ಸುವ್ವಿ ಸುವ್ವಾಲಿ |
ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ|| ||ಪ||
ಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ
||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ
ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದು ಬುಧ ಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆ ಗೊಂಬುವರು||
ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||
ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ
ಮೃತ್ತಿಕೆ ಮಾಲೆ ಅಂಗಾರ ದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||
ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನು ಕೇಳಿ | ಸುವ್ವಿ
***