Showing posts with label ಳಳ- RSS- ಒಂದುಗೂಡಿ ಬನ್ನಿ ನಾಡ others ONDUGOODI BANNI NAADA rss. Show all posts
Showing posts with label ಳಳ- RSS- ಒಂದುಗೂಡಿ ಬನ್ನಿ ನಾಡ others ONDUGOODI BANNI NAADA rss. Show all posts

Friday, 24 December 2021

ಒಂದುಗೂಡಿ ಬನ್ನಿ ನಾಡ others ONDUGOODI BANNI NAADA rss



RSS song  


ಒಂದುಗೂಡಿ ಬನ್ನಿ ನಾಡಸೇವೆಗೆ

ಶುದ್ಧಮನದಿ ಶ್ರದ್ಧೆಯಿಂದ ಗೈವಪೂಜೆಗೆ ||

ಬದ್ಧರಾಗಿ ದಿವ್ಯಧ್ಯೆಯ ಆದರ್ಶಕೆ

ಸಿದ್ಧರಾಗಿ ಸರ್ವಸ್ವ ನೈವೇದ್ಯಕೆ || ||ಪ||


ನಮ್ಮ ಬೆವರು ರಕ್ತವ ತೈಲದಂತೆ ಎರೆಯುವಾ

ನಾಡಗುಡಿಯ ಬೆಳಗಲು ಬತ್ತಿಯಂತೆ ಉರಿಯುವಾ

ಕತ್ತಲನ್ನು ಕರಗಿಸಿ ಸುತ್ತ ಬೆಳಕ ಮೂಡಿಸಿ

ಮನದಿ ಮನೆಯ ಮಾಡಿದಂಥ ಮೌಡ್ಯವನ್ನು ತೊಲಗಿಸಿ ||೧||


ಸುಮ್ಮನಿರದೆ ಕಾರ್ಯಕಾಗಿ ಸತತಕಾಯ ಸವೆಸುವಾ

ಹೆಮ್ಮೆಯಿಂದ ಒಮ್ಮನದಲಿ ಗುರಿಯ ಕಡೆಗೆ ಚಲಿಸುವಾ

ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಜಗ್ಗದೆ

ವಿರೋಧಕೆಂದೂ ಬಗ್ಗದಂಥ ಗಟ್ಟಿತನವ ಗಳಿಸುವಾ ||೨||


ಬಿದ್ದ ಜನರ ಮುಗ್ಧತೆಯನು ದುರುಪಯೋಗ ಪಡಿಸಿಹ

ವಿವಿಧ ಅಮಿಷಗಳೋಡ್ಡಿ ತಪ್ಪುದಿಶೆಗೆ ನಡೆಸಿಹ |

ನಯವಂಚಕ ನರಿಗಳ ಕಿತ್ತುಬಿಸುಟು ಸೋಗನು

ವಿಫಲಗೊಳಿಸಿ ಕೃತಕವೇಷ ಧರಿಸಿದವರ ಸಂಚನು || ||೩||


ಸೇವೆಯೊಂದೆ ದಾರಿದೀಪ ಪತಿತ ಜನರ ಬಾಳಿಗೆ

ಸೇವೆಯೊಂದೆ ದಿವ್ಯಮಂತ್ರ ದಿಟದಿ ನಮ್ಮ ಪಾಲಿಗೆ

ಸೇವೆಯಿಂದ ದೂರಗೊಳಿಸಿ ಉಚ್ಚನೀಚ ಭಿನ್ನತೆ

ಸೇವೆಯಿಂದ ಗಳಿಸಬನ್ನಿ ಮಾತೃಭುವಿಗೆ ಮಾನ್ಯತೆ || ||೪||

***

oMdugUDi banni nADasEvege

Suddhamanadi SraddheyiMda gaivapUjege ||

baddharAgi divyadhYeya AdarSake

siddharAgi sarvasva naivEdyake || ||pa||


namma bevaru raktava tailadaMte ereyuvA

nADaguDiya beLagalu battiyaMte uriyuvA

kattalannu karagisi sutta beLaka mUDisi

manadi maneya mADidaMtha mouDyavannu tolagisi ||1||


summanirade kAryakAgi satatakAya savesuvA

hemmeyiMda ommanadali guriya kaDege calisuvA

sOliniMda kuggade savAlugaLige jaggade

virOdhakeMdU baggadaMtha gaTTitanava gaLisuvA ||2||


bidda janara mugdhateyanu durupayOga paDisiha

vividha amiShagaLODDi tappudiSege naDesiha |

nayavaMcaka narigaLa kittubisuTu sOganu

viPalagoLisi kRutakavESha dharisidavara saMcanu || ||3||


sEveyoMde dAridIpa patita janara bALige

sEveyoMde divyamaMtra diTadi namma pAlige

sEveyiMda dUragoLisi uccanIca Binnate

sEveyiMda gaLisabanni mAtRuBuvige mAnyate || ||4||

***

ಒಂದುಗೂಡಿ ಬನ್ನಿ ನಾಡ ಸೇವೆಗೆ

ಶುದ್ಧ ಮನದಿ ಶ್ರದ್ಧೆಯಿಂದ ದೈವ ಪೂಜೆಗೆ ---೨

ಬದ್ಧರಾಗಿ ದಿವ್ಯಧ್ಯೇಯ ಆದರ್ಶಕೆ

ಸಿದ್ಧರಾಗಿ ಸರ್ವಸ್ವ ನೈವೇದ್ಯಕೆ ||ಒಂದು ||


ನಮ್ಮ ಬೆವರು ರಕ್ತವ ತೈಲದಂತೆ ಎರೆಯಿವ

ನಾಡಗುಡಿಯ ಬೆಳೆಗಲು ಬತ್ತಿಯಂತೆ ಉರಿಯುವ ---೨

ಕತ್ತಲನ್ನು ಕರಗಿಸಿ ಸುತ್ತ ಬೆಳಕ ಮೂಡಿಸಿ

ಮನದಿ ಮನೆಯ ಮಾಡಿದಂತ ಮೌಢ್ಯವನ್ನು ತೊಲಗಿಸಿ ||ಒಂದು||


ಸುಮ್ಮನಿರದೆ ಕಾರ್ಯಕಾಗಿ ಸತತ ಕಾಯ ಸವೆಸುವ

ಹೆಮ್ಮೆಯಿಂದ ಒಮ್ಮನದಲ್ಲಿ ಗುರಿಯ ಕಡೆಗೆ ಚಲಿಸುವ ---೨

ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಜಗ್ಗದೆ

ವಿರೋಧಕೆಂದು ಬಗ್ಗದಂತ ಗಟ್ಟಿತನವ ಗಳಿಸುವ ||ಒಂದು||


ಸೇವೆಯೊಂದೇ ದಾರಿದೀಪ ಪತಿತಜನರ ಬಾಳಿಗೆ

ಸೇವೆಯೊಂದೇ ದಿವ್ಯಮಂತ್ರ ದಿಟದಿ ನಮ್ಮ ಪಾಲಿಕೆ ---೨

ಸೇವೆಯಿಂದ ದೂರಗಳಿಸಿ ಉಚ್ಚನೀಚ ಬಿನ್ನತೆ

ಸೇವೆಯಿಂದ ಗಳಿಸಬನ್ನಿ ಮಾತೃಭುವಿಗೆ ಮಾನ್ಯತೆ 

***