" ಶ್ರೀ ಸ್ವಾಮಿರಾಯಾಚಾರ್ಯ ಮುತ್ತಗಿ (1837-1918)".... (gurujagannatha vittala ankita)
ಹಗಳಿರಲು ಭಜಿಸಿರೋ
ರಘುಪ್ರೇಮತೀರ್ಥರನು ।
ಬಗೆ ಬಗೆಯ ಸುಖಗಳನು
ಕೊಡುವರಿವರು ।। ಪಲ್ಲವಿ ।।
ದಾನ ಧರ್ಮಗಳಲ್ಲಿ ।
ಭಾನುಜಗನು ನೆನಿಸಿ ।
ಮಾನಸ ಪೂಜೆಯಲಿ ನಿರುತರಾಗಿ ।।
ಏನು ಹೇಳಲಿ ಇವರ
ಮಹಿಮೆಯ ಅಲ್ಪರಿಗೆ ।
ಏನೇನು ತೋರದೋ
ಜ್ಞಾನಿಗಲ್ಲದಲೆ ।। ಚರಣ ।।
ಯಾದವಗಿರಿಯಲ್ಲಿ
ಬಂದ ಹರಿ ಭಕ್ತರಿಗೆ ।
ಆದರೂಪಚಾರವನು
ಮಾಡುತ ಅವರುಗಳ ।
ಬಾಧೆಗಳ ಪರಿಹರಿಸಿ ।।
ಮೋದವನು
ಕೊಡುವಂಥ ಸಾಧು ।
ಯತಿಗಳಿವರು
ಸಂದೇಹವಿಲ್ಲ ।। ಚರಣ ।।
ಸೃಷ್ಟಿ ಲಯ ಚಿಂತನೆಯ
ಗುಟ್ಟಾಗಿ ಮಾಡುತ ।
ದಿಟ್ಟ ಮನಸ್ಸಿನಿಂದ
ಕುಳಿತುಕೊಂಡು ।
ಸೃಷ್ಟಿ ಒಡೆಯಾ ಶ್ರೀ -
ತಿರುಮಲಾಪುರ ವಾಸನಲ್ಲಿ ।
ಮನಸಿಟ್ಟು ಹರಿ ಪದವನ್ನೇ -
ಸೇರಿದವರಿವರು ।। ಚರಣ ।।
***