Showing posts with label ರಂಗಧಾಮ ಭುಜಂಗ ಶಯನ ಮಂಗಳಾತ್ಮಕನೆ ಶ್ರೀಶನೆ ankita kamalanabha vittala. Show all posts
Showing posts with label ರಂಗಧಾಮ ಭುಜಂಗ ಶಯನ ಮಂಗಳಾತ್ಮಕನೆ ಶ್ರೀಶನೆ ankita kamalanabha vittala. Show all posts

Thursday, 5 August 2021

ರಂಗಧಾಮ ಭುಜಂಗ ಶಯನ ಮಂಗಳಾತ್ಮಕನೆ ಶ್ರೀಶನೆ ankita kamalanabha vittala

 ..

kruti by Nidaguruki Jeevubai


ರಂಗಧಾಮ ಭುಜಂಗ ಶಯನ

ಮಂಗಳಾತ್ಮಕನೆ ಶ್ರೀಶನೆ ಪ


ಗಂಗಾಜನಕ ಉತ್ತುಂಗ ಮಹಿಮನೆ

ಸಂಗರಹಿತನೆ ಭಂಗಹರಿಪನೆ ಅ.ಪ


ಶ್ರೀಶ ನಿನ್ನನು ಪ್ರಾರ್ಥಿಪರಘ ಶೋಧಿಸೆನುತ

ಶ್ರೀ ಸಮೇತರಾಗಿ ಭಕ್ತರ ಪೋಷಿಸೆನ್ನುತ

ವಾಸುದೇವ ಅನಂತಮಹಿಮ ಶ್ರೀಶನೆನ್ನುತ

ದಾಸರೆಲ್ಲರು ಘೋಷಿಸುವರು ಶೇಷಶಯನ ರಕ್ಷಿಸೆನುತ 1


ಸಾಧುಜನ ಹೃದಯವಾಸನೆನ್ನುತ ಪೇಳ್ವರೊ

ಸಾಧನ ಜೀವರಿಗೆ ಪರಮಪ್ರಿಯನೆಂಬರೊ

ಮೋದತೀರ್ಥ ಸುಧಾರಸ ಸೇವಿಸಿರೆಂಬರೋ

ಆದಿ ಪುರುಷ ಅನಾದಿ ಅನಂತ ಮಹಿಮನೆಂಬರೊ2

ಅಕ್ಷಯಗುಣ ಪೂರ್ಣಸರ್ವರ ರಕ್ಷಿಸೆನ್ನುತಲಿ

ಲಕ್ಷ್ಮಿಪತಿಯೆ ಪ್ರಾರ್ಥಿಸುವೆನು ಈಕ್ಷಿಸೆನುತಲಿ

ಪಕ್ಷಿವಾಹನವೇರಿ ಮೆರೆವ ಅದೋಕ್ಷಜನೆನುತಲಿ

ರಕ್ಷ ಶಿಕ್ಷಕನೆಂದು ಪೇಳ್ವರೋ ನಿತ್ಯ ನಿತ್ಯದಲಿ 3


ಶೋಭನ ಗುಣನೆಂದು ನಿನ್ನಸುರರು ಪಾಡಲು

ಶೋಭಿಪ ನಿನ್ನ ರೂಪ ಹೃದಯದಲಿ ಕಾಣಲು

ಶೋಭಕೃತು ಸಂವತ್ಸರದಲಿ ನಿನ್ನ ಪಾಡಲು

ಶೋಭನಂಗಳನ್ನೆ ಕೊಡುವ ಸ್ವಾಮಿ ಎನ್ನಲು 4


ಕಡಲಶಯನ ಮೃಡನ ಸಖನೆ ಬಿಡದೆ ರಕ್ಷಿಸು

ತಡೆಯದೆ ನಿನ್ನ ಚರಣ ಸ್ಮರಣೆ ಬಿಡದೆ ಕರುಣಿಸು

ಬಿಡದಲೇ ಬಹಮನದ ತಾಪವೆಲ್ಲ ನೀಗಿಸು

ಕಡಲೊಡೆಯನೆ ಕಮಲನಾಭ ವಿಠ್ಠಲ ಪಾಲಿಸು 5

***