ಲಕ್ಷ್ಮೀದೇವಿ
ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆಅಂಬುಜಾಯತಾಂಬಕನ ಇಂಬಲಿಹ ಬೊಂಬೆ ಪ.
ಕಾವನಯ್ಯನ ಭಟರ ಕಾವೆ ವರವೀವೆದೇವಾದಿ ದೇವರ್ಕಳಿಗೆ ಕುಲದ ದೇವೆ ವಿ?ಭಾವಕರ ಜೀವೆ ಚಿದ್ಭವನೈದಿಸುವೆಸೇವಕರಾವೆ ಕಾಯಿ ಎನುವೆ ಧನ್ಯ ಎನುವೆ 1
ಮಾಯಾಗುಣಮಯ ಅಂಬಾ ತರುವ ಹೊಂದಿರುವೆತಾಯಂದಿರಖಿಳಾರ್ಥ ತಾಯಿ ನೀನೀವೆಬಾಯೆನ್ನ ತಾಯೆನ್ನಲಾಯಾಸ ಬಿಡಿಸುವೆ ಎನ್ನಯ ಪ್ರಿಯಳೆ ಪೀಯೂಷನುಣಿಸುವೆ 2
ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮಸುಮ್ಮನಸರ ಮನೋರಮ್ಮೆ ಶ್ರೀರಮ್ಮೆನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮನಮ್ಮಯ ಪ್ರಸನ್ನವೆಂಕಟನ ಮೆಚ್ಚಿನಮ್ಮ 3
***