ್ಯನ ಭಜಿಸದವ ಮೂರ್ಖ||

ರಾಮ ನಾಮವ ಭಜಿಸಿ ನೆನೆಯದವ ಮೂರ್ಖ
ಹೇಮವನು ಗಳಿಸಿ ಉಣದವನು ಮೂರ್ಖ
ಕಾಮದಲಿ ಹಿರಿಯಳ ಕೂಡಿಕೊಂಡವ ಮೂರ್ಖ
ಭೂಮಿದಾನವ ತೆಗೆದ ಭೂಪತಿಯು ಮೂರ್ಖ||

ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖ
ಭೂಸುರರಿಗನ್ನವನು ಕೊಡದವನು ಮೂರ್ಖ
ಶೇಷಗಿರಿ ಕೃಷ್ಣನ ಭಜಿಸದಿದ್ದವ ಮೂರ್ಖ
ದಾಸನಾಗದ ಮನುಜ ಕಡು ಮೂರ್ಖನಯ್ಯ||

ಸತ್ತ ಕರುವಿನ ತಾಯ ಹಾಲ ಕರೆವವ ಮೂರ್ಖ
ಒತ್ತೆಯಿಲ್ಲದೆ ಸಾಲ ಕೊಡುವವನು ಮೂರ್ಖ
ಹತ್ತೆಂತು ಬಗೆಯಲ್ಲಿ ಹಂಬಲಿಸುವವ ಮೂರ್ಖ
ಹೆತ್ತ ತಾಯಿಯ ಬೈವ ಕಡು ಮೂರ್ಖನಯ್ಯ||

ಸ್ವಾಮಿ ನಾಮವ ಬಿಡದೆ ಭಜಿಸದಿದ್ದವ ಮೂರ್ಖ
ಸ್ವಾಮಿ ಗುರುಹಿರಿಯರಿಗೆ ಎರಗದವ ಮೂರ್ಖ
ನೇಮದಲಿ ಹರಿಯ ಕಥೆಯ ಕೇಳದವ ತಾ ಮೂರ್ಖ
ತಾಮಸರ ಕೂಡಿ ಕೊಂಬವನೆ ಕಡು ಮೂರ್ಖ||

ಉಂಡ ಮನೆಗೆರಡನ್ನು ಬಗೆಯುವಾತನೆ ಮೂರ್ಖ
ಕೊಂಡೆ ಮಾತನು ಕೇಳಿ ಕುಣಿವವನು ಮೂರ್ಖ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನ
ಕೊಂಡಾಡಿ ಭಜಿಸದವ ಕಡು ಮೂರ್ಖನಯ್ಯ||
***

pallavi

mUrkharAdaru janaru lOkadoLage

anupallavi

Eka dEvana biTTu kAku daivava bhajisi

caraNam 1

oNDeyali heNDatiya biDuvAtanE mUrkha gaNTanobbara kaiyaliDuvAta mUrkha
neNTarige sAlavanu koDuvAda mUrkha jana kaNTakanAgiruva kaDu mUrkhanayya

caraNam 2

paDeda makkaLa mAri oDala porevava mUrkha maDadi huTTida maneyaliruvavanu mUrkha
baDatanavu bandAga baidukombuva mUrkha drDha bhaktiyilladava kaDu mUrkhanayya

caraNam 3

muppinali maduveyanu mADikombuva mUrkha sarpanali sarasavADuvane mUrkha
ippattavondu kula uddharisidava mUrkha appa rangayyana bhajisadava mUrkha

caraNam 4

rAma nAmava bhajisi neneyadava mUrkha hEmavanu gaLisi uNadavanu mUrkha
kAmadali hariyaLanu kUDikoNDava mUrkha dur-nAmavanu kombAda kaDu mUrkhanayya

caraNam 5

kAshiyali dEhavanu toLeyadiddava mUrkha bhUsurarigannavanu koDadavanu mUrkha
shESagiri krSNanna bhajisadiddava mUrkha dAsanAgada manuja kaDu mUrkhanayya

caraNam 6

satta karuvina tAya hAla karevava mUrkha otteyillade sAla koDuvavanu mUrkha
hatteNTu bageyalli hambalisuvava mUrkha hetta tAyiya baiva kaDu mUrkhanayya

caraNam 7

svAmi nAmava biDade bhajisadiddava mUrkha svAmi guru hariyarige eragadava mUrkha
nEmadali hariya katheya kELadava tA mUrkha tAmasara kUDi kombavane kaDU mUrkhanayya

caraNam 8

unDa manegeraDannu bageyuvAtane mUrkha koNDe mAtanu kELi kuNivavanu mUrkha
puNDarIkAkSa shrI purandara viTTalana koNDADi bhajisadava kaDU mUrkhanayya
***

ಮೂರ್ಖರಾದರು ಇವರು ಲೋಕದೊಳಗೆ 
ಏಕದೈವವ ಬಿಟ್ಟು ಕಾಕುದೈವವ ಭಜಿಸಿ ಪ.

ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖಗಂಟನೊಬ್ಬನ ಕೈಯಲಿಡುವವನೆ ಮೂರ್ಖನಂಟರಿಗೆ ಸಾಲವನು ಕೊಡುವಾತ ಮೂರ್ಖ - ಜಗಕಂಟಕನಾದವನು ಕಡು ಮೂರ್ಖನಯ್ಯಾ 1

ಮುಪ್ಪಿನಲಿ ಹೆಂಡತಿಯ ಮಾಡಿಕೊಂಬವ ಮೂರ್ಖಸರ್ಪನಲಿ ಗಾರುಡವ ನಡಸುವನೆ ಮೂರ್ಖಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖಅಪ್ಪ ರಂಗಯ್ಯನನು ನೆನೆಯದವ ಮೂರ್ಖ 2

ಸತ್ತ ಕರುವಿನ ತಾಯ ಹಾಲು ಕರೆವವ ಮೂರ್ಖಒತ್ತೆಯಿಲ್ಲದೆ ಸಾಲ ಕೊಡುವವನೆ ಮೂರ್ಖಹತ್ತೆಂಟು ಬಗೆಯಲಿ ಹಂಬಲಿಸುವವ ಮೂರ್ಖಹೆತ್ತ ತಾಯ್ ಬೈವವನು ಕಡು ಮೂರ್ಖನಯ್ಯ 3

ಪಡೆದ ಮಗಳನುಮಾರಿ ಒಡಲಹೊರೆವವ ಮೂರ್ಖಮಡದಿ ಹುಟ್ಟಿದ ಮನೆಯೊಳಿರುವವನೆ ಮೂರ್ಖಬಡತನವು ಬಂದರೆ ಬಯಸಿಕೊಂಬವ ಮೂರ್ಖದೃಡಬುದ್ಧಿಯಿಲ್ಲದವ ಕಡು ಮೂರ್ಖನಯ್ಯ 4

ರಾಮನಾಮವ ಸ್ಮರಿಸದಿದ್ಧಾತನೇ ಮೂರ್ಖಹೇಮವನು ಗಳಿಸಿ ಉಣದಿದ್ದವನೆ ಮೂರ್ಖನೇಮದಲಿ ಹಿರಿಯರನು ನೋಡದವ ಮೂರ್ಖ ದುರ್ನಾಮವನು ಕೊಂಬಾತ ಕಡು ಮೂರ್ಖನಯ್ಯ 5

ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖಭೂಸೂರರಿಗನ್ನವನು ಕೊಡದವನೆ ಮೂರ್ಖಶೇಷಪತಿ ಕೃಷ್ಣನ ನೆನೆಯದವ ಮೂರ್ಖಹರಿದಾಸನಾಗಿರದವನು ಕಡು ಮೂರ್ಖನಯ್ಯ 6

ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖಕೊಂಡೆಯವ ಪೇಳಿ ತಿರುಗುವವ ಮೂರ್ಖಪುಂಡರೀಕಾಕ್ಷ ಶ್ರೀ ಪುರಂದರವಿಠಲನಕೊಂಡು ಭಜಿಸದ ಮನುಜ ಕಡು ಮೂರ್ಖನಯ್ಯ 7
*********