ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನೊಳು ನ್ಯೂನವಾರಿಸದೇ ಸಲಹಯ್ಯಾ ಪ
ಕಾಮಕ್ರೋಧ ಸಂಗವ ಮಾಡೀ | ತಾಮಸ ಲೋಭದಿ ಮೋಹವ ಕೂಡಿ | ತಾಮದ ಮತ್ಸರದಲಿ ಬೆರೆದಾಡೀ | ನೇಮದಿಗೆಟ್ಟೆ ವೃಥಾಯಕ1
ವಿಷಯೇಂದ್ರಿಯ ಸುಖ ವಿಷಯೆಂದರಿಯದೆ | ವಿಷಯದಿ ನಿಸಿದಿನಗಳೆದೆನು ಹರಿಯೇ | ಕುಶಲದ ಕರ್ಮದ ದಾರಿಯ ವಿಡಿಯೆ | ಘಸಣಿಗೆ ಬಿದ್ದೆನು ಭವದಿಂದ2
ತಂದೆ ಮಹಿಪತಿ ನಂದನ ಪ್ರಾಣಾ | ಮುದದಿ ಕೈಯನು ಪಿಡಿಯಲೋ ಪೂರ್ಣಾ | ಛಂದದಿ ತೋರಿಸಿ ನಾಮದ ಖೂನಾ | ಇಂದಿಗೆ ಧನ್ಯನ ಮಾಡು3
***