ರಾಗ ಪೂರ್ವಿಕಲ್ಯಾಣಿ ಆದಿತಾಳ
ಅಡಿಗಳಿಗೊಂದಿಪೆ ಪುರಂದರ ಗುರುವೆ ॥ ಪ ॥
ಕಡು ಜ್ಞಾನ-ಭಕ್ತಿ-ವೈರಾಗ್ಯದ ನಿಧಿಯೆ ॥ ಅ.ಪ ॥
ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ।
ಗುರು ವ್ಯಾಸರಾಯರಿಂದುಪದೇಶಗೊಂಡೆ ॥
ಎರಡೆರಡು ಲಕ್ಷದಿಪ್ಪತೈದು ಸಾವಿರ ।
ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ॥ 1 ॥
ಗಂಗಾದಿ ಸಕಲ ತೀರ್ಥಂಗಳ ಚರಿಸಿ ತು - ।
ರಂಗವದನ ವೇದವಾಸ್ಯನ ॥
ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ ।
ಮಂಗಳ ಮಹಿಮೆಯ ನುತಿಸಿ ನುತಿಸಿ ನಾ ॥ 2 ॥
ನಿನ್ನತಿಶಯಗುಣ ವರ್ಣಿಸಲಳವಲ್ಲ ।
ನಿನ್ನ ಸೇವಕನ ಸೇವಕನೆಂತೆಂದು ॥
ಪನ್ನಗಶಯನ ಮುಕುಂದ ಕರುಣ ಪ್ರ - ।
ಸನ್ನ ವಿಜಯವಿಠ್ಠಲ ಸಂಪನ್ನ ॥ 3 ॥
***
pallavi
aDigaLandipe purandara guruvE
anupallavi
kadu jnAna bhakti vairAgyada nudhiye
caraNam 1
vara madhvamata kSIrAmbudhige candranade guru vyAsarAyarindupadEshagoNDe
eraDeraDu lakSIdippattaidu sAvira vara nAmALi mADi harige arpisside
caraNam 2
gangAd sakala tIrthangaLa carisi turanga vadana vEdavyAsara
hingade manadalli mereva mangaLa mahimeyanutisi nutisi nA
caraNam 3
ninnatishaya guNa varNisallaLavalla ninna sEvakana sEvakanentendu
pannaga shayana mukunda karuNa prasanna vijayaviThala sampanna
***
ಅಡಿಗಳಿಗೊಂದಿಪೆ ಪುರಂದರಗುರುವೆ ||ಪ||
ಕಡುಜ್ಞಾನಭಕ್ತಿವೈರಾಗ್ಯದ ನಿಧಿಯೆ ||ಅ||
ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ
ಗುರು ವ್ಯಾಸರಾಯರಿಂದುಪದೇಶಗೊಂಡೆ
ಎರಡೆರಡು ಲಕ್ಷದಿಪ್ಪತ್ತೈದು ಸಾವಿರ
ವರನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||೧||
ಗಂಗಾದಿ ಸಕಲ ತೀರ್ಥಂಗಳ ಚರಿಸಿದೆ
ರಂಗವದನ ವೇದವ್ಯಾಸನ
ಹಿಂಗದೆ ಮನದಲ್ಲಿ ನೆನೆದು ನೆನೆದು ಮೆರೆವ
ಮಂಗಳಮಹಿಮೆಯ ನುತಿಸಿ ನುತಿಸಿ ನಾ ||೨||
ನಿನ್ನತಿಶಯಗುಣ ವರ್ಣಿಸಲಳವಲ್ಲ
ನಿನ್ನ ಸೇವಕನ ಸೇವಕನೆಂತೆಂದು
ಪನ್ನಗಶಯನ ಮುಕುಂದ ಕರುಣ ಪ್ರ-
ಸನ್ನ ವಿಜಯವಿಠಲ ಸಂಪನ್ನ ||೩||
*******